ವಿಜೃಂಭಣೆಯ ಸಿದ್ದಪ್ಪಾಜಿ ಚಂದ್ರ ಮಂಡಲೋತ್ಸವ
ಚಾಮರಾಜನಗರ

ವಿಜೃಂಭಣೆಯ ಸಿದ್ದಪ್ಪಾಜಿ ಚಂದ್ರ ಮಂಡಲೋತ್ಸವ

December 25, 2018

ಕಾಮಗೆರೆ: ಗ್ರಾಮ ದಲ್ಲಿ ಶ್ರೀ ಸಿದ್ದಪ್ಪಾಜಿ ಚಂದ್ರಮಂಡಲೋ ತ್ಸವ ಹಾಗೂ ಕಂಡಾಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಗ್ರಾಮದಲ್ಲಿ ಎರಡು ದಿನಗಳು ಆಚರಣೆ ಮಾಡುವ ಹಬ್ಬಕ್ಕೆ ವಿಶೇಷವಾಗಿ ಕುರು ಬನ ಕಟ್ಟೆ ಕಂಡಾಯಗಳನ್ನು ತರಿಸಲಾ ಗುತ್ತದೆ ಶನಿವಾರ ರಾತ್ರಿ ಗ್ರಾಮದ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಕಂಡಾಯ ಗಳನ್ನು ಇರಿಸಿ ವೀಳ್ಯದೆಲೆ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಿ ವಿಶೇಷವಾಗಿ ತಂಬಡಿಗಳು ಪೂಜೆ ಸಲ್ಲಿಸಿದರು.

ನಂತರ ಮಹದೇಶ್ವರ ದೇವಸ್ಥಾನದಿಂದ ಪ್ರಮುಖ ರಸ್ತೆಯಲ್ಲಿ ವಾದ್ಯಮೇಳ ದೊಂದಿಗೆ ಕಂಡಾಯ ಮೆರವಣಿಗೆ ಸಾಗಿ ದೊಡ್ಡಬೀದಿ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಕಂಡಾಯಗಳನ್ನು ಇರಿಸಲಾಯಿತು. ಬಿದಿರಿನ ಹಚ್ಚೆಗಳಿಂದ ತಯಾರಿಸಿದ ಚಂದ್ರಮಂಡಲಕ್ಕೆ ಹೂವಿನ ಅಲಂಕಾರ ಮಾಡಿ ಪಂಜಿನ ದೀಪಗಳನ್ನು ಹಾಕಿ ದೇವರಿಗೆ ವಿಶೇಷ ಪೂಜಾ ಕಾರ್ಯಗಳನ್ನು ಸಲ್ಲಿಸಿ ದೀಪದಿಂದ ಪಂಜುಗಳನ್ನು ಹಚ್ಚಿ ಬೆಳಗಿಸಿ ತಡರಾತ್ರಿ ಚಂದ್ರಮಂಡಲವನ್ನು ಮೇಲಕ್ಕೆ ಏರಿಸಲಾಯಿತು. ಇದಕ್ಕೆ ಸಾವಿ ರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು.

ಭಾನುವಾರ ಗ್ರಾಮದ ಮುಖ್ಯ ರಸ್ತೆ ಸೇರಿದಂತೆ ಎಲ್ಲಾ ಬೀದಿಗಳಲ್ಲಿ ಕಂಡಾಯ ಗಳನ್ನು ಮೆರವಣಿಗೆ ಮಾಡಲಾಯಿತು. ಗ್ರಾಮದ ಪ್ರತಿಯೊಂದು ಮನೆಯವರು ಕಂಡಾಯಗಳಿಗೆ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಹಬ್ಬದ ವಿಶೇಷ ವಾಗಿ ರಸ್ತೆ ಬದಿಗಳಲ್ಲಿ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸ ಲಾಗಿತ್ತು. ಕಂಡಾಯ ಮೆರವಣಿಗೆ ವೇಳೆ ಡೋಲು ತಮಟೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಹಬ್ಬದಲ್ಲಿ ಯಾವುದೇ ಗಲಾಟೆ ಅಹಿತಕರ ಘಟನೆಗಳು ನಡೆಯದಂತೆ ಪೆÇಲೀಸ್ ಬಂದೋಬಸ್ತ್ ನಿಯೋಜಿ ಸಲಾಗಿತ್ತು. ಗ್ರಾಮದ ಮುಂಖಡರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಹಾಗೂ ಬಂಧು ಬಳಗ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಪಾಲ್ಗೊಂಡಿದ್ದರು.

Translate »