ಸುಳವಾಡಿಗೆ ಸಚಿವ ಸಾ.ರಾ.ಮಹೇಶ್ ಭೇಟಿ: ಮೃತರ ಕುಟುಂಬಕ್ಕೆ ಸಾಂತ್ವನ
ಚಾಮರಾಜನಗರ

ಸುಳವಾಡಿಗೆ ಸಚಿವ ಸಾ.ರಾ.ಮಹೇಶ್ ಭೇಟಿ: ಮೃತರ ಕುಟುಂಬಕ್ಕೆ ಸಾಂತ್ವನ

December 25, 2018

ಹನೂರು: ಮುಖ್ಯಮಂತ್ರಿಗಳು ಸುಳವಾಡಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಂತೆ ಸೂಚಿಸಿದ ಹಿನ್ನಲೆ ಇನ್ನಷ್ಟು ಸಾವು ನೋವುಗಳು ಸಂಭವಿಸುವುದು ತಪ್ಪಿದೆ ಎಂದು ಪ್ರವಾಸೋದ್ಯಮ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ತಿಳಿಸಿದರು. ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್‍ಗುತ್ತಿ ಮಾರಮ್ಮನ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿಗಳು ಮೃತಪಟ್ಟ ಕುಟುಂಬ ಗಳಿಗೆ ವಿಶೇಷ ಪರಿಹಾರ ನೀಡಿದ್ದಾರೆ. ನೊಂದ ಕುಟುಂಬಗಳಿಗೆ ನೇರವಾಗಿ ಬೇಟಿ ಮಾಡಿ ಅವರಿಗೆ ಸಾಂತ್ವನ ಹೇಳುವ ಸಲು ವಾಗಿ ನಾಳೆ ಮೃತರ ಗ್ರಾಮಗಳಿಗೆ ಆಗಮಿ ಸುತ್ತಿದ್ದಾರೆ. ಈಗಾಗಲೇ ಮೃತಪಟ್ಟಿರುವ 17 ಜನರಿಗೆ ಪರಿಹಾರ ಹಾಗೂ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಚಿಕಿತ್ಸಾ ವೆಚ್ಚ ಭರಿಸುವ ಸಂಬಂಧ ಚರ್ಚಿಸಲಿ ದ್ದಾರೆ. ಈಗಾಗಲೇ ಘಟನೆಗೆ ಕಾರಣರಾ ದವರನ್ನು ಬಂಧಿಸಲಾಗಿದೆ. ಇದರ ಹಿಂದೆ ಯಾರಾದರೂ ಇದ್ದರೆ ಅವರನ್ನು ಕೂಡಲೇ ಬಂಧಿಸಲಾಗುವುದು. ನೊಂದ ಕುಟುಂಬ ಗಳ ಜೊತೆ ತಾವೇ ನೇರವಾಗಿ ಚರ್ಚಿಸಿ ಅವರ ಮುಂದಿನ ಜೀವನಕ್ಕೆ ಅನುಕೂಲ ವಾಗುವ ನಿಟ್ಟಿನಲ್ಲಿ ಚರ್ಚೆ ನಡೆಸುವರು ಎಂದರು. ಘಟನೆ ಸಂಭವಿಸಿದ ಸಂದರ್ಭ ದಲ್ಲಿ ಯಾರೋ ಒಬ್ಬರು ಬರದಿದ್ದರ ಬಗ್ಗೆ ಮಾಧ್ಯಮಗಳು ವರದಿ ಮಾಡಿರು ವುದು ಸರಿಯಲ್ಲ. ಯಾರು ಬರಲಿ ಬರ ದಿರಲಿ ಇಡೀ ಸರ್ಕಾರವೇ ನೊಂದ ಕುಟುಂಬ ಗಳ ಪರವಾಗಿ ನಿಂತಿದೆ ಎಂದು ತಿಳಿಸಿದರು.

ಪ್ರಸಾದ ಸೇವಿಸಿ ಮೃತಪಟ್ಟ ಸುಳವಾಡಿ, ದೊರೆಸ್ವಾಮಿ ಮೇಡು ಹಾಗೂ ಬಿದರ ಹಳ್ಳಿಗೆ ಭೇಟಿ ನೀಡಿ ಮೃತಪಟ್ಟ ಕುಟುಂಬ ಗಳಿಗೆ ಸಾಂತ್ವನ ಹೇಳಿದರು.
ಈ ಸಂದರ್ಭಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಶಾಸಕರಾದ ಎನ್. ಮಹೇಶ್, ಆರ್. ನರೇಂದ್ರ, ಜಿಲ್ಲಾ ಪಂಚಾ ಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಹಾಗೂ ಇತರರು ಇದ್ದರು.
ಬಿಗಿ ಬಂದೋಬಸ್ತ್: ತಾಲೂಕಿನ ಬಿದರ ಹಳ್ಳಿ ಗ್ರಾಮಕ್ಕೆ ನಾಳೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಟಿ ನೀಡು ತ್ತಿರುವ ಹಿನ್ನಲೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.

ಸುಳವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮನ ದೇವಾಲಯದಲ್ಲಿ ಪ್ರಸಾದ ಸೇವಿಸಿ ಮೃತ ಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬಿದರಹಳ್ಳಿ ಗ್ರಾಮದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಬಂದೋಬಸ್ತ್ ಕಲ್ಪಿಸಲಾಗಿದೆ.

Translate »