ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಮಾಜಿ ಸಚಿವ ಬಿ.ಶಿವರಾಂ ಆಗ್ರಹ
ಹಾಸನ

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಮಾಜಿ ಸಚಿವ ಬಿ.ಶಿವರಾಂ ಆಗ್ರಹ

December 21, 2018

ಹಾಸನ: ಜಿಲ್ಲೆಯ ವಿವಿಧ ಕಡೆ ಗಳಲ್ಲಿ ಕಾಡಾನೆ ಹಾವಳಿಯಿಂದ ಹಾನಿ ಯಾಗಿರುವ ಬೆಳೆಗಳಿಗೆ ಮತ್ತು ದಾಳಿ ಯಿಂದ ಮೃತಗೊಂಡಿರುವ ಕುಟುಂಬ ಗಳಿಗೆ ಪರಿಹಾರ ನೀಡಬೇಕು. ಕಾಡಾನೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಮಾಜಿ ಸಚಿವ ಬಿ.ಶಿವರಾಂ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತ ನಾಡಿದ ಅವರು, ಹಾಸನ ಜಿಲ್ಲೆಯ ಆಲೂರು, ಸಕಲೇಶಪುರ, ಅರಕಲಗೂಡು, ಮತ್ತು ಬೇಲೂರು ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಕಾಡಾನೆ ಸಮಸ್ಯೆ ಹೆಚ್ಚಾಗಿ ರೈತರ ಬೆಳೆಗಳು ಒಂದು ಕಡೆ ನಾಶ ವಾದರೇ, ಇನ್ನೊಂದು ಕಡೆ ಅದೆಷ್ಟೋ ಪ್ರಾಣ ಹಾನಿ ಸಂಭವಿಸಿದೆ. ಹಾಸನ ಜಿಲ್ಲೆಯೊಂದ ರಲ್ಲಿ 2001ರಿಂದ ಈವರೆಗೆ ಜಿಲ್ಲೆಯಲ್ಲಿ ಕಾಡಾನೆಯಿಂದ ಮೃತಪಟ್ಟವರ ಸಂಖ್ಯೆ 63ಕ್ಕೆ ಏರಿದ್ದು, ಕಾಡಾನೆಯಿಂದ ತೀವ್ರವಾಗಿ ಗಾಯಗೊಂಡವರು 220 ಜನರಿದ್ದಾರೆ. ಸರಿ ಸುಮಾರು 31528 ಪ್ರಕರಣಗಳಲ್ಲಿ ಕಾಡಾನೆಗಳ ದಾಳಿಗೆ ಬೆಳೆ ಹಾನಿಗೊಳ ಗಾಗಿದೆ ಎಂದರು.

ರಾಜ್ಯ ಸರ್ಕಾರದಿಂದ 2001ರಿಂದ ಈ ವರೆಗೆ ಬೆಳೆ ನಷ್ಟ ಪರಿಹಾರವಾಗಿ ಸರಿ ಸುಮಾರು 7.75 ಕೋಟಿ ರೂಗಳನ್ನು ನೀಡ ಲಾಗಿದೆ. ರಾಜ್ಯ ಸರ್ಕಾರ ಅವೈಜ್ಞಾನಿಕ ವಾಗಿ ಬೆಳೆ ಪರಿಹಾರ ನೀಡುತ್ತಿದ್ದು. ಸರಿ ಸುಮಾರು 45 ಕೋಟಿಗೂ ಹೆಚ್ಚಿನ ಬೆಳೆ ನಾಶವಾಗಿದೆ. ಸಧ್ಯ ಜಿಲ್ಲೆಯಲ್ಲಿ ಕಾಡಾನೆ ದಾಳಿಗೊಳಗಾಗಿ ತೀವ್ರವಾಗಿ ಗಾಯ ಗೊಂಡಿರುವ 221 ಮಂದಿಗೆ 41.9 ಕೋಟಿ ರೂ ಪರಿಹಾರ ,1.79 ಕೋಟಿರೂಗಳನ್ನು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ 63 ಮೃತ ಕುಟುಂಬಗಳಿಗೆ ಪರಿಹಾರ ನೀಡ ಲಾಗಿದೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿ ಹಾರ ನೀಡುವ ಉದ್ದೇಶದಿಂದ ಈಗಾ ಗಲೇ 26-07-2018ರಂದು ರಾಜ್ಯ ಸರ್ಕಾರ 50 ಕೋಟಿ ರೂ ಅನುದಾನ ಮಂಜೂರು ಮಾಡಿದೆ. ಇದಕ್ಕಾಗಿ ಪ್ರಸ್ತಾವನೆ ಕೂಡ ಸಿದ್ಧಗೊಂಡಿದೆ ಎಂದರು.

ಆನೆ ಕಾರಿಡಾರ್ ಪ್ರಸ್ತಾವನೆಯ ಒಟ್ಟು ವೆಚ್ಚ 272 .87 ಕೋಟಿ ಎಂದು ಅಂದಾ ಜಿಸಿದ್ದು ಇದರಲ್ಲಿ ಸರ್ಕಾರ ಈಗಾಗಲೇ 50 ಕೋಟಿ ರೂ ಬಿಡುಗಡೆ ಮಾಡಿದೆ. ಈಗ ಕ್ಯಾಬಿನೆಟ್ ಮುಂದೆ ಈ ಯೋಜನೆ ವಿಚಾರ ಪ್ರಸ್ತಾಪಗೊಂಡರೆ ಯೋಜನೆ ಕಾರ್ಯ ರೂಪಕ್ಕೆ ಬರಬೇಕಿದೆ. ಇನ್ನು ರಾಜ್ಯ ಸರ್ಕಾರ ಜಾರಿಗೆ ತರುವ ಇಂತಹ ಯೋಜನೆಗಳಿಗೆ ಕೇಂದ್ರ ಸರ್ಕಾರದ ಕ್ಯಾಂಪ್ ಯೋಜನೆ ಯಡಿ ಅನುದಾನ ಲಭ್ಯವಿದ್ದು ಕ್ಯಾಂಪ್ ಯೋಜನೆಯಲ್ಲಿ 36 ಸಾವಿರ ಕೋಟಿ ಅನುದಾನವಿದ್ದರೂ ಬಳಕೆಯಾಗದೆ ಕೊಳೆಯುತ್ತಿದೆ ಎಂದು ದೂರಿದರು.

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಆಡಳಿತ ನಡೆಸುವ ಅಧಿಕಾರಿಗಳು, ಜನ ಪ್ರತಿನಿಧಿಗಳು, ಸರ್ಕಾರಗಳು ಸಂಪೂರ್ಣವಾಗಿ ವಿಫಲ ವಾಗಿದ್ದಾರೆ ಎಂದು ಆರೋಪಿಸಿದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷದಿಂದ ಪ್ರಾಣ ಹಾನಿ ಹಾಗೂ ಬೆಳೆ ಹಾನಿ ಸಂಭವಿಸಿದೆ. ಆದರೂ ಹಾಸನ ಜಿಲ್ಲೆಯನ್ನು ಕಳೆದ 5 ಅವಧಿಗಳಿಂದ ಪ್ರತಿನಿಧಿಸುತ್ತಿರುವ ಮಾಜಿ ಪ್ರಧಾನಿ ದೇವೇಗೌಡರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂದು ದೂರಿದ ಅವರು, ಈ ಭಾಗದ ಜನರು ಇತ್ತೀಚೆಗೆ ಬಾಳ್ಳುಪೇಟೆಯಲ್ಲಿ ಐದಾರು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ. ಆಹೋರಾತ್ರಿ ಧರಣಿ ನಡೆಸಿ ತಮ್ಮ ಆತಂಕ ವ್ಯಕ್ತಪಡಿಸಿ ದ್ದಾರೆ. ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದಿದ್ದಾರೆ. ಆದರೆ ಯಾವ ಸರ್ಕಾರವೂ ಇದನ್ನು ತೀಕ್ಷ್ಣವಾಗಿ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

Translate »