ಪ್ರಾದೇಶಿಕ ಉದ್ಯೋಗ ಮೇಳ ಪೂರ್ವಭಾವಿ ಸಭೆ
ಮೈಸೂರು

ಪ್ರಾದೇಶಿಕ ಉದ್ಯೋಗ ಮೇಳ ಪೂರ್ವಭಾವಿ ಸಭೆ

January 25, 2020

ಮೈಸೂರು: ಮಂಡ್ಯ, ಮಡಿ ಕೇರಿ ಸೇರಿದಂತೆ ಮೈಸೂರಿನಲ್ಲಿ ಆಯೋ ಜಿಸಿರುವ ಪ್ರಾದೇಶಿಕ ಮಟ್ಟದಉದ್ಯೋಗ ಮೇಳ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮ ಅವರ ಅಧ್ಯಕ್ಷತೆ ಯಲ್ಲಿ ಶುಕ್ರವಾರ ಡಿಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಈವೇಳೆ ಎಡಿಸಿ ಪೂರ್ಣಿಮ ಮಾತ ನಾಡಿ, ಮಂಡ್ಯ, ಮಡಿಕೇರಿ ಒಳಗೊಂಡಂತೆ ಮೈಸೂರನ್ನು ಕೇಂದ್ರಿಕರಿಸಿ ಪ್ರಾದೇಶಿಕ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಉದ್ಯೋಗ ಮೇಳಕ್ಕೆ ಬರುವ ಅಭ್ಯರ್ಥಿ ಗಳಿಗೆ ಸಾರಿಗೆ ಸೌಲಭ್ಯ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಅಲ್ಲದೆ ಅಭ್ಯರ್ಥಿಗಳು ಹಾಗೂ ಉದ್ಯೋಗ ದಾತರಿಗೆ ಆಹಾರ ಒದಗಿಸಬೇಕು ಎಂದು ಹೇಳಿದರು. ಮೈಸೂರಿನಲ್ಲಿ ಆಯೋಜನೆ ಮಾಡಿರುವ ಉದ್ಯೋಗ ಮೇಳದಲ್ಲಿ ಮಂಡ್ಯ ಹಾಗೂ ಮಡಿಕೇರಿಯ ವಿವಿಧ ಇಲಾಖೆ ಅಧಿಕಾರಿಗಳ ಒಟ್ಟಿಗೆ ಉಪಸಮಿತಿ ರಚಿಸಿ, ಹೆಚ್ಚಿನ ಮಟ್ಟದಲ್ಲಿ ಪ್ರಚಾರ ನೀಡುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ಜರುಗು ವಂತೆ ಕ್ರಮ ವಹಿಸಬೇಕು ಎಂದರು.

ಕಳೆದ ಬಾರಿ ಉದ್ಯೋಗ ಮೇಳದಲ್ಲಿ ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಕೆಲವು ಕಂಪನಿಗಳು ಉದ್ಯೋಗ ನೀಡಲು ನಿರಾ ಕರಿಸಿವೆ. ಇದರಿಂದ ಉದ್ಯೋಗ ಮೇಳ ದಲ್ಲಿ ಭಾಗವಹಿಸುವ ಅಭ್ಯರ್ಥಿಗಳಲ್ಲಿ ನಿರಾ ಸಕ್ತಿ ಮೂಡುತ್ತದೆ ಎಂದು ಅಧಿಕಾರಿ ಯೊಬ್ಬರು ಗಮನ ಸೆಳೆದರು. ಇದಕ್ಕೆ ಪ್ರತಿ ಕ್ರಿಯಿಸಿದ ಅಪರ ಜಿಲ್ಲಾಧಿಕಾರಿ, ಅಭ್ಯರ್ಥಿ ಗಳನ್ನು ಆಯ್ಕೆ ಮಾಡಿ ಉದ್ಯೋಗ ನೀಡದ ಕಂಪನಿಗಳನ್ನು ಪಟ್ಟಿ ಮಾಡಿ ಪ್ರತ್ಯೇಕ ಸಭೆ ನಡೆಸಲಾಗುವುದು. ಈ ಬಾರಿ ಅಂತಹ ಘಟನೆ ಮರುಕಳಿಸದಂತೆ ಕ್ರಮ ಜರುಗಿಸ ಲಾಗುವುದು ಎಂದು ಭರವಸೆ ನೀಡಿದರು.

ಉದ್ಯೋಗ ಮೇಳ ಆಯೋಜನೆ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದೆ. ಆದ್ದರಿಂದ ಶಿಷ್ಠಾಚಾರದಂತೆ ಜಿಲ್ಲೆಗಳ ಸಚಿ ವರು, ಶಾಸಕರು ಹಾಗೂ ಸಂಸದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಕೌಶ ಲಾಭಿವೃದ್ಧಿ ಅಧಿಕಾರಿ ಎನ್.ಎಸ್. ಶಿವಣ್ಣ, ಎಸಿಪಿ ಪೂರ್ಣಚಂದ್ರ ತೇಜಸ್ವಿ, ಕೈಗಾ ರಿಕಾ ತರಬೇತಿ ಮತ್ತು ಇಲಾಖೆಯ ಜಂಟಿ ನಿರ್ದೇಶಕ ರವಿಶಂಕರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಿ.ಕೆ. ಕೃಷ್ಣಯ್ಯ, ಉದ್ಯೋಗ ವಿನಿಮಯ ಇಲಾಖೆ ಸಹಾಯಕ ನಿರ್ದೇಶಕಿ ಡಿ.ಎಂ.ರಾಣಿ, ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇ ಶಕಿ ಬಿ.ಎನ್.ನಾಗರತ್ನ, ಕಾಲೇಜು ಶಿಕ್ಷಣ ಇಲಾಖೆ ಸಹ ನಿರ್ದೇಶಕಿ ಎಚ್.ಎನ್. ಪ್ರಮೀಳಾ ಇನ್ನಿತರರು ಸಭೆಯಲ್ಲಿದ್ದರು.

Translate »