ತಾಯಿ-ಮಗುವಿನ ಆರೋಗ್ಯದ ಕುರಿತು ಬೀದಿ ನಾಟಕ
ಮೈಸೂರು

ತಾಯಿ-ಮಗುವಿನ ಆರೋಗ್ಯದ ಕುರಿತು ಬೀದಿ ನಾಟಕ

December 21, 2018

ಬೈಲಕುಪ್ಪೆ: ತಾಯಿ ಮತ್ತು ಮಗುವಿನ ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಪಂ ವತಿಯಿಂದ ಅನಿಕೇತನ ಕಲಾ ತಂಡದವರು ಅರಿವು ಕಾರ್ಯಕ್ರಮ ನಡೆಸಿದರು. ಕಣಗಾಲು ಗ್ರಾಮದ ಸರ್ಕಲ್‍ನಲ್ಲಿ ಆರೋಗ್ಯ ಕೇಂದ್ರದ ಡಾ.ಸುಜಾತಲಕ್ಷ್ಮಿ ನೇತೃತ್ವದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆ ಬೀದಿನಾಟಕ ಪ್ರದರ್ಶಿಸಿ ಅರಿವು ಮೂಡಿಸಿದರು.

ಡಾ.ಸುಜಾತಲಕ್ಷ್ಮಿ ಮಾತನಾಡಿ ಗರ್ಭಿಣಿಯರು ಆರೋಗ್ಯದ ಬಗ್ಗೆ ಎಚ್ಚರವಹಿಸಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ತಾಯಂದಿರು ಆಗಾಗ್ಗೆ ತಪಾಸಣೆ ಮಾಡಿಸಿಕೊಂಡು ಸೂಕ್ತ ಸಲಹೆ ಪಡೆದು ಉಚಿತವಾಗಿ ಸರ್ಕಾರದ ವತಿಯಿಂದ ಕೊಡುವ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ಕಣಗಾಲು ಗ್ರಾ.ಪಂ ಅಧ್ಯಕ್ಷ ಹನುಮಂತ, ಮಾಜಿ ಅಧ್ಯಕ್ಷ ಮಹದೇವ್, ಪುಟ್ಟಣ್ಣ ಕಣಗಾಲು ಟ್ರಸ್ಟ್ ಅಧ್ಯಕ್ಷ ಜಯಣ್ಣ, ಕಣಗಾಲು ಸ.ಹಿ.ಪ್ರಾ.ಶಾಲೆ ಮುಖ್ಯಶಿಕ್ಷಕ ಯದುಕುಮಾರ್, ಅಂಗನವಾಡಿ ಸಹಾಯಕಿಯರು ಹಾಗೂ ಆರೋಗ್ಯ ಸಹಾಯಕಿಯರು ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »