ಸತ್ಯಮಂಗಲ ಗ್ರಾಪಂ ವ್ಯಾಪ್ತಿಯಲ್ಲಿ ಮೀಸಲಿಟ್ಟ ಜಮೀನನ್ನು  ಸ್ಥಳೀಯ ದಲಿತರಿಗೆ ಹಂಚುವಂತೆ ಆಗ್ರಹಿಸಿ ಪ್ರತಿಭಟನೆ
ಹಾಸನ

ಸತ್ಯಮಂಗಲ ಗ್ರಾಪಂ ವ್ಯಾಪ್ತಿಯಲ್ಲಿ ಮೀಸಲಿಟ್ಟ ಜಮೀನನ್ನು ಸ್ಥಳೀಯ ದಲಿತರಿಗೆ ಹಂಚುವಂತೆ ಆಗ್ರಹಿಸಿ ಪ್ರತಿಭಟನೆ

December 21, 2018

ಹಾಸನ: ನಗರದ ಸಮೀಪ ಇರುವ ಸತ್ಯಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳ ಹಿಂದೆ ಮೀಸಲಿಟ್ಟ ಜಾಗವನ್ನು ಸ್ಥಳೀಯ ದಲಿತ ರಿಗೆ ನೀಡುವಂತೆ ಆಗ್ರಹಿಸಿ ಗುರುವಾರ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

20 ವರ್ಷದಿಂದ ದಲಿತರಿಗಾಗಿ 5 ಎಕರೆ ಜಾಗವನ್ನು ಮೀಸಲಾಗಿ ಇಡಲಾಗಿತ್ತು. ಎಸಿ ಮೂಲಕ ಸಮನ್ವಯ ಸಮಿತಿ ಕರೆದು ನಮ್ಮ ಮೂಲಕ ಭೂಮಿ ಹಂಚಿಕೆ ಮಾಡು ವುದಾಗಿ ಹೇಳಿದ್ದಾರೆ. ಮೊದಲಿನಿಂದ ಸತ್ಯಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿ ಯಲ್ಲಿ ಇರುವ ಮೂಲ ದಲಿತರಿಗೆ ಅವ ಕಾಶ ಮಾಡಿಕೊಟ್ಟು ನಂತರ ಉಳಿದ ದಲಿತರಿಗೆ ನೀಡಬೇಕೆಂಬ ಬೇಡಿಕೆ ನಮ್ಮದು ಆಗಿದ್ದು, ಹಿಂದೆ ಜಿಲ್ಲಾಧಿಕಾರಿ ಯಾಗಿದ್ದ ಅನ್ಬುಕುಮಾರ್‍ರವರು ಸ್ಥಳೀಯ ದಲಿತರಿಗೆ ಅವಕಾಶ ಮಾಡಿ ಕೊಟ್ಟು ನಂತರ ಉಳಿದ ಭೂಮಿಯನ್ನು ಇತರರಿಗೆ ಹಂಚಿಕೆ ಮಾಡುವಂತೆ ನ್ಯಾಯಾಲಯದ ಮೂಲಕ ಹೇಳಿದ್ದರು ಎಂದರು.

ಆದರೆ ದಲಿತ ಮುಖಂಡರೆಂದು ಕೆಲ ವರು ಸಮಿತಿಯನ್ನು ನಾವೇ ಮಾಡಿ ಕೊಂಡಿದ್ದೇವೆ ಎಂದು ಹೇಳಿ ಅವರೇ ಭೂಮಿ ಹಂಚಿಕೆಯ ದಲಿತರ ಪಟ್ಟಿಯನ್ನು ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಇವರು ಸಮಿತಿ ಮಾಡಿಕೊಂಡಿರುವ ಬಗ್ಗೆ ಮಾಹಿ ತಿಯೇ ಇರುವುದಿಲ್ಲ. ನಾವು ಹಿಂದೆ ಜಿಲ್ಲಾಧಿಕಾರಿಗೆ ಮತ್ತು ಉಪ ವಿಭಾಗಾಧಿ ಕಾರಿಗೆ ಮೂಲ ದಲಿತರಾದ ನಾವು ಸ್ಥಳೀ ಯರಿಗೆ ನಿವೇಶನ ನೀಡುವಂತೆ ಅರ್ಜಿ ಕೊಟ್ಟು ಬಂದಿದ್ದೇವೆ. ಆದರೆ ಶ್ರೀಮಂತ ರಾಗಿರುವ ಪ್ರಭಾವಿ ದಲಿತರು ನಮ್ಮನ್ನು ಕಡೆಗಣಿಸಿ ಅವರು ಹೇಳಿದವರಿಗೆ ಭೂಮಿ ನೀಡುವಂತೆ ಪಟ್ಟಿಯನ್ನು ಕೊಟ್ಟಿದ್ದಾರೆ. ನಂತರದಲ್ಲಿ ಎಸಿಯವರು ಪ್ರಕಟಣೆ ಹೊರಡಿ ಸಿದ್ದು, ಈ ಪಟ್ಟಿಯಲ್ಲಿ ತಡೆ ಇದ್ದಲ್ಲಿ ಆಕ್ಷೇಪಿಸಿ ಸಲ್ಲಿಸಬಹುದು ಎಂದು ತಿಳಿದು ಬಂದಿತು.

ಈ ಸಮನ್ವಯ ಪಟ್ಟಿ ತಯಾರು ಆಗಿ ರುವುದು ನಮಗೆ ಗೊತ್ತಿರುವುದಿಲ್ಲ. ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲೇ ಮೂಲ ದಲಿತರಿಗೆ ಮೊದಲು ಭೂಮಿ ಹಂಚಿ ಕೊಡಬೇಕು ಎಂದು ಸಭೆಯಲ್ಲಿ ಕೇಳಿ ದಾಗ ಸಮನ್ವಯತೆ ಸಮಿತಿ ಸಭೆ ಕರೆದು ನಿಮ್ಮೆ ಲ್ಲರ ಸಲಹೆ ಪಡೆಯುವುದಾಗಿ ಹೇಳಿ ಕಳುಹಿಸಲಾಗಿತ್ತು. ಈ ವೇಳೆ ಪ್ರಭಾವಿ ದಲಿ ತರು ಹಣ ಪಡೆದು ಅವರಿಗೆ ಬೇಕಾದ ವರಿಗೆ ಚಿಕ್ಕಹೊನ್ನೇನಹಳ್ಳಿ, ಹೌಸಿಂಗ್ ಬೋರ್ಡ್, ಕೃಷ್ಣ ನಗರ, ಸ್ಲಂ ಬೋರ್ಡ್ ಇತರೆ ಭಾಗಗಳಲ್ಲಿ ಜಾಗ ಪಡೆದು ಅನೇಕ ಮನೆ ಕಟ್ಟಿದವರಿಗೆ ಮತ್ತು ಸಂಬಂಧಿಕರಿಗೆ 10 ರಿಂದ 15 ಸೈಟನ್ನು ಹಂಚಿಕೆ ಮಾಡಿ ಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೊಸ ಪಟ್ಟಿ ಮಾಡಿ ಭೂಮಿ ಹಂಚಿಕೆ ಮಾಡುವುದಾಗಿ ಹೇಳಿ ದ್ದರೂ ಯಾರೋ ಪುಟ್ಟಯ್ಯ ಎನ್ನು ವವರು ಸೇರಿ ಇತರ ಪ್ರಭಾವಿ ದಲಿತರು ಹಣ ಪಡೆದು ಭೂಮಿ ಇರುವವರ ಹೆಸರನ್ನು ನೀಡಿದ್ದಾರೆ. ಯಾವ ಕಾರಣಕ್ಕೂ ಅವರಿಗೆ ಭೂಮಿ ಹಂಚಿಕೆ ಮಾಡಲು ನಾವು ಬಿಡುವುದಿಲ್ಲ ಎಂದು ಪ್ರತಿ ಭಟನೆಯಲ್ಲಿ ನ್ಯಾಯಕ್ಕಾಗಿ ಘೋಷಣೆ ಕೂಗಿದರು. ನಿಜವಾದ ಸ್ಥಳೀಯ ದಲಿತ ರನ್ನು ಕಡೆಗಣಿಸಿ ಬೇಕಾದವರ ಪಟ್ಟಿ ಮಾಡಿರುವವರ ವಿರುದ್ಧ ಜಿಲ್ಲಾಡಳಿತಕ್ಕೆ ಮತ್ತು ಉಪವಿಭಾಗಾಧಿಕಾರಿಗೆ ದೂರು ನೀಡುವುದಾಗಿ ಎಚ್ಚರಿಸಿದರು. ಈ ವೇಳೆ ಕೆಲ ಸಮಯ ದಲಿತ-ದಲಿತರ ನಡುವೇ ಮಾತಿನ ವಾಗ್ವಾದ ಸಂಭವಿಸಿತು. ಮುನ್ನೆಚ್ಚೆರಿಕಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡ ಲಾಗಿ ಶಾಂತಿ ಕಾಪಾಡಿದರು.

Translate »