ಮೈಸೂರಿನಲ್ಲಿ ಭಕ್ತಿ ಭಾವದ ‘ಹನುಮ’ ನಾಮ ಸ್ಮರಣೆ
ಮೈಸೂರು

ಮೈಸೂರಿನಲ್ಲಿ ಭಕ್ತಿ ಭಾವದ ‘ಹನುಮ’ ನಾಮ ಸ್ಮರಣೆ

December 21, 2018

ಮೈಸೂರು:  ಹನುಮ ಜಯಂತಿ ಅಂಗವಾಗಿ ಗುರುವಾರ ಮೈಸೂರಿನಲ್ಲಿ ಹನುಮ ನಾಮಸ್ಮರಣೆ ನಡೆಯಿತು. ಹನುಮ ದೇವಾಲಯಗಳಲ್ಲಿ ಹೋಮ, ಹವನ, ಅಭಿಷೇಕ, ವಿಶೇಷ ಅಲಂಕಾರ, ಪೂಜೆ, ಅನ್ನ ಸಂತರ್ಪಣೆ ನಡೆದವು. ಭಕ್ತರು ಭಕ್ತಿಯಿಂದ ಹನುಮನ ದರ್ಶನ ಪಡೆದು ಜೈಕಾರ ಹಾಕಿದರು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ, ಗಂಗೋತ್ರಿ ಬಡಾವಣೆ ಆಂಜ ನೇಯಸ್ವಾಮಿ ದೇವಸ್ಥಾನ, ಗಣಪತಿ ಸಚ್ಚಿದಾ ನಂದ ಆಶ್ರಮದ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ, ಜೆಎಸ್‍ಎಸ್ ಆಸ್ಪತ್ರೆ ಬಳಿ ಪಾತಾಳಾಂಜನೇಯಸ್ವಾಮಿ ದೇವಸ್ಥಾನ, ಇರ್ವಿನ್ ರಸ್ತೆ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯ, ಹನುಮಂತ ನಗರದ ವೀರಾಂಜನೇಯಸ್ವಾಮಿ ದೇವಸ್ಥಾನ, ಮಂಡಿ ಮೊಹಲ್ಲಾ ದತ್ತಾತ್ರೇಯ ಸ್ವಾಮಿ ದೇವಸ್ಥಾನ, ರಾಮಾನುಜ ರಸ್ತೆ ಕಾರ್ಯ ಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನ, ತ್ಯಾಗರಾಜ ರಸ್ತೆ ವೀರಾಂಜನೇಯಸ್ವಾಮಿ ದೇವಸ್ಥಾನ, ವಿದ್ಯಾರಣ್ಯಪುರಂ ರಾಮಲಿಂಗೇಶ್ವರಸ್ವಾಮಿ ದೇವಸ್ಥಾನ, ನಾರಾಯಣ ಶಾಸ್ತ್ರಿ ರಸ್ತೆಯ ಆಂಜನೇಯ ಸ್ವಾಮಿ ಗುಡಿ, ವಿಜಯನಗರ 2ನೇ ಹಂತದ ಪ್ರಸನ್ನ ಗಣಪತಿ ಮತ್ತು ವೀರಾಂಜನೇಯ ಸ್ವಾಮಿ ದೇವಸ್ಥಾನ, ಹೆಬ್ಬಾಳದಲ್ಲಿರುವ ಗಣಪತಿ, ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಹೆಬ್ಬಾಳು 1ನೇ ಹಂತ ಬಸವೇಶ್ವರನಗರದ ಮಾತಾ ಅಂಜ ನಾದೇವಿ, ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ, ಗೀತಾ ಮಂದಿರ, ಕೆಆರ್‍ಎಸ್ ರಸ್ತೆಯ ಗೋಕುಲಂನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ, ಕುವೆಂಪುನಗರ ವೀರಾಂ ಜನೇಯ ಸ್ವಾಮಿ ಸೇರಿದಂತೆ ಹನುಮ ದೇಗುಲಗಳಲ್ಲಿ ಭಕ್ತರು ಸರತಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡರು.

ಧಾರ್ಮಿಕ ದತ್ತಿ ಇಲಾಖೆಯ ವತಿ ಯಿಂದ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನ, ಆಂಜನೇಯಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ದೇವಾಲಯದ ಒಳಾ ವರಣವನ್ನು ನಾನಾ ಹೂವುಗಳಿಂದ ಅಲಂಕರಿ ಸಲಾಗಿತ್ತು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕಗಳ ನೆರವೇರಿಸಲಾಯಿತು.

ಇರ್ವಿನ್ ರಸ್ತೆಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆಯ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 18ನೇ ವರ್ಷದ ಹನುಮ ಜಯಂತಿ ಪ್ರಯುಕ್ತ ಪಂಚಾಮೃತ ಅಭಿಷೇಕ, ನವನೀತ ಅಲಂಕಾರ, ವಿಶೇಷ ಪೂಜೆ, ಹೋಮಗಳು ನಡೆದವು. ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಬೃಹತ್ ಕಾರ್ಯ ಸಿದ್ಧಿ ಆಂಜನೇಯ ಸ್ವಾಮಿಗೆ ವಿಶೇಷ ಹೋಮ, ಅಭಿಷೇಕ ನಡೆದರೆ, ಬನ್ನಿಮಂಟಪ ಬಡಾ ವಣೆ ಹನುಮಂತನಗರದ ಹನುಮ ದೇವಾ ಲಯದಲ್ಲಿಯೂ ವಿಶೇಷ ಪೂಜೆ ನಡೆಯಿತು.

ತ್ಯಾಗರಾಜ ರಸ್ತೆಯಲ್ಲಿರುವ ವೀರಾಂಜ ನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಿ, ಪ್ರಸಾದ ವಿನಿಯೋಗ ನಡೆಯಿತು. ಅಗ್ರಹಾರ ಜೆಎಸ್‍ಎಸ್ ಆಸ್ಪತ್ರೆ ಬಳಿ ಪಾತಾಳಾಂಜನೇಯಸ್ವಾಮಿ ದೇವಾ ಲಯದಲ್ಲಿಯೂ ವಿಶೇಷ ಪೂಜೆ ನೆರವೇರಿ ಸಲಾಯಿತು. ಮಂಡಿಮೊಹಲ್ಲಾ ಬೆಂಕಿನವಾಬ ರಸ್ತೆ ದತ್ತಾತ್ರೇಯಸ್ವಾಮಿ ದೇವಸ್ಥಾನದಲ್ಲಿ ದತ್ತ ಜಯಂತಿ ಮತ್ತು ಹನುಮ ಜಯಂತಿ ನಡೆದು ಅಭಿಷೇಕ, ಮಹಾಪೂಜೆ ನಡೆಯಿತು. ರಾಮಾನುಜ ರಸ್ತೆ ಶಿವರಾತ್ರೀಶ್ವರ ರಾಜೇಂದ್ರ ವೃತ್ತದಲ್ಲಿ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮನಿಗೆ ವಿಶೇಷ ಪೂಜೆ ನೆರವೇರಿತು. ವಿಜಯನಗರ 2ನೇ ಹಂತದಲ್ಲಿ ರುವ ಪ್ರಸನ್ನ ಗಣಪತಿ ಮತ್ತು ವೀರಾಂಜ ನೇಯ ಸ್ವಾಮಿ ದೇವಸ್ಥಾನದಲ್ಲಿ 12ನೇ ವರ್ಷದ ಹನುಮ ಜಯಂತ್ಯುತ್ಸವ ಪ್ರಯುಕ್ತ ಅಭಿ ಷೇಕ, ಹೋಮ, ಪೂರ್ಣಾಹುತಿ, ವಿಶೇಷ ಪೂಜೆ ನಡೆಯಿತು. ವಿದ್ಯಾರಣ್ಯಪುರಂ ರಾಮ ಲಿಂಗೇಶ್ವರ ದೇವಾಲಯದಲ್ಲಿಯೂ ಹನುಮ ನಿಗೆ ವಿಶೇಷ ಅಲಂಕಾರ, ಪೂಜೆ ನಡೆಯಿತು.

ಗೀತಾಮಂದಿರ ರಸ್ತೆ ಗೀತಾ ಪ್ರಚಾರಿಣೀ ಸಭಾ ಟ್ರಸ್ಟ್ ವತಿಯಿಂದ ಸಾಮೂಹಿಕ ಭಗ ವದ್ಗೀತೆ ಪಾರಾಯಣ, ಪ್ರಸಾದ ವಿನಿಯೋಗ ನಡೆಯಿತು. ಹೆಬ್ಬಾಳು 1ನೇ ಹಂತ ಭೈರ ವೇಶ್ವರÀನಗರದ ಮಾತಾ ಅಂಜನಾದೇವಿ ಮತ್ತು ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ ದಲ್ಲಿ 26ನೇ ವರ್ಷದ ಹನುಮ ಜಯಂತಿ ಪ್ರಯುಕ್ತ ಸ್ವಾಮಿಯ ರಥೋತ್ಸವ ಬಳಿಕ ಅನ್ನಸಂತರ್ಪಣೆ ನಡೆಸಲಾಯಿತು.

Translate »