ಉದ್ಯೋಗ ಮೇಳದ ಸದ್ಬಳಕೆಗೆ ಗಣೇಶ್ ಪ್ರಸಾದ್ ಸಲಹೆ
ಚಾಮರಾಜನಗರ

ಉದ್ಯೋಗ ಮೇಳದ ಸದ್ಬಳಕೆಗೆ ಗಣೇಶ್ ಪ್ರಸಾದ್ ಸಲಹೆ

December 21, 2018

ಗುಂಡ್ಲುಪೇಟೆ:  ನಿರುದ್ಯೋಗಿಗಳಿಗೆ ವಿದ್ಯಾರ್ಹತೆಗನುಗುಣ ವಾಗಿ ವಿವಿಧ ಕಂಪನಿಯ ಕೆಲಸವನ್ನು ದೊರ ಕಿಸಲು ಪಟ್ಟಣದಲ್ಲಿ ಡಿ.29ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾ ಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಎಚ್.ಎಂ.ಗಣೇಶ್‍ಪ್ರಸಾದ್ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪ ಡಿಸಲಾಗಿದ್ದ ಉದ್ಯೋಗ ಮೇಳದ ಪ್ರಚಾರ ಪೆÇೀಸ್ಟರ್ ಬಿಡುಗಡೆ ಅವರು ಮಾತನಾಡಿದರು.ಸಹಕಾರ, ಸಕ್ಕರೆ ಮತ್ತು ಜಿಲ್ಲಾ ಉಸ್ತು ವಾರಿ ಸಚಿವರಾಗಿದ್ದ ದಿ.ಎಚ್.ಎಸ್.ಮಹದೇವ ಪ್ರಸಾದ್ ಅವರ 2ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ತಾಲೂಕು ಕಾಂಗ್ರೆಸ್ ಘಟಕ ಮತ್ತು ಮಹದೇವಪ್ರಸಾದ್ ಫೌಂಡೇ ಷನ್‍ನಿಂದ ಸಂಸದ ಆರ್.ಧ್ರುವನಾರಾ ಯಣ್ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಉದ್ಯೋಗ ಮೇಳವನ್ನು ಅಂದು(ಡಿ.29) ಬೆಳಿಗ್ಗೆ 9 ರಿಂದ ಸಂಜೆಯವರೆಗೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮೇಳದÀಲ್ಲಿ ವಿಪೆÇ್ರೀ, ಇನ್ಫೋಸಿಸ್ ಸೇರಿದಂತೆ ಪ್ರಖ್ಯಾತ ಐಟಿ-ಬಿಟಿ ಕಂಪನಿಗಳು ತಮ್ಮ ಸಂಸ್ಥೆಗಳಿಗೆ ಅರ್ಹತೆಯುಳ್ಳ ಉದ್ಯೋಗಿಗ ಳನ್ನು ನೇರವಾಗಿ ಆಯ್ಕೆ ಮಾಡಲಿವೆ. 5,000 ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ದೊರಕ ಲಿದೆ. ಆದ್ದರಿಂದ ಹೆಚ್ಚಿನ ಯುವಕ, ಯುವ ತಿಯರು ಇದರ ಉಪಯೋಗ ಪಡೆದು ಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ ಮಾತ ನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್‍ನಿಂದ ಎರಡನೇ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಕ್ಷೇತ್ರದಲ್ಲಿನ ವಿದ್ಯಾವಂತ ನಿರುದ್ಯೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ವೇಳೆ ಮಾಜಿ ಸಂಸದ ಎ.ಸಿದ್ದರಾಜು, ಚಾಮುಲ್ ಹಾಲು ಒಕ್ಕೂಟದ ನಿರ್ದೇಶಕ ಎಚ್.ಎಸ್.ನಂಜುಂಡ ಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಜಿಪಂ ಸದಸ್ಯ ಬಿ.ಕೆ.ಬೊಮ್ಮಯ್ಯ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೊಡ ಸೋಗೆ ಶಿವಬಸಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ.ಮುನಿರಾಜು, ಪುರಸಭೆ ಸದಸ್ಯರಾದ ಪಿ.ಚಂದ್ರಪ್ಪ, ಬಿ.ವೆಂಕಟಾಚಲ, ಶಶಿಧರ್ (ದೀಪು) ಭಾಗ್ಯಮ್ಮ, ಇಲಿಯಾಸ್, ಅಕ್ಷರ ಫೌಂಡೇಷನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖಸ್ಥ ಕುಮಾರ್‍ಉಪ್ಪಾರ್, ಎಪಿಎಂಸಿ ಅಧ್ಯಕ್ಷ ಪ್ರಭು, ಮುಖಂಡರಾದ ನಟೇಶ್, ದೊಡ್ಡಹುಂಡಿ ನಾಗೇಂದ್ರ, ಎಚ್.ಎನ್.ಬಸ ವರಾಜು ಸೇರಿದಂತೆ ಇತರರು ಇದ್ದರು.

Translate »