ಸಾಹಿತಿ ಎಸ್.ಎಲ್.ಭೈರಪ್ಪರಿಗೆ ಮಾನಸ ಪ್ರಶಸ್ತಿ ಪ್ರಕಟ
ಚಾಮರಾಜನಗರ

ಸಾಹಿತಿ ಎಸ್.ಎಲ್.ಭೈರಪ್ಪರಿಗೆ ಮಾನಸ ಪ್ರಶಸ್ತಿ ಪ್ರಕಟ

December 21, 2018

ಕೊಳ್ಳೇಗಾಲ:  ನಗರದಲ್ಲಿ ಡಿ. 21ರಿಂದ 3ದಿನ ಮಾನ ಸೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಎಸ್. ಎಲ್.ಭೈರಪ್ಪ ಅವರಿಗೆ ಮಾನಸ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ದತೇಶ್ ಕುಮಾರ್ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೈರಪ್ಪ ಅವರಿಗೆ ಪ್ರಶಸ್ತಿ ಪ್ರಧಾನವನ್ನು ಹಿರಿಯ ಸಾಹಿತಿ ಡಾ.ಮಲ್ಲೇಶ್ವರಂ ವೆಂಕಟೇಶ್ ಪ್ರಧಾನ ಮಾಡಲಿದ್ದಾರೆ ಎಂದರು. ಡಿ.22ರಂದು ಬೆಳಿಗ್ಗೆ 10 ಗಂಟೆಗೆ ಗುರುವಂದನಾ ಕಾರ್ಯಕ್ರಮ, ಮಧ್ಯಾಹ್ನ 3ಗಂಟೆಗೆ ಕವಿಗೋಷ್ಠಿ ಆಯೋಜಿಸಲಾಗಿದೆ. ಗೋಷ್ಠಿ ಅಧ್ಯಕ್ಷತೆಯನ್ನು ಚಲನ ಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಡಾ.ವಿ.ನಾಗೇಂದ್ರಪ್ರಸಾದ್ ವಹಿಸಲಿದ್ದಾರೆ. ಹನೂರು ಚನ್ನಪ್ಪ. ಶಂಕನಪುರ ಮಹದೇವ ಇನ್ನಿತರ ಗಣ್ಯರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಂಜೆ ಜಾನಪದ ಸಂಜೆ ಹಾಗೂ ಕಿರು ನಾಟಕ ಜರುಗಲಿದೆ. 23ರಂದು ಪ್ರತಿಭಾ ಪುರಸ್ಕಾರ. ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ಸಂಜೆ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.

ರಾಷ್ಟ್ರಪತಿ ಪದಕ ಪುರಸ್ಕøತರಾದ ಎಸಿಪಿ ಗೋಪಾಲ್, ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಡಾ.ಮಹೇಶ್, ರಾಷ್ಟ್ರ ಮಟ್ಟದ ಹಿರಿಯ ಕ್ರೀಡಾಪಟು ರಾಚಪ್ಪಾಜಿ, ರಾಜ್ಯೋತ್ಸವ ಪ್ರಶಸ್ಸಿ ಪುರಸ್ಕøತ ಚನ್ನಮಲ್ಲೇಗೌಡ, ಸಾಹಿತಿ ಶಂಕನಪುರ ಮಹದೇವ, ಮಾದ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಪತ್ರಕರ್ತ ಎಸ್.ಎಂ.ನಂದೀಶ್, ಪಿಎಂಎಸ್‍ಆರ್ ಸಂಸ್ಥೆಯ ಅರ್ನಾಲ್ಡ್, ಯುವ ವಿಜ್ಞಾನಿ ಪ್ರತಾಪ್ ಸೇರಿದಂತೆ ಹಲವು ಸಾಧಕರನ್ನು ಸಮಾರೋಪ ಸಮಾರಂಭದಲ್ಲಿ ಗೌರವಿಸಲಾಗುವುದು. ಮೂರು ದಿನಗಳ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ರಂಗನಾಥ್, ಚನ್ನಶೆಟ್ಟಿ, ಸತ್ಯನಾರಾಯಣ ಇನ್ನಿತರರು ಇದ್ದರು.

ಸಂತ್ರಸ್ತ ಕುಟುಂಬಗಳಿಗೆ 10 ಸಾವಿರ ಪರಿಹಾರ
ಸುಳವಾಡಿ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಸಾವಿಗೀಡಾದ 15 ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಮೂಲಕ ಸಂಸ್ಥೆಯಿಂದ ತಲಾ 10 ಸಾವಿರ ಪರಿಹಾರ ನೀಡಲಾಗುವುದು ಎಂದು ಮಾನಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯ ದರ್ಶಿ ಡಾ.ದತೇಶ್ ಕುಮಾರ್ ಹೇಳಿದರು. ಕಿಚ್‍ಗುತ್ ಮಾರಮ್ಮ ದೇವಾಲಯದ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಭಕ್ತರಿಗೆ ವಿತರಿಸಿದ ಪ್ರಸಾದಕ್ಕೆ ವಿಷ ಬೆರೆಸಿರುವುದು ಖಂಡನೀಯ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

Translate »