ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಘಟಿಕೋತ್ಸವ
ಹಾಸನ

ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಘಟಿಕೋತ್ಸವ

December 25, 2018

ಶ್ರವಣಬೆಳಗೊಳ: ಪ್ರಾಕೃತ ಭಾಷೆ ಮತ್ತು ಸಾಹಿತ್ಯವು ಸಮೃದ್ಧವಾಗಿ ರುವುದರ ಜತೆಗೆ ಸಾಂಸ್ಕøತಿಕ ದೃಷ್ಟಿ ಯಿಂದ ವೈವಿದ್ಯಮಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ ಮತ್ತು ಪ್ರಾಕೃತ ವಿಭಾಗದ ನಿವೃತ್ತ ಪ್ರಾಧ್ಯಾ ಪಕ ಡಾ. ಎನ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.
ಶ್ರವಣಬೆಳಗೊಳದ ಶ್ರೀಧವಲತೀರ್ಥಂ ನಲ್ಲಿರುವ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ 13 ನೇ ಘಟಿಕೋತ್ಸವ ಭಾಷಣ ಮಾಡಿ ಮಾತನಾಡಿದ ಅವರು, ಭಾರತೀಯ ಪ್ರಾಚೀನ ಭಾಷೆಗಳಲ್ಲಿ ಒಂದಾದ ಪ್ರಾಕೃತ ಭಾಷೆಯು ಜೈನಾಗಮ ಭಾಷೆಯಾಗಿ ಬೆಳೆದು ಬಂದಿದೆ. ಈ ಭಾಷೆ ಯಲ್ಲಿ ರಚನೆಗೊಂಡ ಆಗಮ, ಪುರಾಣ, ಕಾವ್ಯ, ಸ್ಪಟಕ, ನಾಟಕಗಳಂತಹ ಹಲ ವಾರು ಸಾಹಿತ್ಯ ಪ್ರಾಕಾರಗಳ ರಚನೆಗೆ ಮಾಧ್ಯಮವಾಗಿ ಪ್ರಾಕೃತ ಭಾಷೆಯು ಸಹಕಾರಿಯಾಗಿದೆ ಎಂದರು.

ಪ್ರಾಕೃತ ಭಾಷೆಯಲ್ಲಿ ಷಟ್ಖಂಡಾಗಮದ ವ್ಯಾಖ್ಯಾನಗಳನ್ನೊಳಗೊಂಡ ಧವಲ, ಜಯಧವಲ, ಮಹಾಧವಲಗಳ 40 ಸಂಪುಟಗಳ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರಕಟಿಸಿರುವುದು ಸಾರಸ್ವತ ಲೋಕಕ್ಕೆ ನೀಡಿದ ವಿಶೇಷ ಕೊಡುಗೆ ಯಾಗಿದ್ದು, ಸಾಹಿತ್ಯ ಸಂವರ್ಧನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ “ಅಂತರಾಷ್ಟ್ರೀಯ ಜ್ಞಾನ ಭಾರತಿ” ಪ್ರಶಸ್ತಿ ಯನ್ನು ಸ್ಥಾಪಿಸಿ ಪ್ರಾಕೃತ ಸಾಹಿತ್ಯ ಕೃಷಿ ಯನ್ನು ಮಾಡಿರುವ ಹಲವಾರು ವಿದ್ವಾಂ ಸರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸು ತ್ತಿದ್ದಾರೆ. ಇದರಿಂದ ಪ್ರಾಕೃತ ಭಾಷೆಯು ಅಂತರಾಷ್ಟ್ರೀಯ ಮನ್ನಣೆ ಪಡೆದಿದೆ ಹಾಗೂ 2018ರ ಮಹಾಮಸ್ತಕಾಭಿಷೇಕ ಸಂದರ್ಭ ದಲ್ಲಿ ಪ್ರಾಕೃತ ವಿಶ್ವವಿದ್ಯಾಲಯ ನಿರ್ಮಾಣ ಮಾಡಲು ಸರ್ಕಾರ ಯೋಜನೆ ರೂಪಿಸಿ ಅಭಿವೃದ್ಧಿಪಡಿಸುತ್ತಿರುವುದು ಉತ್ತಮ ಕಾರ್ಯ ಎಂದರು.

ನಂತರ ನಿಪ್ಸಾರ್ ನಿರ್ದೇಶಕ ಪ್ರೊ. ಬಿ.ಎಸ್. ಸಣ್ಣಯ್ಯ ಮಾತನಾಡಿ, ಪ್ರಾಚೀನ ಜೈನ ಸಾಹಿತ್ಯವು ಹೆಚ್ಚಾಗಿ ಪ್ರಾಕೃತ ಭಾಷೆಯ ಲ್ಲಿದೆ. ಈ ಭಾಷೆಯನ್ನು ಅಧ್ಯಯನ ಮಾಡಿ ರುವವರಿಗೆ ಹಾಗೂ ಸಂಶೋಧಕರಿಗೆ ಮಾತ್ರ ಪ್ರಾಕೃತದ ಬಗ್ಗೆ ಅರಿವಿದ್ದು, ಸಾಮಾನ್ಯ ಜನರಿಗೂ ಪ್ರಾಕೃತ ಭಾಷೆಯ ಸಾಹಿತ್ಯದ ಅರಿವಾಗಬೇಕು ಎಂದರು.

27 ವಿದ್ಯಾರ್ಥಿಗಳಿಗೆ ಪದಕ: 2017-18ನೇ ಸಾಲಿನಲ್ಲಿ ಭಾರತದಾದ್ಯಂತ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಪ್ರಾಕೃತ ಪರೀಕ್ಷೆ ನಡೆಸಿದ್ದು, ಪ್ರಾಕೃತ ಸರ್ಟಿಫಿಕೆಟ್, ಡಿಪ್ಲೊಮಾ, ಪ್ರಥಮಾ, ಮಧ್ಯಮ ಹಾಗೂ ರತ್ನ ತರಗತಿ ಗಳಲ್ಲಿ ಒಟ್ಟು 637 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 504 ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದು, 257 ಪ್ರಥಮ ಶ್ರೇಣಿ, 55 ದ್ವಿತೀಯ ಶ್ರೇಣಿ ಹಾಗೂ 156 ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ 27 ವಿದ್ಯಾರ್ಥಿಗಳು ಸುವರ್ಣ, ರಜತ ಹಾಗೂ ಕಂಚಿನ ಪದಕ, ಪ್ರಶಸ್ತಿ ಪತ್ರವನ್ನು ಪಡೆದರು.

ಕನ್ನಡ ಮಾಧ್ಯಮದ ಪ್ರಾಕೃತ ಸರ್ಟಿ ಫಿಕೆಟ್ ತರಗತಿಯಲ್ಲಿ ಅಲಗೂರಿನ ಪ್ರವೀಣ ಬಾ. ನ್ಯಾಮಗೌಡ ಸುವರ್ಣ, ಅಲಗೂ ರಿನ ಮಹದೇವ ಪಿ. ಯಲಗುದ್ರಿ ರಜತ ಹಾಗೂ ಬೆಂಗಳೂರಿನ ಮೈಥಿಲಿ ಕಂಚಿನ ಪದಕ ಪಡೆದಿರುತ್ತಾರೆ. ಡಿಪ್ಲೊಮಾ ತರಗತಿಯಲ್ಲಿ ಪುತ್ತೂರಿನ ಸಿ.ಹೆಚ್.ಆಶಾ ಸುವರ್ಣ, ಪುತ್ತೂರಿನ ಕೃಪಾ ರಜತ ಹಾಗೂ ಬೆಂಗಳೂರಿನ ಎಸ್.ಶಾಂತಲಾ ಕಂಚಿನ ಪದಕ ಪಡೆದಿರುತ್ತಾರೆ. ಪ್ರಥಮಾ ತರಗತಿ ಯಲ್ಲಿ ಜಮಖಂಡಿಯ ಸುಷ್ಮಾ ಮ.ದೈ ಗೊಂಡ ಸುವರ್ಣ, ಹುಬ್ಬಳ್ಳಿಯ ಬಿಂದು ಎಸ್. ಸೂಜಿ ರಜತ ಹಾಗೂ ಹುಬ್ಬಳ್ಳಿ ಚಂದನ ವಿ. ಮುತ್ತಿನ್ ಕಂಚಿನ ಪದಕ ಪಡೆದಿರುತ್ತಾರೆ. ಮಧ್ಯಮಾ ತರಗತಿಯಲ್ಲಿ ಹಾಸನದ ಡಾ. ವೀಣಾ ಸುವರ್ಣ, ಹೊನ್ನಾ ರತಿಯ ಗೌರಿ ಎಸ್. ಭಾರದ್ವಾಜ್ ರಜತ ಹಾಗೂ ಬೆಂಗಳೂರಿನ ಎಸ್.ಆರ್.ಸರಸ್ವ ತಮ್ಮ ಕಂಚಿನ ಪದಕ ಪಡೆದಿರುತ್ತಾರೆ. ಪ್ರಾಕೃತ ರತ್ನ ಅಂತಿಮ ವರ್ಷದಲ್ಲಿ ಹಬ್ಬ ಳ್ಳಿಯ ಸ್ನೇಹಲ್ ವಿಜಯ್ ಶ್ರೀಪನ್ನವರ್ ಸುವರ್ಣ, ಹುಬ್ಬಳ್ಳಿಯ ಅನಿತಾ ಬಿ. ಉಮ ಚಗಿ ರಜತ ಹಾಗೂ ಜಮಖಂಡಿಯ ಪರಪ್ಪಾ ನ್ಯಾಮಣ್ಣ ನಂದಗಾವ್ ಕಂಚಿನ ಪದಕ ಪಡೆದಿರುತ್ತಾರೆ.

ಹಿಂದಿ ಮಾಧ್ಯಮದ ಪ್ರಾಕೃತ ಸರ್ಟಿಫಿ ಕೆಟ್ ತರಗತಿಯಲ್ಲಿ ದೆಹಲಿಯ ಅಭಿಷೇಕ್ ಜೈನ್ ಸುವರ್ಣ, ಸಹರನ್ಪರ್‍ನ ಸಂಧ್ಯಾ ಜೈನ್ ರಜತ ಹಾಗೂ ಸಹರನ್ಪರ್‍ನ ಅಶ್ವಿನಿ ಜೈನ್ ಕಂಚಿನ ಪದಕ ಪಡೆದಿರುತ್ತಾರೆ. ಡಿಪ್ಲೊಮಾ ತರಗತಿಯಲ್ಲಿ ಪುತ್ತೂರಿನ ಸಿ.ಹೆಚ್.ಆಶಾ ಸುವರ್ಣ, ಪುತ್ತೂರಿನ ಕೃಪಾ ರಜತ ಹಾಗೂ ಬೆಂಗಳೂರಿನ ಎಸ್. ಶಾಂತಲಾ ಕಂಚಿನ ಪದಕ ಪಡೆದಿರುತ್ತಾರೆ. ಪ್ರಥಮಾ ತರಗತಿಯಲ್ಲಿ ಅಕ್ಲೂಜ್‍ನ ಹೇಮಾ ರೂಪೇಶ್ ಫಡೆ ಸುವರ್ಣ, ಕೊತ್ಮಾದ ನೀಲೂ ಜೈನ್ ರಜತ ಹಾಗೂ ಥಾನೆಯ ಅಂಬೂಡ್ಕರ್ ಅನುಪಮ ನೇಮಿಸಾಗರ್ ಕಂಚಿನ ಪದಕ ಪಡೆದಿ ರುತ್ತಾರೆ. ಮಧ್ಯಮಾ ತರಗತಿಯಲ್ಲಿ ಕೊಲ್ಹಾಪುರದ ಅಶ್ವಿನಿ ಅರುಣ್ ಬಿಂಡಗೆ ಸುವರ್ಣ, ಜಮಖಂಡಿರ ಡಾ. ಜ್ಯೋಸ್ನಾ ಸಿ. ಸಮಾಜ್ ರಜತ ಹಾಗೂ ಕೊಲ್ಹಾ ಪುರದ ವೈಶಾಲಿ ನಿತೀನ್ ಚಿವಟೆ ಕಂಚಿನ ಪದಕ ಪಡೆದಿರುತ್ತಾರೆ. ರತ್ನ-ಅಂತಿಮ ವರ್ಷದಲ್ಲಿ ಕೊಲ್ಹಾಪುರದ ಡಾ. ಸುಷ್ಮಾ ಗುಣವಂತ್ ಸುವರ್ಣ, ಹುಬ್ಬಳ್ಳಿಯ ಸುಜಾತಾ ಎ.ದಯಣ್ಣವರ್ ರಜತ ಹಾಗೂ ವಾರಣಾಸಿಯ ಪ್ರಕಾಶ್ ರೇಗ್ಮಿ ರವರಿಗೆ ಕಂಚಿನ ಪದಕ ಹಾಗೂ ನಗದು ಬಹುಮಾನದೊಂದಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಟಾಪ್ 10 ರಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಅಂಕಸೂಚಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎಂ.ಜೆ. ಇಂದ್ರಕುಮಾರ್, ಡಾ. ಎಂ.ಎ.ಜಯ ಚಂದ್ರ, ಡಾ. ಪಿ.ಪದ್ಮಾವತಿ, ಎಂ.ಒ. ಮಂಜಯ್ಯ, ಎಂ.ಉದಯರಾಜ್, ದೇವೇಂದ್ರ ಪಾಕಿ ಮುಂತಾದವರಿದ್ದರು.

Translate »