ರಾಯಚೂರಿನಲ್ಲಿ ಮರಳು ದಂಧೆಕೋರರಿಂದ ಗ್ರಾಮ ಲೆಕ್ಕಾಧಿಕಾರಿ ಹತ್ಯೆ
ಚಾಮರಾಜನಗರ

ರಾಯಚೂರಿನಲ್ಲಿ ಮರಳು ದಂಧೆಕೋರರಿಂದ ಗ್ರಾಮ ಲೆಕ್ಕಾಧಿಕಾರಿ ಹತ್ಯೆ

December 25, 2018

ಚಾಮರಾಜನಗರದಲ್ಲಿ ಸರ್ಕಾರಿ ನೌಕರರ ಪ್ರತಿಭಟನೆ

ಚಾಮರಾಜನಗರ: ರಾಯ ಚೂರು ಜಿಲ್ಲೆ ಮಾನ್ವಿ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟವನ್ನು ತಡೆಯಲು ಯತ್ನಿಸಿದ ಗ್ರಾಮ ಲೆಕ್ಕಾಧಿಕಾರಿ ಮೇಲೆ ಟಿಪ್ಪರ್ ಹರಿಸಿ ಹತ್ಯೆ ಮಾಡಿದ ಘಟನೆ ಯನ್ನು ಖಂಡಿಸಿ ಚಾಮರಾಜನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಅಧ್ಯಕ್ಷ ಆರ್.ರಾಚಪ್ಪ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಡಳಿತ ಭವನದ ಮುಂದೆ ನಡೆದ ಪ್ರತಿಭಟನೆಯಲ್ಲಿ ಹತ್ಯೆಗೀಡಾದ ಗ್ರಾಮ ಲೆಕ್ಕಿಗ ಸಾಹೇಬ್ ಪಟೇಲ್ ಕುಟುಂಬಕ್ಕೆ ತಕ್ಷಣವೇ ಮುಖ್ಯಮಂತ್ರಿಗಳ ವಿಶೇಷ ಪರಿ ಹಾರ ನಿಧಿಯಿಂದ ರೂ 50 ಲಕ್ಷ ನೀಡ ಬೇಕು. ಮೃತರ ಕುಟುಂಬಕ್ಕೆ ಪೊಲೀಸ್ ಇಲಖೆಯಲ್ಲಿರುವ ಪಿಂಚಣಿಯ ಪೂರ್ವ ವೇತನ ನೀಡಬೇಕು. ಮೃತರ ಮಕ್ಕಳ ಸಂಪೂರ್ಣ ವಿದ್ಯಾಬ್ಯಾಸದ ಜವಾಬ್ದಾರಿ ಯನ್ನು ಸರಕಾರವೇ ವಹಿಸಬೇಕು. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಲಾರಿ ಮಾಲೀಕರು ಹಾಗೂ ಮರಳು ಬ್ಲಾಕ್ ಟೆಂಡರ್ ಪಡೆದವರ ಮೇಲೆ ಐಪಿಸಿ 353 ರಂತೆ ಕೂಡಲೇ ಎಫ್‍ಐಆರ್ ದಾಖಲು ಮಾಡಬೇಕು. ಈಗಾಗಲೇ ಎಫ್‍ಐಆರ್ ಮಾಡಿರುವುದನ್ನು ಮಾರ್ಪಡಿಸಿ ತಾಲೂಕು ದಂಡಾಧಿಕಾರಿಗಳೇ ಖುದ್ದು ಪಿರ್ಯಾದಿ ದಾರರಾಗಿ ಪೋಲೀಸ್ ಠಾಣೆಗೆ ದೂರು ದಾಖಲು ಮಾಡಬೇಕು. ರಾಜ್ಯಾದ್ಯಂತ ಗ್ರಾಮ ಲೆಕ್ಕಾಧಿಕಾರಿಗಳ ಜೀವಕ್ಕೆ ಭದ್ರತೆ ಇಲ್ಲದ ಕೆಲಸಗಳಾದ ಅಕ್ರಮ ಮರಳು ತಡೆಯುವುದು, ರಾತ್ರಿ ಕಾಲುವೆ ಕಾಯು ವುದು, ಅಕ್ರಮ ಮೇವು ಸಾಗಾಟ ತಡೆಯು ವುದು, ಅಕ್ರಮ ಇಟ್ಟಂಗಿ ಭಟ್ಟಿಗಳ ಮೇಲೆ ದಾಳಿ ಮಾಡುವುದು, ರಾತ್ರಿ ಪಾಳೆಯಲ್ಲಿ ಟೋಲ್ ಗೇಟ್‍ಗಳಲ್ಲಿ ಕರ್ತವ್ಯಕ್ಕೆ ನಿಯೋಜಿ ಸುವುದು, ಒಟ್ಟಾರೆ ಅಕ್ರಮ ಗಣಿಗಾರಿಕೆ ಕೆಲಸಗಳಿಗೆ ಸಂಪೂರ್ಣವಾಗಿ ಗ್ರಾಮ ಲೆಕ್ಕಾಧಿಕಾರಿಗಳನ್ನು ನಿಯೋಜಿಸದಂತೆ ಆದೇಶ ಮಾಡಲು ಸರ್ಕಾರವನ್ನು ಪ್ರತಿಭಟನಾ ಕಾರರು ಒತ್ತಾಯಿಸಿದರು. ಈ ಹಿಂದೆ ರಾಜ್ಯಾ ದ್ಯಂತ ಕರ್ತವ್ಯ ನಿರತರಾಗಿದ್ದ ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆಗಳಾಗಿರುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್.ರಾಚಪ್ಪ, ಕಲಬುರಗಿ ಜಿಲ್ಲೆಯ ಲ್ಲಿನ ಗ್ರಾಮ ಲೆಕ್ಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕರ ಮೇಲೆ, ಬಳ್ಳಾರಿ, ದಕ್ಷಿಣ ಕನ್ನಡ, ಬೆಳಗಾವಿ, ಮೈಸೂರು, ಮಂಡ್ಯ ಹಾಗೂ ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ದೈಹಿಕ ಹಲ್ಲೆ ಮಾಡಿರುವುದು ಈಗಾಗಲೇ ಸರಕಾರಕ್ಕೆ ತಿಳಿದ ವಿಷಯವಾಗಿದೆ.

ಆದ್ದರಿಂದ ಸರಕಾರವು ಮುಂದೆ ಈ ರೀತಿಯ ಪ್ರಕರಣಗಳು ನಡೆಯದ ಹಾಗೆ ಮತ್ತು ಮೇಲೆ ತಿಳಿಸಿದ ಎಲ್ಲಾ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸುವಂತೆ ರಾಜ್ಯ ಸಂಘ ಮತ್ತು ಈ ಸಂದರ್ಭದಲ್ಲಿ ಪ್ರತಿಭಟ ನೆಗೆ ಸಹಕಾರ ನೀಡಿದ ಕಂದಾಯ ಇಲಾಖಾ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಹ ಗಂಭೀರ ವಾಗಿ ಒತ್ತಾಯಿಸುತ್ತದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾ ವಧಿ ಹೋರಾಟಕ್ಕೆ ರಾಜ್ಯ ಸಂಘವು ಕರೆ ನೀಡಲಾಗುವುದು ಎಂದು ತಿಳಿಸಿದರು ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ರಾಚಪ್ಪ, ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ನಂಜೇಗೌಡ, ಕರ್ನಾಟಕ ರಾಜ್ಯ ಗ್ರಾಮಲೆಕ್ಕಿಗರ ಕೇಂದ್ರ ಸಂಘದ ಅಧ್ಯಕ್ಷ ರಾಜಕುಮಾರ, ತಾಲೂಕು ಅಧ್ಯಕ್ಷ ರಾದ ಮಹೇಶ್, ನಟೇಶ್, ನಾಗೇಂದ್ರ, ಸತೀಶ್ ರೇವಣ್ಣ, ಹಾಗೂ ಮತ್ತಿತರರಿದ್ದರು.

Translate »