ಫೆ.24, 25ರಂದು ಮೈಸೂರಲ್ಲಿ ಮಿನಿ ಉದ್ಯೋಗ ಮೇಳ
ಮೈಸೂರು

ಫೆ.24, 25ರಂದು ಮೈಸೂರಲ್ಲಿ ಮಿನಿ ಉದ್ಯೋಗ ಮೇಳ

February 19, 2019

ಮೈಸೂರು: ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಫೆ.24 ಮತ್ತು 25ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮಟ್ಟದ ಮಿನಿ ಉದ್ಯೋಗ ಮೇಳದ ವೆಬ್‍ಸೈಟ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆ ನಿವಾ ರಿಸುವುದಕ್ಕೆ ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಹೆಚ್ಚು ಒತ್ತು ನೀಡಿದೆ. ಇದರ ಅಂಗವಾಗಿ ಈ ಮಿನಿ ಉದ್ಯೋಗ ಮೇಳ ಆಯೋಜಿಸುತ್ತಿದ್ದು, 6 ಸಾವಿರಕ್ಕೂ ಹೆಚ್ಚು ಮಂದಿ ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.

ಎರಡು ದಿನಗಳು ನಡೆಯುವ ಮಿನಿ ಉದ್ಯೋಗ ಮೇಳ ಫೆ.24ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಹಾಗೂ ಫೆ.25ರಂದು 10ರಿಂದ ಸಂಜೆ 4ರವರೆಗೆ ನಡೆಯಲಿದೆ. ಮೇಳದಲ್ಲಿ ಜುಬಿಲಿಯೆಂಟ್ಸ್, ಯುರೇಕಾ ಫೋರ್ಬ್ಸ್, ಜೆಕೆ ಟೈರ್ಸ್ ಸೇರಿದಂತೆ ಮೈಸೂರು, ಚಾಮರಾಜನಗರ ಜಿಲ್ಲೆಗಳ ಹಾಗೂ ಬೆಂಗಳೂರು ಮೂಲದ 50ಕ್ಕೂ ಹೆಚ್ಚು ಕಂಪನಿ ಗಳು ಪಾಲ್ಗೊಳ್ಳುತ್ತಿವೆ. 10ನೇ ತರಗತಿ ಅನುತ್ತೀರ್ಣರಾ ದವರು ಸೇರಿದಂತೆ ಸ್ನಾತಕೋತ್ತರ ಪದವಿ ಹಾಗೂ ತಾಂತ್ರಿಕ ಶಿಕ್ಷಣ ಪಡೆದ ನಿರುದ್ಯೋಗಿಗಳು ಭಾಗವಹಿಸಬಹುದಾಗಿದೆ ಎಂದು ಸಚಿವರು ವಿವರಿಸಿದರು.

ಇದೀಗ ತಾನೆ ಚಾಲನೆ ನೀಡಲಾಗಿರುವ ವೆಬ್‍ಸೈಟ್‍ಗೆ ಭೇಟಿ ನೀಡಿ ಭಾಗವಹಿಸಲಿಚ್ಛಿಸುವ ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳು ಇಬ್ಬರೂ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ವೆಬ್‍ಸೈಟ್‍ನಲ್ಲಿ ಆಧಾರ್ ಕಾರ್ಡ್ ವಿವರ ಸೇರಿದಂತೆ ಸ್ವವಿವರ ನಮೂದಿಸಿದರೆ ಶೈಕ್ಷಣಿಕ ಅರ್ಹತೆ ಮೇರೆಗೆ ಯೂನಿಕ್ ಕೋಡ್ ಅನ್ನು ಎಸ್‍ಎಂಎಸ್ ಅಥವಾ ಇ-ಮೇಲ್ ಮೂಲಕ ತಲುಪಿಸಲಾಗುವುದು. ಮೇಳ ದಲ್ಲಿ ಪಾಲ್ಗೊಳ್ಳುವ ವೇಳೆ ಈ ಕೋಡ್ ವಿವರ ಹೊಂದಿದ ಎಸ್‍ಎಂಎಸ್ ಅಥವಾ ಇ-ಮೇಲ್ ಮಾಹಿತಿಯನ್ನು ನೀಡ ಬೇಕಾಗುತ್ತದೆ. ಆನ್‍ಲೈನ್ ನೋಂದಣಿ ಮಾಡಲು ಸಾಧ್ಯ ವಾಗದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸ್ಥಳದಲ್ಲೂ ನೋಂದಣಿಗೆ ಅವಕಾಶ ಮಾಡುತ್ತಿದ್ದು, ಇದ ಕ್ಕಾಗಿ 15 ಕೌಂಟರ್‍ಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು. ಸಂದರ್ಶನ ನಡೆಸಲು ಅನುಕೂಲ ಕಲ್ಪಿಸಲು ಕಂಪನಿಗಳಿಗೆ 50 ಮಳಿಗೆಗಳನ್ನು ನಿರ್ಮಿಸಲಾಗುವುದು. ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಲು ಅನು ಕೂಲವಾಗುವಂತೆ ಅಂದಿನ ಎರಡೂ ದಿನಗಳಲ್ಲಿ ಕೆಎಸ್‍ಆರ್ ಟಿಸಿ ಸಂಸ್ಥೆ ನಗರ ಮತ್ತು ಗ್ರಾಮಾಂತರ ಸಾರಿಗೆಯನ್ನು ಹೆಚ್ಚುವರಿ ವ್ಯವಸ್ಥೆ ಮಾಡಲಾಗುವುದು. ಮಹಾರಾಜ ಕಾಲೇಜು ಮೈದಾನದಲ್ಲಿ ತಾತ್ಕಾಲಿಕ ಶೌಚಾಲಯ ಸೇರಿದಂತೆ ಅಗತ್ಯ ವಿರುವ ಎಲ್ಲಾ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದರು.

18 ಲಕ್ಷ ರೂ. ಅನುದಾನ: ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಜಂಟಿ ನಿರ್ದೇ ಶಕ ಎನ್.ಎಸ್.ಶಿವಣ್ಣ ಮಾತನಾಡಿ, ಎರಡು ಜಿಲ್ಲಾ ವ್ಯಾಪ್ತಿಯ ಈ ಉದ್ಯೋಗ ಮೇಳಕ್ಕಾಗಿ ರಾಜ್ಯ ಸರ್ಕಾರ 18 ಲಕ್ಷ ರೂ. ಅನುದಾನ ನೀಡಿದೆ. 18ರಿಂದ 35 ವರ್ಷ ವಯೋಮಿತಿಯ ಪುರುಷ ಮತ್ತು ಮಹಿಳಾ ಅಭ್ಯರ್ಥಿ ಮೇಳದಲ್ಲಿ ಭಾಗ ವಹಿಸಬಹುದು. ಜೊತೆಗೆ ಅಂಗವಿಕಲ ಅಭ್ಯರ್ಥಿಗಳು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಕಳೆದ ಬಾರಿ ಮೈಸೂರಿನ ಮಹಾರಾಜ ಕಾಲೇಜು ಮೈದಾನ ದಲ್ಲಿ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿ ಸಿದ್ದ 14,045 ಉದ್ಯೋಗಾಕಾಂಕ್ಷಿಗಳ ಪೈಕಿ 4,597 ಅಭ್ಯರ್ಥಿಗಳು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿ ದ್ದರು. ಐದು ಜಿಲ್ಲಾ ವ್ಯಾಪ್ತಿಗೆ ಅನುಗುಣವಾಗಿ ಆಯೋ ಜಿಸಿದ್ದ ಹಿನ್ನೆಲೆಯಲ್ಲಿ 1.25 ಕೋಟಿ ರೂ. ವೆಚ್ಚದ ಅನುದಾನ ವನ್ನು ರಾಜ್ಯ ಸರ್ಕಾರ ಕಲ್ಪಿಸಿತ್ತು ಎಂದರು.

ಉದ್ಘಾಟನೆ: ಫೆ.24ರಂದು ಬೆಳಿಗ್ಗೆ 10ಕ್ಕೆ ಕೌಶಲ್ಯಾಭಿವೃದ್ಧಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಉಪಸ್ಥಿತರಿರುವರು ಎಂದು ಎನ್.ಎಸ್.ಶಿವಣ್ಣ ತಿಳಿಸಿದರು. ಎಡಿಸಿ ಬಿ.ಆರ್.ಪೂರ್ಣಿಮ, ಕೌಶಲ್ಯಾಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ಜಿಲ್ಲಾ ಉದ್ಯೋ ಗಾಧಿಕಾರಿ ಡಿ.ಎಂ.ರಾಣಿ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »