ಕಂದಾಯ ಇಲಾಖೆ ಸಿಬ್ಬಂದಿಗೆ ಕಾನೂನು ಅರಿವು
ಮೈಸೂರು

ಕಂದಾಯ ಇಲಾಖೆ ಸಿಬ್ಬಂದಿಗೆ ಕಾನೂನು ಅರಿವು

December 21, 2018

ನಂಜನಗೂಡು:  ನಂಜನ ಗೂಡು ಕಂದಾಯ ಇಲಾಖೆಯ ಸಿಬ್ಬಂದಿಗೆ ಪ್ರಸ್ತುತ ಇಂದು ಬಹಳ ಪ್ರಮುಖವಾಗಿ ತಿಳಿಯಲೇಬೇಕಾದ ಸರ್ಕಾರದ ಯೋಜನೆ ಮತ್ತು ಅನುಸರಿಸಬೇಕಾದ ಹಲವಾರು ಕಾನೂನಿನ ಕ್ರಮಗಳ ಬಗ್ಗೆ ತಿಳಿಸುವ ಹಿನ್ನಲೆ ಯಲ್ಲಿ ಕಾನೂನು ಅರಿವು ನೆರವು ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾ ಧೀಶರಾದ ಎಸ್.ಕೆ.ಒಂಟಿಗೋಡಿಯವರು ತಿಳಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಾರ್ವಜನಿಕರಿಗೆ ಮತ್ತು ಅದರಲ್ಲೂ ಮುಖ್ಯವಾಗಿ ರೈತರಿಗೆ ಬೇಕಾದ ಆರ್.ಟಿ.ಸಿ. ಇನ್ನೂ ಮುಂತಾದ ಮಾಹಿತಿಗಳು ಕೇವಲ ಕಂದಾಯ ಇಲಾಖೆಯಲ್ಲಿ ಮಾತ್ರ ದೊರಕುವುದರಿಂದ ರೈತರು ಸರದಿ ಸಾಲಿನಲ್ಲಿ ನಿಂತು ತಮಗೆ ಬೇಕಾದ ಮಾಹಿತಿ ಗಾಗಿ ಅರ್ಜಿಗಳನ್ನು ನೀಡಿ ಕಾಯುವುದು ಸಾಮಾನ್ಯವಾಗಿದೆ. ಕಂದಾಯ ಇಲಾಖೆ ಸಿಬ್ಬಂದಿ ಕಾನೂನಿನ ಪ್ರಕಾರ ಸರಿಯಾದ ಮಾಹಿತಿ ನೀಡಲು ಸ್ವಲ್ಪ ವಿಳಂಬವಾಗಿ, ಗೊಂದಲಕ್ಕೆ ಕಾರಣವಾಗುತ್ತದೆ. ಯಾವುದು ಸರಿ ? ಯಾವುದು ತಪ್ಪು ? ಇದು ಸರಿಯಾದ ಕಾನೂನಿನ ಅಡಿಯಲ್ಲಿರುವುದೇ? ಎಂದು ತಿಳಿದುಕೊಳ್ಳುವುದು ಅವಶ್ಯಕ. ಈ ನಿಟ್ಟಿನಲ್ಲಿ ಕಾರ್ಯಾಗಾರ ಏರ್ಪಡಿಸಿ ರುವುದು ಔಚಿತ್ಯಪೂರ್ಣಎಂದರು.

ನಂಜನಗೂಡು ಹಿರಿಯ ಸಿವಿಲ್ ನ್ಯಾಯಾ ಧೀಶ ಬಿ.ಪಿ.ದೇವಮಾನೆ ಅವರು ಮಾತನಾಡಿ, ಕಂದಾಯ ಇಲಾಖೆ ನಿಯಮಗಳಲ್ಲಿ ಹಲವಾರು ತಿದ್ದುಪಡಿಗಳು ಆಗಿವೆ, ಅದಕ್ಕೆ ತಕ್ಕಂತೆ ಕಾನೂನು ಯೋಜನೆಗಳ ಆದೇಶದ ಮೇರೆಗೆ ನೀಡಲಾಗುವ ಮಾಹಿತಿ ಪ್ರಕಾರ ಸಿಬ್ಬಂದಿಗೆ ಕಾರ್ಯಾಗಾರ ಏರ್ಪಡಿಸಿರುವುದು ಬಹಳ ಸೂಕ್ತ ಎಂದರು.

ಉಪವಿಭಾಗಾಧಿಕಾರಿ ಎಚ್.ಎನ್. ಶಿವೇಗೌಡ ಮಾತನಾಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್.ಶಿವಕುಮಾರ್, ವಕೀಲರ ಸಂಘದ ಅಧ್ಯಕ್ಷ ಗಿರಿರಾಜ್, ತಹಸಿಲ್ದಾರ್ ದಯಾನಂದ, ಪೆÇಲೀಸ್ ಅಧಿಕಾರಿ ಸಿ.ಮಲ್ಲಿಕ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಪುರು ಷೋೀತ್ತಮ್, ಸವಿತಾ, ಕಾರ್ಯದರ್ಶಿ ಹೆಜ್ಜಿಗೆ ನಾಗೇಂದ್ರ, ಉಪ ತಹಸಿಲ್ದಾರ್ ಬಾಲಸುಬ್ರಹ್ಮಣ್ಯ ಸೇರಿದಂತೆ ಕಂದಾಯ ಇಲಾಖೆಯ ಹಲವು ಸಿಬ್ಬಂದಿ ಹಾಜರಿದ್ದರು.

Translate »