ಪ್ರಿಯಕರನೊಂದಿಗೆ ಲಾಡ್ಜ್‍ಗೆ ತೆರಳಿದ್ದ ಯುವತಿ ಅನುಮಾನಾಸ್ಪದ ಸಾವು
ಹಾಸನ

ಪ್ರಿಯಕರನೊಂದಿಗೆ ಲಾಡ್ಜ್‍ಗೆ ತೆರಳಿದ್ದ ಯುವತಿ ಅನುಮಾನಾಸ್ಪದ ಸಾವು

December 21, 2018

ಹಾಸನ: ಪ್ರಿಯಕರನೊಂದಿಗೆ ಲಾಡ್ಜ್‍ಗೆ ತೆರಳಿದ್ದ ಯುವತಿಯೋರ್ವಳು ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮದ ನಿವಾಸಿ ಚಿರಂತಿ(24) ಎಂಬಾಕೆ ಅನುಮಾನಾಸ್ಪದವಾಗಿ ಸಾವಿಗೀಡಾ ದವಳಾಗಿದ್ದು, ಈಕೆ ಹಾಸನದ ತಣ್ಣೀರುಹಳ್ಳ ಬಳಿಯಿರುವ ಬುಲೆಟ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದಳು.ಈಕೆ ಬುಧವಾರ ರಾತ್ರಿ ತನ್ನ ಪ್ರಿಯಕರನಾದ ಆಟೋ ಚಾಲಕ ರಾಜೇಶ್‍ನೊಂದಿಗೆ ಹಾಸನದ ಕಟ್ಟಿನಕೆರೆ ಮಾರುಕಟ್ಟೆಯ ಲಾಡ್ಜ್‍ನಲ್ಲಿ ವಾಸ್ತವ್ಯ ಹೂಡಿದ್ದರು.

ಬೆಳಿಗ್ಗೆ ಆಕೆ ಕೊಠಡಿಯ ಬಾತ್‍ರೂಂನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಕಂಡು ಬಂದಿದ್ದು, ಆಕೆಯ ಪ್ರಿಯಕರನೇ ಈ ಬಗ್ಗೆ ಲಾಡ್ಜ್ ಮಾಲೀಕರಿಗೆ ತಿಳಿಸಿದ್ದಾರೆ. ತಾನು ಮಲಗಿದ್ದ ವೇಳೆ ಈಕೆ ಬಾತ್‍ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಯಹತ್ಯೆಗೆ ಶರಣಾಗಿದ್ದಾಳೆ ಎಂದು ಪ್ರಿಯಕರ ತಿಳಿಸಿದ್ದು, ಈಕೆಯ ಸಾವಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಈಕೆ ಈಗಾಗಲೇ ಮದುವೆಯಾಗಿದ್ದು, ಗಂಡನಿಂದ ದೂರವಾಗಿದ್ದರು ಎಂದು ಮೂಲಗಳಿಂದ ತಿಳಿದಿದೆ. ಈ ಸಂಬಂಧ ಹಾಸನ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »