ರೈತರ ಪರಿಹಾರ, ರಿಂಗ್ ರಸ್ತೆ ಕಾಮಗಾರಿಗೆ ಆಗ್ರಹಿಸಿ ಉರುಳು ಸೇವೆ
ಹಾಸನ

ರೈತರ ಪರಿಹಾರ, ರಿಂಗ್ ರಸ್ತೆ ಕಾಮಗಾರಿಗೆ ಆಗ್ರಹಿಸಿ ಉರುಳು ಸೇವೆ

December 25, 2018

ಹಾಸನ: ರೈತರಿಗೆ ಪರಿಹಾರ ಹಾಗೂ ರಿಂಗ್ ರಸ್ತೆ ಕಾಮಗಾರಿಗೆ ಆಗ್ರಹಿಸಿ ಗ್ರಾಮಸ್ಥರು ಹಾಸನಾಂಬ ದೇವಾಲಯದಿಂದ ನೀರುಬಾಗಿಲು ಆಂಜನೇಯ ದೇವಸ್ಥಾನದವರೆಗೂ ಉರುಳು ಸೇವೆ ಮಾಡು ವುದರ ಮೂಲಕ ಗಮನಸೆಳೆದರು.

ಮೊದಲು ಹಾಸನಾಂಬೆ ದೇವಾಲಯದ ಮುಂದೆ ಆವರಣದಲ್ಲಿ ಕರ್ಪೂರ ಹಚ್ಚಿ ನಂತರ ಉರುಳು ಸೇವೆ ಆರಂಭಿಸಿದರು. ಹಾಸನ ತಾಲೂಕು, ಕಸಬಾ ಹೋಬಳಿ, ತಮ್ಮಾಪುರ, ಉದ್ದೂರು, ಚಿಕ್ಕೊಂಡಗುಳ ಹಾಗೂ ಡೈರಿ ಸರ್ಕಲ್‍ನಿಂದ ದೊಡ್ಡ ಮುಂಡಿಗನಹಳ್ಳಿಯವರೆಗೂ 1995-1996ನೇ ಇಸವಿಯಲ್ಲಿ 110ಅಡಿ ರಿಂಗ್ ರಸ್ತೆ ಯನ್ನು ಅಂದಿನ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣನವರ ಆಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಡಿ ತಂದಂತಹ 110ಅಡಿ ರಿಂಗ್ ರಸ್ತೆ ಹಾಗೂ ರಾಜ್‍ಕುಮಾರ್ ನಗರದ ಬಾಜು 80 ಅಡಿ ರಸ್ತೆ ಹಾದು ಹೋಗಿರುತ್ತದೆ ಎಂದರು. ಇಲ್ಲಿಯವರೆವಿಗೂ 110ಅಡಿ ರಿಂಗ್ ರಸ್ತೆಗೆ ರೈತರ ಜಮೀನು ಹೋಗಿರುವುದಕ್ಕೆ ಇಲ್ಲಿಯ ವರವಿಗೂ ಯಾವುದೇ ರೀತಿಯ ಪರಿಹಾರ ಧನ ವನ್ನು ಸರಕಾರದವರು ಕೊಟ್ಟಿರುವುದಿಲ್ಲ. ಈ ಹಿಂದೆ ಡೈರಿ ವೃತ್ತದಿಂದ ಸಾಲಗಾಮೆ ರಸ್ತೆ ದಾಟಿ ತೇಜೂರು ಸರ್ಕಲ್‍ವರೆವಿಗೂ ರಸ್ತೆ ಮಾಡಿ ಅಲ್ಲಿಗೆ ಕೆಲಸ ಕಾಮಗಾರಿಯನ್ನು ಕೈ ಬಿಟ್ಟಿರುತ್ತಾರೆ ಹಾಗೂ ಇಲ್ಲಿಯವರೆವಿಗೂ ರಸ್ತೆಗೆ ಹೋಗಿರುವ ಜಮೀನಿ ನಲ್ಲಿ ಬೆಳೆಯನ್ನು ಸಹ ಬೆಳೆಯಲು ಅವಕಾಶ ಮಾಡಿ ಕೊಟ್ಟಿರುವುದಿಲ್ಲ ಹಾಗೂ ಪರಿಹಾರವನ್ನು ಸಹ ಕೊಟ್ಟಿರುವುದಿಲ್ಲ ಎಂದು ದೂರಿದರು. ಈ ರಿಂಗ್ ರಸ್ತೆಯ ಮೇಲೆ ಏಕೆ ವಕ್ರದೃಷ್ಟಿ ಇದೇನು ಶಾಪಗ್ರಸ್ತ ರಸ್ತೆಯೂ ಏನೋ ಗೊತ್ತಾಗುತ್ತಿಲ್ಲ. ಹಾಸನ ಜಿಲ್ಲೆಗೆ ಸಾವಿರಾರು ಕೋಟಿ ಬಿಡುಗಡೆಯಾಗಿ ಕೆಲವು ರಸ್ತೆಗೆ ಗುದ್ದಲಿ ಪೂಜೆ ಮಾಡಿ ಉತ್ತಮವಾದ ರಸ್ತೆಯನ್ನು ಕಿತ್ತು ಅದರ ಮೇಲೆ ಡಾಂಬರೀಕರಣ ಮಾಡಿ ರುತ್ತೀರಾ ಎಂದು ಕಿಡಿಕಾರಿದರು. ಈಗ ರಿಂಗ್ ರಸ್ತೆಗೆ ಇಡಿ ಹಾಸನದಲ್ಲಿರುವ ಕೆಟ್ಟ ವಾಸನೆ ಬರುತ್ತಿರುವ ಕಸಗಳನ್ನು ಅಲ್ಲಿಗೆ ತಂದು ಸುರಿ ತ್ತಿರುತ್ತಾರೆ ಎಂದ ಅವರು ಗೊರೂರು ರಸ್ತೆ ಬಳಿ ಇರುವ ಕಸದ ರಾಶಿ ಯಾಗೇ ಇಲ್ಲೂ ಕಾಣುತ್ತಿ ದ್ದೇವೆ ಎಂದರು. ರೈತರು ಇದರ ಪರಿಹಾರವನ್ನು ಕೇಳಿದರೆ ಆ ಸಮಯಕ್ಕೆ ಅರ್ಧ ಕೆಲಸ ಕಾಮಗಾರಿ ಮಾಡಿ ಅರ್ಧಕ್ಕೆ ಬಿಟ್ಟು ಹೋಗಿರುತ್ತಾರೆ.

ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ ಅವರು ಸಹ ಆ ಸ್ಥಳಕ್ಕೆ ಭೇಟಿ ನೀಡಿ ಇದರ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ಮಾಡಿ ಈ ರಸ್ತೆಯ ಕಾಮಗಾರಿ ಜರೂರಾಗಿ ಮುಗಿದರೇ ಹಾಸನ ನಗರದ ಒಳಭಾಗದಲ್ಲಿರುವ ಟ್ರಾಫಿಕ್ ಜಾಮ್ ಕಡಿಮೆಯಾ ಗುತ್ತದೆ ಎಂದು ಜಿಲ್ಲಾಧಿಕಾರಿಗಳು ಬರವಸೆ ಕೊಟ್ಟಿರುತ್ತಾರೆ. ಆದರೆ ಈ ಬಗ್ಗೆ ಜಿಲ್ಲಾಧಿಕಾರಿಗಳು ಭರವಸೆ ಕೊಟ್ಟು ಹೋಗಿದ್ದು, ಇದುವರೆಗೂ ಯಾವುದೇ ಪ್ರಯೋಜನವಾಗಿ ರುವುದಿಲ್ಲ. ರಸ್ತೆಯ ಕಾಮಗಾರಿ ಕೆಲಸ ಹಾಗೂ ಪರಿಹಾರ ಅತಿ ಜರೂ ರಾಗಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಉಸ್ತುವಾರಿ ಸಚಿವರು ಕೆಲಸ ಮಾಡುವಂತೆ ಒತ್ತಾಯಿಸಿ ದರು. ನಗರದ ಹಾಸನಾಂಬ ದೇವಸ್ಥಾನದಿಂದ ನಿರುವಾಗಿಲು ಆಂಜನೇಯ ದೇವಸ್ಥಾನದವರೆವಿಗೂ ಉರುಳು ಸೇವೆ ಮಾಡಲಾಗಿದ್ದು, ಇದಕ್ಕೂ ಸಹ ಸ್ಪಂದಿಸಿ ಕೆಲಸ ಮಾಡದೇ ಇದ್ದ ಪಕ್ಷದಲ್ಲಿ ರೈತರ ಸಂಘದ ಅಧ್ಯಕ್ಷತೆ ಯಲ್ಲಿ ಸಭೆ ನಡೆಸಿ ನಾವು ಹಾಸನದಿಂದ ದ್ವಿಚಕ್ರ ವಾಹನದಲ್ಲಿ ಬೆಂಗಳೂರಿಗೆ ಎಲ್ಲರೂ ಹೋಗಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿಗಳಾದ ಪರಮೇಶ್ವರ್ ರವರನ್ನು ಭೇಟಿ ಮಾಡಿ ಹಾಗೂ ಕಾಂಗ್ರೆಸ್‍ನ ಹಿರಿಯ ನಾಯಕರುಗಳಾದ ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯವರು, ಡಿ.ಕೆ. ಶಿವಕುಮಾರ್ ಹಾಗೂ ದಿನೇಶ್ ಗುಂಡೂರಾವ್ ಇವರುಗಳಿಗೆ ಮನವಿ ನೀಡಿ ಗಮನಕ್ಕೆ ತರಲಾಗು ವುದು ಎಂದರು. ಜಮೀನಿನ ಪರಿಹಾರ ಹಾಗೂ ರಸ್ತೆಯ ಕಾಮಗಾರಿ ಕೆಲಸ ಪೂರ್ಣ ವಾಗುವರೆಗೂ ನಮ್ಮ ಹೋರಾಟ ಮುಂದುವರೆಯುತ್ತಲೇ ಇರುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ತಮ್ಲಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಗಣೇಶ್, ಮಹೇಶ್, ಗಿಡ್ಡೇಗೌಡ, ಮಂಜೇಗೌಡ, ವೆಂಕ ಟೇಶ್, ಶ್ರೀನಿವಾಸ್, ಶಶಿ, ರಾಮಚಂದ್ರು, ಕೃಷ್ಣೇ ಗೌಡ ಉಪಸ್ಥಿತರಿದ್ದರು.

Translate »