ಅರಸೀಕೆರೆ, ರುದ್ರಪಟ್ಟಣದಲ್ಲಿ ವಿಜೃಂಭಣೆಯ ಹನುಮ ಜಯಂತಿ
ಹಾಸನ

ಅರಸೀಕೆರೆ, ರುದ್ರಪಟ್ಟಣದಲ್ಲಿ ವಿಜೃಂಭಣೆಯ ಹನುಮ ಜಯಂತಿ

December 21, 2018

ಅರಸೀಕೆರೆ: ನಗರದ ಪ್ರಾಚೀನ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯ ಕ್ರಮ ವಿಜೃಂಭಣೆಯಿಂದ ನಡೆಯಿತು.ಪ್ರಾತಃ ಕಾಲದಲ್ಲಿ ಶ್ರೀಯವರಿಗೆ ವಿವಿಧ ಪೂಜಾ ಕೈಂಕರ್ಯಗಳು ಪುರೋಹಿತ ರಾದ ಪ್ರಕಾಶ್ ನೇತೃತ್ವದಲ್ಲಿ ನಡೆಯಿತು. ಸಂಜೆ ಅಂತಾರಾಷ್ಟ್ರೀಯ ಕಲಾವಿದ, ಸ್ಥಳೀಯ ವಿಜಯ್‍ಕುಮಾರ್ ಮತ್ತು ಸಂಗಡಿಗರು ಜಗಲ್‍ಬಂದಿ ಕಾರ್ಯಕ್ರಮ ನಡೆಸಿಕೊಟ್ಟರು.

ಶಾಸಕ ಕೆ.ಎಂ.ಶಿವಲಿಂಗೇಗೌಡ, ತಹಸೀ ಲ್ದಾರ್ ಎನ್.ವಿ.ನಟೇಶ್, ನಗರಸಭೆ ಸದಸ್ಯೆ ಶುಭ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿ ಶಂಕರನ್, ಸದಸ್ಯರಾದ ಕೆ.ಆರ್.ಶ್ರೀಧರ್, ರೈಲ್ವೈ ರಂಗಸ್ವಾಮಿ, ಕದಂಬ ಶ್ರೀನಿವಾಸ್, ನೇವರ್ತಿರಾವ್, ನಟರಾಜ್, ಅನ್ನಪೂರ್ಣ ಮತ್ತು ಸೆಂದಾಮರೈ ಇನ್ನಿತರರಿದ್ದರು. ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

ನಗರದ ಮಾರುತಿ ನಗರ ಬಡಾವಣೆ, ಪೇಟೆ ಬೀದಿ ಆರ್ಯವೈಶ್ಯ ಮಂಡಳಿ, ಕಾಳನ ಕೊಪ್ಪಲು, ಅಮರಗಿರಿ ತಿರುಪತಿ, ತಾಲೂ ಕಿನ ಬಾಣಾವರ ಕೋಟೆ ಆಂಜನೇಯ ದೇವಸ್ಥಾನಗಳು ಸೇರಿದಂತೆ ಇತರೆಡೆ ವಿಜೃಂಭಣೆಯಿಂದ ಹನುಮ ಜಯಂತಿ ಯನ್ನು ಆಚರಿಸಲಾಯಿತು.

ರಾಮನಾಥಪುರ ವರದಿ: ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಪೂಜಾ ಕಾರ್ಯ ಗಳನ್ನು ಮಾಡುವ ಮೂಲಕ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂದು ದೇವಸ್ಥಾನದ ಮುಖ್ಯ ಅರ್ಚಕ ಅರ್.ವಿ. ಪದ್ಮನಾಭ ತಿಳಿಸಿದರು.

ರಾಮನಾಥಪುರ ಹೋಬಳಿ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿರುವ ವಿಗ್ರಹ ಮೂರ್ತಿಗೆ ಬೆಣ್ಣೆ ಅಲಂಕಾರ, ಗಣಪತಿ ಹೋಮ, ನವಗ್ರಹ ಪೂಜೆ, ದವಸ-ಧಾನ್ಯ, ಜಲಾಧಿ ವಾಸ ಪೂಜೆಯ ನಂತರ ನಡೆದ ಸಭೆ ಯಲ್ಲಿ ಮಾತನಾಡಿದ ಅವರು, ನಮ್ಮ ಗುರು, ಹಿರಿಯರು ಹಾಕಿಕೊಟ್ಟ ಇಂತಹ ಪೂಜಾ ಕಾರ್ಯಕ್ರಮಗಳನ್ನು ಹಾಗೂ ವಿಚಾರಧಾರೆ ಗಳನ್ನೂ ಅಳವಡಿಸಿಕೊಂಡು ಇಂತಹ ಪುಣ್ಯ ಕಾರ್ಯಗಳನ್ನು ಮಾಡಿ ಅವರ ತತ್ವ-ಆದರ್ಶಗಳನ್ನು ನಾವು ಜೀವನದಲ್ಲಿ ಅಳಡಿಸಿಕೊಳ್ಳುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ಗ್ರಾಪಂ ಸದಸ್ಯ ಶೇಖರ್, ಮಾಜಿ ಸದಸ್ಯ ಅರ್.ಎಂ.ಗೋವಿಂದೇಗೌಡ ಗ್ರಾಮದ ಮುಖಂಡರಾದ ಮರೀಗೌಡ, ಶಿವಣ್ಣ, ಪರಶುರಾಮ್, ದಾಸೇಗೌಡ, ದೇವರಾಜೇ ಗೌಡ ಮುಂತಾದವರು ಭಾಗವಹಿಸಿದ್ದರು. ಮೈಸೂರು ಪುರೋಹಿತರಾದ ವಿ. ಸುರೇಶ್ ಹಾಗೂ ಸುದರ್ಶನ್ ಅವರು ಪೂಜಾ ಕೈಂಕರ್ಯ ನಡೆಸಿಕೊಟ್ಟರು.

Translate »