ನೂತನ ಕೇಬಲ್ ದರ ಖಂಡಿಸಿ ಮೈಸೂರಲ್ಲಿ ಕೇಬಲ್ ಆಪರೇಟರ್‍ಗಳ ಪ್ರತಿಭಟನೆ
ಮೈಸೂರು

ನೂತನ ಕೇಬಲ್ ದರ ಖಂಡಿಸಿ ಮೈಸೂರಲ್ಲಿ ಕೇಬಲ್ ಆಪರೇಟರ್‍ಗಳ ಪ್ರತಿಭಟನೆ

December 21, 2018

ಮೈಸೂರು:  ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿ ಕಾರ (ಟ್ರಾಯ್) ಜಾರಿಗೆ ತಂದಿರುವ ಅವೈಜ್ಞಾನಿಕವಾದ ನೂತನ ಕೇಬಲ್ ದರ ಪಟ್ಟಿ ಯನ್ನು ಹಿಂಪಡೆಯುವಂತೆ ಆಗ್ರಹಿಸಿ ಮೈಸೂರು ಜಿಲ್ಲಾ ಕೇಬಲ್ ಟಿವಿ ಆಪರೇಟರ್ಸ್ ವೆಲ್‍ಫೇರ್ ಅಸೋಸಿಯೇಷನ್ ಸದಸ್ಯರು ಪ್ರತಿಭಟನೆ ನಡೆಸಿದರು. ಮೈಸೂರಿನ ನ್ಯಾಯಾಲಯದ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ನಂತರ ಪ್ರತಿಭಟನೆ ಆರಂಭಿಸಿದ ಕೇಬಲ್ ಆಪರೇಟರ್‍ಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಕಾನೂನು ರೂಪಿಸದಿದ್ದರೂ ಟ್ರಾಯ್ ಹೊಸ ನಿಯಮ ಜಾರಿಗೆ ತರಲು ಮುಂದಾಗಿರುವುದು ಖಂಡನೀಯ ಎಂದು ಕಿಡಿಕಾರಿದರು. ಟ್ರಾಯ್ ಡಿ.29ರಿಂದ ಅವೈಜ್ಞಾನಿಕ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದ್ದು ಇದು ಸಾರ್ವಜನಿಕರಿಗೆ ವಿರುದ್ಧವಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಇದನ್ನೇ ನಂಬಿ ಜೀವನ ನಡೆಸುತ್ತಿರುವ 3000ಕ್ಕೂ ಹೆಚ್ಚು ಕೇಬಲ್ ಆಪರೇಟರ್‍ಗಳು, ಅವರ ಕುಟುಂಬ, ಸಹಾಯಕರು ಬೀದಿಗೆ ಬೀಳಲಿದ್ದಾರೆ ಎಂದು ಕಿಡಿಕಾರಿದರು.

ಆರಂಭದಲ್ಲಿ 30 ಚಾನಲ್‍ಗಳಿಂದ ಆರಂಭಿಸಿ ಇದೀಗ 350 ಎಸ್‍ಡಿ ಚಾನೆಲ್‍ಗಳನ್ನು ಕೇವಲ 250ರಿಂದ 350 ರೂ.ಗಳಿಗೆ ನೀಡುತ್ತಿz್ದÉೀವೆ. ಆದರೆ ಹೊಸ ನಿಯಮ ಜಾರಿಗೆ ಬಂದರೆ ಕೇವಲ 125 ಚಾನೆಲ್‍ಗಳಿಗೆ 475 ರೂ.ಗೂ ಹೆಚ್ಚು ಹಣ ನೀಡಬೇಕು. ಜನಸಾಮಾ ನ್ಯರಿಗೆ ಇದು ಹೊರೆಯಾಗಲಿದೆ. ಅಲ್ಲದೆ ಶೇ.18ರಷ್ಟು ಜಿಎಸ್‍ಟಿ ಹಾಕಿ ಕೇಂದ್ರ ಸರ್ಕಾರ ಗಾಯಕ್ಕೆ ಉಪ್ಪು ಸುರಿಯುತ್ತಿದೆ. ಈ ನಿಯಮವೇನಾದರೂ ಜಾರಿಗೆ ಬಂದರೆ ದೇಶದಲ್ಲಿ ರುವ 2.3 ಲಕ್ಷ ಕೇಬಲ್ ಆಪರೇಟರ್‍ಗಳು, 10 ಲಕ್ಷ ಉದ್ಯೋಗಿಗಳು ಬೀದಿ ಪಾಲಾಗಿ ದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಮತ್ತೊಮ್ಮೆ ಪರಿಶೀಲನೆ ಮಾಡಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮೈಸೂರು ಕೇಬಲ್ ಟಿವಿ ಆಪರೇಟರ್ಸ್ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ಉಪಾಧ್ಯಕ್ಷ ಬೋರೇಗೌಡ, ಸಂಚಾಲಕರಾದ ಎಸ್.ಮಂಜುನಾಥ್, ಆನಂದ್.ಪಿ, ವಿಶ್ವನಾಥ್ ಸೇರಿದಂತೆ ನೂರಾರು ಕೇಬಲ್ ಟಿವಿ ಮಾಲೀಕರು ಮತ್ತು ಆಪರೇಟರ್‍ಗಳು ಪಾಲ್ಗೊಂಡಿದ್ದರು.

Translate »