ಸಂತ್ರಸ್ತರ ಆರೋಗ್ಯ ವಿಚಾರಿಸಿದ  ಚಾ.ನಗರ ಡಿಸಿ ಬಿ.ಬಿ.ಕಾವೇರಿ
ಮೈಸೂರು

ಸಂತ್ರಸ್ತರ ಆರೋಗ್ಯ ವಿಚಾರಿಸಿದ ಚಾ.ನಗರ ಡಿಸಿ ಬಿ.ಬಿ.ಕಾವೇರಿ

December 21, 2018

ಮೈಸೂರು: `ಚೆನ್ನಾಗಿ ಓದಿ ಡಾಕ್ಟರ್ ಆಗಿ. ಈಗ ತಿಳಿಯಿತಾ ಡಾಕ್ಟರ್ ಆಗುವುದು ಎಷ್ಟು ಮಹತ್ವದ್ದು ಎಂದು’ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಗುರುವಾರ ಮೈಸೂರಿನ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಿಂದ ಬಿಡುಗಡೆಯಾದ ಮಕ್ಕಳ ಆರೋಗ್ಯ ವಿಚಾರಿಸಿ, ಪ್ರೀತಿಯಿಂದ ತಿಳಿವಳಿಕೆ ಹೇಳಿದ ಪರಿಯಿದು.

ಆಸ್ಪತ್ರೆಯಲ್ಲಿದ್ದ ಎಲ್ಲಾ 9 ಮಕ್ಕಳು ಹಾಗೂ ಐವರು ವಯಸ್ಕರ ಭೇಟಿ ಮಾಡಿ, ಅವರಿಗೆ ನೀಡುತ್ತಿರುವ ಚಿಕಿತ್ಸಾ ವಿವರ ಹಾಗೂ ಆರೋಗ್ಯದ ಸ್ಥಿತಿ ಕುರಿತು ಮಾಹಿತಿ ಪಡೆದರು.ಇದೇ ವೇಳೆ ಆಸ್ಪತ್ರೆಯಿಂದ ಬಿಡುಗಡೆ ಯಾಗುವ ಮಕ್ಕಳು ಹಾಗೂ ಆಸ್ಪತ್ರೆಯ ಲ್ಲಿಯೇ ಇನ್ನೆರಡು ದಿನ ಚಿಕಿತ್ಸೆ ಪಡೆಯ ಲಿರುವ ಇಬ್ಬರು ಮಕ್ಕಳ ಬಗ್ಗೆ ಅತೀವ ಕಳಕಳಿ ವ್ಯಕ್ತಪಡಿಸಿದರು.

ನಿಮಗೆಲ್ಲ ಶುಭವಾಗಲಿ. ಊರಿಗೆ ಹೋದ ಮೇಲೆ ಎಲ್ಲರೂ ಶಾಲೆಗೆ ಹೋಗಬೇಕು. ಚೆನ್ನಾಗಿ ಓದಬೇಕು. ನೀವೆಲ್ಲಾ ಡಾಕ್ಟರ್ ಆಗಬೇಕು. ಈಗ ತಿಳಿಯಿತಾ ಡಾಕ್ಟರ್ ಆದರೆ ಎಷ್ಟು ಒಳ್ಳೆಯದು ಎಂದು ಹೇಳಿ ಶಾಲೆಗೆ ಹೋಗುವಂತೆ ಪ್ರೇರೇಪಿಸಿದರು.

ಸಾವಿನ ಸಂಖ್ಯೆ ನಿಯಂತ್ರಣ: `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಚಾಮ ರಾಜನಗರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು, ಸುಳವಾಡಿ ಮಾರಮ್ಮ ದೇವಾ ಲಯದ ವಿಷ ಪ್ರಸಾದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಚಾಮರಾಜನಗರ ಜಿಲ್ಲಾಡ ಳಿತ ಜಾಗೃತರಾಗಿ ಅಸ್ವಸ್ಥರಾದವರಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸುವುದಕ್ಕೆ ಕ್ರಮ ಕೈಗೊಂಡಿತು. ಪರಿಸ್ಥಿತಿ ಉಲ್ಬಣಿಸುತ್ತಿರು ವುದನ್ನು ಮನಗಂಡು ಮೈಸೂರು, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಂಬುಲೆನ್ಸ್ ಸೇವೆ ಪಡೆಯಲಾಯಿತು. ಬಹುತೇಕ ಎಲ್ಲಾ ಅಸ್ವಸ್ಥರನ್ನು ಮೈಸೂರಿಗೆ ರವಾನಿಸಲಾಯಿತು. ಇದಕ್ಕೆ ಮೈಸೂರು ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿತು. ಇದರಿಂದ ಸಾವಿನ ಸಂಖ್ಯೆ ನಿಯಂತ್ರಿಸಲು ಸಾಧ್ಯವಾಯಿತು ಎಂದರು.

ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ: ಸುಳವಾಡಿ ಪ್ರಕರಣದಿಂದಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆ, ಹನೂರು, ಕಾಮ ಗೆರೆ ಸೇರಿದಂತೆ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದಕ್ಕೆ ನಿರ್ಧರಿಸಲಾಗಿದೆ. ಇದಕ್ಕಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಐಸಿಯು ಸೌಲಭ್ಯವುಳ್ಳ ಆಂಬುಲೆನ್ಸ್ ಅನ್ನು ನೀಡಲಾಗುತ್ತದೆ ಎಂದರು.

ಮನೆ ಮನೆಗೆ ತೆರಳಿ ಪರಿಶೀಲನೆ: ಅಪರ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಮಾತ ನಾಡಿ, ವಿಷ ಪ್ರಸಾದ ಸೇವನೆಯಿಂದ ಅಸ್ವಸ್ಥಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಡಿಸ್‍ಚಾರ್ಜ್ ಆದವರ ಆರೋಗ್ಯ ಸ್ಥಿತಿ ಗಮನಿಸಲು ಜಿಲ್ಲಾಡಳಿತ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಹಾಗೂ ದಾದಿಯರಿಗೆ ಸೂಚಿಸಿದೆ. ಸಂತ್ರಸ್ಥರ ಮನೆ ಮನೆಗೆ ತೆರಳಿ ಪ್ರತಿ ದಿನ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವರದಿ ತಯಾರಿಸಲಾಗುತ್ತದೆ. ಅಗತ್ಯ ಬಿದ್ದರೆ ಪ್ರಾಥಮಿಕ ಕೇಂದ್ರ ಗಳಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತದೆ. ಇದಕ್ಕಾಗಿ ಎಲ್ಲಾ ಪ್ರಾಥಮಿಕ ಕೇಂದ್ರಗಳಿಗೆ ಐದಾರು ದಿನಗಳ ಕಾಲ ಬೇಕಾಗುವ ಔಷಧಿ ಗಳ ದಾಸ್ತಾನು ಮಾಡಲಾಗಿದೆ ಎಂದರ ಲ್ಲದೆ, ಬುಧವಾರ 21 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇಂದು 20ಕ್ಕೂ ಹೆಚ್ಚು ಮಂದಿ ಬಿಡುಗಡೆಯಾಗುತ್ತಿದ್ದಾರೆ ಎಂದರು.

Translate »