ಶ್ರವಣಬೆಳಗೊಳ: ಈ ವರ್ಷದ ಆರಂಭದಲ್ಲಿ ಜರುಗಿದ ವಿಶ್ವವಿಖ್ಯಾತ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ವಿವಿಧ ದ್ರವ್ಯಗಳಿಂದ ಅಭಿಷೇಕಗೊಂಡಿದ್ದ ಬಾಹುಬಲಿ ಮೂರ್ತಿಯ ಸ್ವಚ್ಚತಾ ಕಾರ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ 12.30 ಗಂಟೆಗೆ ಶುಭಾರಂಭಗೊಂಡಿತು. ಭಾರತೀಯ ಸರ್ವೇಕ್ಷಣಾಲಯದ ವೈಜ್ಞಾನಿಕ ವಿಭಾಗದ ಉಪ ಅಧೀಕ್ಷಕ ಡಾ.ಅಂಬೇಡ್ಕರ್, ಸಹಾಯಕ ಉಪ ಅಧೀಕ್ಷಕ ಡಾ. ಸುಜಿತ್ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದರು.