ಸುಳವಾಡಿ ವಿಷ ಪ್ರಸಾದ ದುರಂತ ಮೃತರಿಗೆ ಗ್ರಾಮಸ್ಥರಿಂದ ಭಾವಪೂರ್ಣ ಶ್ರದ್ಧಾಂಜಲಿ
ಹಾಸನ

ಸುಳವಾಡಿ ವಿಷ ಪ್ರಸಾದ ದುರಂತ ಮೃತರಿಗೆ ಗ್ರಾಮಸ್ಥರಿಂದ ಭಾವಪೂರ್ಣ ಶ್ರದ್ಧಾಂಜಲಿ

December 21, 2018

ಹನೂರು:  ತಾಲೂಕಿನ ಸುಳವಾಡಿ ಗ್ರಾಮದ ಕಿಚ್ ಗುತ್ ಮಾರಮ್ಮ ದೇವಸ್ಥಾನದಲ್ಲಿ ವಿತರಿ ಸಿದ ವಿಷ ಪ್ರಸಾದ ಸೇವಿಸಿ ದುರಂತ ಸಾವಿ ಗೀಡಾದ 15 ಮಂದಿ ಮೃತರಿಗೆ ಗ್ರಾಮಸ್ಥರು ಹಾಗೂ ಇತರರು ಶ್ರದ್ಧಾಂಜಲಿ ಸಲ್ಲಿಸಿದರು.

ಗ್ರಾಮದ ಬ್ರಹ್ಮೇಶ್ವರ ದೇವಾಲಯದ ಮುಂಭಾಗ ಗುರುವಾರ ನಡೆದ ಶ್ರದ್ಧಾಂ ಜಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಮೃತರ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಪ್ರಮುಖ ನಾಯಕರು ಸೇರಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಬಳಿಕ, ಮೂರು ನಿಮಿಷ ಮೌನಾಚರಣೆ ಮಾಡಿ ಗೌರವ ಸಲ್ಲಿಸಿ ದರು. ಪ್ರಸಾದದಲ್ಲಿ ವಿಷ ಹಾಕಿದ ಪಾಪಿ ಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಒತ್ತಾಯಿ ಸಿದರು. ತಮ್ಮವರನ್ನು ಕಳೆದುಕೊಂಡ ಕುಟುಂಬ ಸ್ಥರು ಕಣ್ಣೀರು ಹಾಕುವ ಮೂಲಕ ಸಾವಿಗೆ ಕಾರಣದವರಿಗೆ ಹಿಡಿಶಾಪ ಹಾಕಿದರು.

ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ರಾಜೇಂದ್ರ ಮಾತನಾಡಿ, ರಾಜಕೀಯ ಪುಡಾರಿಯಾದ ಇಮ್ಮಡಿ ಮಹ ದೇವಸ್ವಾಮಿ ಹುಟ್ಟಿನಿಂದಲೇ ಕ್ರಿಮಿನಲ್ ವ್ಯಕ್ತಿತ್ವ ಉಳ್ಳವರು. ಇವನಿಗೆ ಮಠಗಳೇ ಗೆಸ್ಟ್ ಹೌಸ್‍ಗಳಾಗಿದ್ದವು. ತನ್ನ ತಂದೆ ಲೇ.ವೀರಬಸಪ್ಪ ಅವರನ್ನೇ ತೋಟದ ಮನೆಯಲ್ಲಿ ಗುಲಾಮರನ್ನಾಗಿ ಮಾಡಿ ಕೊಂಡಿದ್ದರು. ಮ.ಬೆಟ್ಟಗಳಲ್ಲಿ ಭಕ್ತರು ತಂದು ಬಿಡುವ ರಾಸುಗಳನ್ನು ರಾತ್ರೋ ರಾತ್ರಿ ಕದ್ದು, ತಮಿಳುನಾಡಿನ ಕಸಾಯಿ ಖಾನೆಗೆ ಮಾರಾಟ ಮಾಡಿದ್ದರು ಎಂದು ಆರೋಪಿಸಿದರು.

ಹುಟ್ಟಿನಿಂದಲೇ ಹೆಣ್ಣುಮಕ್ಕಳ ವಿಚಾರ ದಲ್ಲಿ ತೀರಾ ಹೀನಾಯವಾಗಿ ನಡೆದು ಕೊಳ್ಳುತ್ತಿದ್ದ. ಮಹದೇಶ್ವರ ಮಾರಮ್ಮನ ಹೆಸರಿನಲ್ಲಿ ಹಲವು ದುಷ್ಕøತ್ಯ ವೆಸಗಿದ್ದಾರೆ. ಎಲ್ಲಿಂದಲೋ ಬಂದವಳಿಗೆ ಗ್ರಾಮದಲ್ಲಿ ಇರಲು ಅವಕಾಶ ನೀಡಿದ್ದೇ ತಪ್ಪಾಯಿತು. ಇದರಿಂದಾಗಿ 15 ಜನ ಸಾವನ್ನಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಪೆದ್ದನಪಾಳ್ಯ ಮಣಿ ಮಾತ ನಾಡಿ, ದೇವರ ಹೆಸರಿನಲ್ಲಿ ಅನಾಚಾರ ಅನ್ಯಾಯ ಮಾಡಿರುವ ಅಪರಾಧಿಗಳನ್ನು ತಪ್ಪಿಸಿಕೊಳ್ಳಲು ಬಿಡಬಾರದು. ಅವರನ್ನು ಗಲ್ಲಿಗೇರಿಸಬೇಕು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸುಳವಾಡಿ ಗ್ರಾಮಕ್ಕೆ ಭೇಟಿ ನೀಡಿ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿಬೇಕು ಎಂದು ಒತ್ತಾಯಿಸಿದರು.

ಅಮಾಯಕರ ಜೀವದ ಜೊತೆ ಚೆÀಲ್ಲಾ ಟವಾಡಿದ ನೀಚ ಸ್ವಾಮೀಜಿ ಹಾಗೂ ಅಂಬಿಕಾ, ಮಾದೇಶ್ ಮತ್ತು ದೊಡ್ಡಯ್ಯ ಸೇರಿದಂತೆ ಎಲ್ಲಾ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಅಮಾಯಕ ಕುಟುಂಬ ಗಳಿಗೆ ಸರ್ಕಾರ ಸಾಮಾಜಿಕ ಭದ್ರತೆ ನೀಡ ಬೇಕು. ಸುಳವಾಡಿ ಗ್ರಾಮದಲ್ಲಿ ಸುಸಜ್ಜಿತ ವಾದ ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಬಿದರಹಳ್ಳಿ, ಎಂ.ಜಿ.ದೊಡ್ಡಿ, ವಡ್ಡರ ದೊಡ್ಡಿ, ತೋಮಿಯಾರ್‍ಪಾಳ್ಯ, ದೊಡ್ಡಾಣೆ, ತುಳಸಿಕೆರೆ, ಗೋಡೆಸ್‍ನಗರ, ದೊರೆಸ್ವಾಮಿ ಮೇಡು ಸೇರಿದಂತೆ ವಿವಿಧ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಹನೂರು:  ಗ್ರಾಮದ ಬ್ರಹ್ಮೇಶ್ವರ ದೇವಾಲಯದ ಮುಂಭಾಗ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪ್ರಸಾದ ಸೇವನೆಯಿಂದ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಚೆನ್ನಾಗಿ ಓಡಾಡಿಕೊಂಡಿದ್ದ ನಿಮ್ಮನು ನಾವು ಹೇಗೆ ಮರೆಯುವುದು…? ನಿಮ್ಮಗಳ ಸಾವಿಗೆ ಕಾರಣರಾದವರಿಗೆ ಮಾರಮ್ಮ ದೇವಿ ಕಠಿಣ ಶಿಕ್ಷೆ ನೀಡಲಿ… ನಿಮ್ಮಂತೆ ಅವರು ನರಳಾಡಿ ಸಾಯಲಿ… ಎಂದು ಕುಟುಂಬಸ್ಥರು ರೋಧಿಸಿದ್ದರು. ಪ್ರಸಾದದಲ್ಲಿ ವಿಷವಿಟ್ಟ ಪಾಪಿಗಳಿಗೆ ಮಾರಮ್ಮ ಉಗ್ರ ಶಿಕ್ಷೆ ನೀಡಬೇಕು ಎಂದು ಅವರನ್ನು ಶಪಿಸುತ್ತಾ ಗ್ರಾಮಸ್ಥರು ಕಣ್ಣೀರಿಟ್ಟರು.

Translate »