ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ
ಚಾಮರಾಜನಗರ

ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ

December 21, 2018

ಚಾಮರಾಜನಗರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕರಿಗಾಗಿ ಮೀಸಲಿಟ್ಟಿ ರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಕಾರ್ಮಿಕರಿಗೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಗುರುವಾರ ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಯಿತು.

ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಪ್ರತಿ ಭಟನಾ ಮೆರವಣಿಗೆ ಆರಂಭಿಸಿದ ಕಾರ್ಮಿ ಕರು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತಲುಪಿ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿ ದರು. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಕಾರ್ಮಿಕ ಇಲಾಖೆಗೆ ಅಧಿ ಕಾರಿ ನೇಮಿಸಬೇಕು. 60 ವರ್ಷ ವಯೋ ಮಾನದ ಕಾರ್ಮಿಕರಿಗೆ ಮಾತ್ರ ವಿಶ್ರಾಂತಿ ವೇತನ ನೀಡಲಾಗುತ್ತಿದೆ. ಇದನ್ನು 50 ವರ್ಷಕ್ಕೆ ಇಳಿಸಬೇಕು. ವಿಶ್ರಾಂತಿ ವೇತನವನ್ನು 3 ಸಾವಿ ರಕ್ಕೆ ಏರಿಸಬೇಕು. ನೋಂದಾಯಿತ ಕಾರ್ಮಿ ಕರಿಗೆ ಕಾರ್ಮಿಕ ಇಲಾಖೆಯಲ್ಲಿ 2 ಲಕ್ಷದ ವರೆವಿಗೆ ನೇರ ಸಾಲ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.

ನೋಂದಾಯಿತ ಕಾರ್ಮಿಕರಿಗೆ ಇಲಾಖೆ ಯಿಂದ ಖಾಲಿ ನಿವೇಶನ ನೀಡಬೇಕು. ಕಾರ್ಮಿ ಕನಲ್ಲದ ಅನೇಕರು ಸೌಲಭ್ಯದ ಆಸೆಗಾಗಿ ಅಕ್ರಮ ನೋಂದಣಿ ಮಾಡಿಸಿರುವುದನ್ನು ಪತ್ತೆಹಚ್ಚಿ ರದ್ದುಪಡಿಸಬೇಕು. ಇಲಾಖೆಯಲ್ಲಿ ಮಧ್ಯ ವರ್ತಿಗಳ ಹಾವಳಿ ತಪ್ಪಿಸಬೇಕು. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಎಸ್‍ಸಿ, ಎಸ್‍ಟಿ ಕಾರ್ಪೋ ರೇಷನ್ ಇತರೆ ಎಲ್ಲಾ ನಿಗಮಗಳಲ್ಲಿ ಸಾಲಸೌ ಲಭ್ಯವನ್ನು ನೋಂದಾಯಿತ ಕಾರ್ಮಿಕರಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ನಿಜಧ್ವನಿ ಗೋವಿಂದರಾಜು, ಮುಖಂಡರಾದ ರಾಮ ಸಮುದ್ರ ಸುರೇಶ್, ಕುಮಾರ, ಮಣಿ, ಸಿದ್ದ ರಾಜು, ಸಣ್ಣಮಾದಯ್ಯ, ಜೆ.ಎಂ.ಮಹ ದೇವು, ಕುಮಾರ್, ವೀರಭದ್ರ, ಮೂರ್ತಿ, ಗಾರೆಚಂದ್ರ, ಸಿ.ಮಹೇಶ, ಗಾಡಿಮಹೇಶ್, ಎಸ್.ಎನ್.ಮಹೇಶ್, ಸೋಮಚಾರಿ, ಮಾದೇ ಗೌಡ್ರು, ಶ್ರೀನಿವಾಸಆಚಾರಿ, ಮೂರ್ತಿ, ಸೋಮ, ಆರ್.ಶಂಕರ್ ಇತರರು ಇದ್ದರು.

Translate »