ಮೈಸೂರು: ಮೈಸೂ ರಿನ ಅಪೋಲೋ ಬಿಜಿಎಸ್ ಆಸ್ಪತ್ರೆ ಹಿಂಭಾಗ ಜಯನಗರ (ಮಳಲವಾಡಿ) ದಲ್ಲಿ ನಿರ್ಮಿಸಿರುವ ಹೊಸ ಕೋರ್ಟ್ ಕಾಂಪ್ಲೆಕ್ಸ್ ಕಟ್ಟಡಕ್ಕೆ 15 ನ್ಯಾಯಾಲಯಗಳು ಸ್ಥಳಾಂತರಗೊಂಡಿವೆ.
ಚಾಮರಾಜಪುರಂನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಟ್ಟಡದಲ್ಲಿ ನಡೆಯುತ್ತಿದ್ದ ವಿವಿಧ 15 ಕೋರ್ಟುಗಳ ಕಲಾಪಗಳು ಇಂದಿನಿಂದ ಹೊಸ ಕಟ್ಟಡ ದಲ್ಲಿ ಆರಂಭವಾದವು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶ ಸುರೇಶ್ ಕೆ.ವಂಟಿಗೋಡಿ ಅವರು ಇಂದು ಟೇಪು ಕತ್ತರಿಸುವ ಮೂಲಕ ಕೋರ್ಟ್ ಕಲಾಪ ವನ್ನು ಉದ್ಘಾಟಿಸಿದರು.
ಪ್ರಧಾನ ಕುಟುಂಬ ನ್ಯಾಯಾಲಯ, ಪ್ರಥಮ ಹೆಚ್ಚುವರಿ ಪ್ರಧಾನ ಕುಟುಂಬ ನ್ಯಾಯಾಲಯ, ಸೆಕೆಂಡ್ ಅಡಿಷನಲ್ ಪ್ರಿನ್ಸಿಪಾಲ್ ಫ್ಯಾಮಿಲಿ ಕೋರ್ಟ್ 3 ಮತ್ತು 4ನೇ ಹೆಚ್ಚುವರಿ ಪ್ರಧಾನ ಕುಟುಂಬ ನ್ಯಾಯಾಲಯ, ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ಜಡ್ಜ್ ಮತ್ತು ಜುಡಿಷಿಯಲ್ ಮ್ಯಾಜಿಸ್ಟ್ರೇಟ್, ಎಫ್‍ಎಎಸ್‍ಸಿಜೆ ಅಂಡ್ ಸಿಜೆಎಂ ಕೋರ್ಟ್, ಎಸ್‍ಎಎಸ್‍ಸಿಜೆ ಅಂಡ್ ಸಿಜೆಎಂ ಕೋರ್ಟ್, 4ನೇ ಎಸ್‍ಸಿಜೆ ಅಂಡ್ ಜೆಎಂ-ಪ್ರಥಮ ದರ್ಜೆ (ಜೆಎಂಎಫ್‍ಸಿ) ಕೋರ್ಟ್, ಸೆಕೆಂಡ್ ಸಿವಿಲ್ ಜಡ್ಜ್ ಅಂಡ್ ಜೆಎಂಎಫ್‍ಸಿ ಕೋರ್ಟ್, ಅಡಿಷನಲ್ ಸೆಕೆಂಡ್ ಸಿವಿಲ್ ಜಡ್ಜ್ ಅಂಡ್ ಜೆಎಂಎಫ್‍ಸಿ ಕೋರ್ಟ್, 2, 3 ಮತ್ತು 4ನೇ ಜೆಎಂಎಫ್‍ಸಿ ನ್ಯಾಯಾ ಲಯಗಳು ಹೊಸ ಕೋರ್ಟ್ ಕಾಂಪ್ಲೆಕ್ಸ್ ನಲ್ಲಿ ಇಂದಿನಿಂದ ಕಾರ್ಯ ನಿರ್ವಹಿಸು ತ್ತಿವೆ. ಲೋಕೋಪಯೋಗಿ ಇಲಾಖೆ ಯಿಂದ ಮೈಸೂರಿನ ಮಳಲವಾಡಿಯಲ್ಲಿ ನಿರ್ಮಿಸಿರುವ 5 ಮಹಡಿಗಳ ನ್ಯಾಯಾ ಲಯದ ಸಂಕೀರ್ಣ ಕಟ್ಟಡವನ್ನು ಅಂದಿನ ರಾಜ್ಯ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಅವರು 2015ರ ಮಾ.3ರಂದು ಉದ್ಘಾಟಿಸಿದ್ದರು.
ಕೋರ್ಟ್ ಆವರಣದಲ್ಲಿ ಕುಡಿಯಲು ಶುದ್ಧ ನೀರಿನ ಘಟಕ, ವಾಹನ ನಿಲುಗಡೆ ಸ್ಥಳ, ಹಸಿರು ಹುಲ್ಲಿನ ಹಾಸು, ಕ್ಯಾಂಟೀನ್, ಕಾರಂಜಿ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಬೀದಿ ದೀಪಗಳು, ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಕಸ ಹಾಕಲು ಡಸ್ಟ್ ಬಿನ್ ಗಳನ್ನು ಒದಗಿಸಲಾಗಿದೆ. ಪ್ರತ್ಯೇಕ ಆಲ್ಟರ್ ನೇಟಿವ್ ಡಿಸ್‍ಮ್ಯಾಟ್ ರಿಡ್ರೆಸಲ್ (ಎಡಿಆರ್) ಕೇಂದ್ರ, ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಧ್ಯಸ್ಥಿಕೆ ಕೇಂದ್ರ ಹಾಗೂ ಖಾಯಂ ಲೋಕ ಅದಾಲತ್ ಗಳೂ ಕಕ್ಷಿದಾರರ ಸೇವೆಗೆ ಹೊಸ ಕೋರ್ಟ್ ಕಾಂಪ್ಲೆಕ್ಸ್‍ನಲ್ಲಿವೆ. ಆವರಣ ದಲ್ಲಿ ವಕೀಲರ ಭವನ ನಿರ್ಮಿಸಲಾಗಿದೆ. ಸಿಸಿಟಿವಿ ಕ್ಯಾಮರಾಗಳು, ತುರ್ತು ಅಗ್ನಿ ದುರಂತಗಳು ಸಂಭವಿಸಿದಾಗ ನಿಭಾಯಿ ಸಲು ಫೈರ್ ಪಂಪ್ ಹೌಸ್, ಭದ್ರತಾ ಕೊಠಡಿಗಳು, ಸುಸಜ್ಜಿತ ಶೌಚಾಲಯ ಗಳು, ಲಿಫ್ಟ್ ಸೌಲಭ್ಯವನ್ನೂ ಅಲ್ಲಿ ಪೂರೈಸ ಲಾಗಿದೆ. ಫೆ.25ರಿಂದ ಇನ್ನೂ ಎರಡು ಕೋರ್ಟುಗಳು ಮಳಲವಾಡಿ ಕೋರ್ಟ್ ಕಾಂಪ್ಲೆಕ್ಸ್‍ನಲ್ಲಿ ಕಾರ್ಯಾಚರಣೆ ಮಾಡ ಲಿವೆ. ಮೈಸೂರಿನ ಕಾರ್ಮಿಕ ನ್ಯಾಯಾ ಲಯ ಹಾಗೂ ಇಂಡಸ್ಟ್ರಿಯಲ್ ಟ್ರಿಬ್ಯುನಲ್ ಗಳು ಹೊಸ ಕೋರ್ಟ್ ಕಾಂಪ್ಲೆಕ್ಸ್‍ಗೆ ಸ್ಥಳಾಂ ತರಗೊಳ್ಳಲಿವೆ. ಬೆಂಗಳೂರಿನ ಹೈಕೋರ್ಟ್ ಕಟ್ಟಡದ ವಿನ್ಯಾಸದಲ್ಲಿ ನಿರ್ಮಿಸಿರುವ ಮಳಲ ವಾಡಿ ಹೊಸ ನ್ಯಾಯಾಲಯ ಸಂಕೀರ್ಣ ಕಟ್ಟಡಕ್ಕೆ ಕೆಂಪು ಬಣ್ಣ ಬಳಿಯಲಾಗಿದ್ದು, ನೋಡಲು ಸುಂದರವಾಗಿ ಕಾಣುತ್ತಿದೆ.