ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಚೆಕ್ ವಿತರಣೆ
ಹಾಸನ

ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಚೆಕ್ ವಿತರಣೆ

December 21, 2018

ರಾಮನಾಥಪುರ: ರಾಮನಾಥಪುರ ಗ್ರಾಪಂನಲ್ಲಿ ನಡೆದ ಸಭೆಯಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ 35 ಫಲಾನುಭವಿಗಳಿಗೆ ತಾಪಂ ಅಧ್ಯಕ್ಷೆ ವೀಣಾ 1,500 ರೂ.ಗಳ ಚೆಕ್ ವಿತರಿಸಿದರು. ನಂತರ ಮಾತನಾಡಿದ ಅವರು, ಕಾವೇರಿ ನದಿ ಪ್ರವಾಹದಿಂದ 50ಕ್ಕೂ ಹೆಚ್ಚು ಮನೆಗಳು ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಲಾಗಿದೆ. ಅಲ್ಲದೇ ಗ್ರಾಪಂ ವ್ಯಾಪ್ತಿಯ ಕೋಟವಾಳು ಗ್ರಾಮದ ಸುಬ್ರಹ್ಮಣ್ಯ ನಗರದಲ್ಲಿ 6 ಎಕರೆ ಪ್ರದೇಶವನ್ನು ನಿವೇಶನ ರಹಿತರಿಗೆ ನಿವೇಶನ ನೀಡಲು ಈಗಾಗಲೇ ಗ್ರಾಪಂಗೆ ಸದರಿ ಜಾಗದ ದಾಖಲಾತಿ ಪತ್ರ ಹಸ್ತಾಂತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಮನಾಥಪುರ ಪಂಚಾಯಿತಿ ಅಧ್ಯಕ್ಷ ಯೋಗೇಶ್, ಜಿಪಂ ಸದಸ್ಯ ದೊಡ್ಡಮಗ್ಗೆ ಬಿ.ಎಂ.ರವಿ, ತಾಲೂಕು ಪಂಚಾಯಿತಿ ಸದಸ್ಯ ಜಿ.ಸಿ. ಮಂಜೇಗೌಡ, ಗ್ರಾಪಂ ಸದಸ್ಯರಾದ ದಿವಾಕರ್, ಅರುಣ್‍ಕುಮಾರ್, ಮುಖಂಡರಾದ ರಾಮೇಗೌಡ, ಬಿ.ಎಸ್.ಹಿರಣ್ಯ, ಅರ್.ವಿ.ಉದಯಕುಮಾರ್, ಕುಮಾರ್, ಕಾರ್ಯದರ್ಶಿ ಎಂ.ಸಿ.ಕುಮಾರ್, ರೇವಣ್ಣ ಮುಂತಾದವರು ಉಪಸ್ಥಿತರಿದ್ದರು.

Translate »