ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚಿಕ್ಕಬೆಟ್ಟ ಚಂದ್ರಗಿರಿ ಶೈಕ್ಷಣಿಕ ದರ್ಶನ
ಹಾಸನ

ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚಿಕ್ಕಬೆಟ್ಟ ಚಂದ್ರಗಿರಿ ಶೈಕ್ಷಣಿಕ ದರ್ಶನ

December 25, 2018

ಶ್ರವಣಬೆಳಗೊಳ: ಪ್ರಾಚೀನ ವಾಸ್ತು ಶಿಲ್ಪ, ಶಿಲಾ ಶಾಸನಗಳು, ಸಾಂಸ್ಕøತಿಕ ಕಲೆ-ಸಾಹಿತ್ಯ ಹಾಗೂ ಐತಿಹಾಸಿಕ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಕೆಲಸವಾಗಬೇಕು ಎಂದು ಪ್ರಾಂಶು ಪಾಲ ಡಾ.ಎಸ್.ದಿನೇಶ್ ಅಭಿಪ್ರಾಯಪಟ್ಟರು.

ಎಸ್.ಎನ್. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಗಳಿಗೆ ಆಯೋಜಿಸಿದ್ದ ಚಿಕ್ಕಬೆಟ್ಟ ಚಂದ್ರಗಿರಿ ಶೈಕ್ಷಣಿಕ ದರ್ಶನ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ಸ್ಥಳೀಯವಾಗಿರುವ ಐತಿಹಾಸಿಕ ಹಾಗೂ ಸಾಂಸ್ಕøತಿಕ ಹಿನ್ನೆಲೆಯನ್ನು ಯುವ ಜನ ತೆಗೆ ತಲುಪಿಸುವ ಕೆಲಸವಾಗಬೇಕು. ಹಿತ್ತಲಗಿಡ ಮದ್ದಲ್ಲ ಎಂಬಂತೆ ನಮ್ಮ ಸುತ್ತ-ಮುತ್ತ ಅನೇಕ ಐತಿಹ್ಯಗಳು ಅಡಗಿವೆ. ಆದರೆ ನಮಗೆ ಅರಿವಿಲ್ಲದೆ ಅದರ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಈ ಬಗ್ಗೆ ಹೆಚ್ಚಿನ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕು. ಆಗ ನಮ್ಮ ಪ್ರಾಚೀನ ಸಂಸ್ಕøತಿಯ ರಕ್ಷಣೆ ಜತೆಗೆ ಶಿಲ್ಪ-ಕಲೆಯ ಅರಿವು ಸಮಾಜದಲ್ಲಿ ಮೂಡುತ್ತದೆ ಎಂದರು.

ಶ್ರವಣಬೆಳಗೊಳದ ಚಂದ್ರಗಿರಿ ಬೇಟ್ಟವು ಕೇವಲ ಜೈನ ಧರ್ಮದ ಧಾರ್ಮಿಕ ಕೇಂದ್ರವಾ ಗದೇ, ಪ್ರಾಚೀನ ಸಾಂಸ್ಕøತಿಕ ಹಾಗೂ ಐತಿಹಾಸಿಕ ಮಹತ್ವದ ವಿಷಯಗಳನ್ನು ತನ್ನ ರಸಗರ್ಭದಲ್ಲಿ ಅಡಗಿಸಿಕೊಂಡಿದೆ.

ಭೂ ಮಟ್ಟದಿಂದ 200 ಅಡಿ ಎತ್ತರ ಹಾಗೂ ಸಮುದ್ರ ಮಟ್ಟದಿಂದ ಸುಮಾರು 3049 ಅಡಿ ಎತ್ತರವಿರುವ ಈ ಬೆಟ್ಟದಲ್ಲಿ ಕ್ರಿ.ಪೂ. 3 ನೇ ಶತಮಾನದಿಂದ ಇಲ್ಲಿಯ ವರೆಗಿನ ಇತಿ ಹಾಸವನ್ನು ಕಾಣಬಹುದಾಗಿದೆ. ಕ್ರಿ.ಶ. 6 ನೇ ಶತಮಾನದಿಂದ 20 ನೇ ಸತಮಾನದ ವರೆಗಿನ ಸುಮಾರು 271 ಕ್ಕೂ ಹೆಚ್ಚು ಶಿಲಾ ಶಾಸನಗಳು ಇಲ್ಲಿದ್ದು, ಎಪಿಗ್ರಾಫಿಯಾ ಕರ್ನಾಟಕ, ಸಂಪುಟ-2 ರಲ್ಲಿ ದಾಖಲಿಸಲಾಗಿದೆ. ಇನ್ನೂ ಹಲವಾರು ಅಪ್ರಕಟಿತ ಶಾಸನಗಳು ಇಲ್ಲಿದ್ದು, ಅದರ ಶೋಧನೆಯ ಕೆಲಸ ಅತ್ಯಗತ್ಯವಾಗಿ ಆಗಬೇಕಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಎಸ್.ಎನ್. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶಂಕರೇ ಗೌಡ, ರೇಣುಕಾ ಪ್ರಸಾದ್, ವೀಣಾ, ದೇವರಾಜ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Translate »