ಸುಳವಾಡಿ ದುರಂತ: ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿ  ಮೃತರ ಕುಟುಂಬಗಳಿಗೆ ವಿತರಿಸಿ
ಮೈಸೂರು

ಸುಳವಾಡಿ ದುರಂತ: ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿ ಮೃತರ ಕುಟುಂಬಗಳಿಗೆ ವಿತರಿಸಿ

December 27, 2018

ಮೈಸೂರು: ಚಾಮರಾಜನಗರ ಜಿಲ್ಲೆಯ ಸುಳವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಸ್ಥಾನದ ವಿಷ ಪ್ರಾಶನ ಪ್ರಕರಣದಲ್ಲಿ 17 ಮಂದಿ ಅಮಾಯಕ ರನ್ನು ಬಲಿ ತೆಗೆದುಕೊಂಡ ಪ್ರಕರಣ ಇದೊಂದು ರೀತಿ ಆಂತರಿಕ ಭಯೋತ್ಪಾದನೆ ಯಂತಿದೆ ಎಂದು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಅಭಿಪ್ರಾಯಪಟ್ಟಿದೆ.

ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ ಗಡಿ, ಬುಧ ವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಗಡಿಯಲ್ಲಿ ನಡೆಯುವ ಉಗ್ರ ವಾದ, ಭಯೋತ್ಪಾದನೆಗಿಂತ ಆಂತರಿಕ ಭಯೋತ್ಪಾದನೆ ಯಿಂದಲೇ ಹೆಚ್ಚಿನ ಸಾವು ನೋವುಗಳು ದೇಶದಲ್ಲಿ ಸಂಭವಿಸುತ್ತಿವೆ. ಇದಕ್ಕೆ ಸುಳವಾಡಿ ದೇಗುಲ ಘಟನೆಯೂ ನಿದರ್ಶನವಾಗಿದೆ ಎಂದರು.

ಪ್ರಕರಣದ ಪ್ರಮುಖ ಆರೋಪಿಗಳಾದ ಮಹ ದೇವಸ್ವಾಮಿ, ದೊಡ್ಡಯ್ಯ, ಅಂಬಿಕಾ, ಮಾದೇಶ ಅವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿ ಕೊಂಡು, ಅದನ್ನು ಮೃತರ ಕುಟುಂಬಗಳಿಗೆ ಹಂಚಿಕೆ ಮಾಡಬೇಕು. ಪ್ರಕರಣದ ತ್ವರಿತ ವಿಚಾರಣೆ ನಡೆಸಿ, ಆರೋಪಿಗಳನ್ನು ಮರಣ ದಂಡನೆಗೆ ಒಳಪಡಿಸಬೇಕು. ಅವರ ಪರವಾಗಿ ಯಾರೊಬ್ಬರೂ ವಕಾಲತ್ತು ವಹಿಸಬಾರದು ಎಂದು ಮನವಿ ಮಾಡಿದರು. ವಿಷ ಪ್ರಾಶನದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೆರವಿನ ಹಸ್ತ ಚಾಚಲು ಸಿದ್ಧವಿದ್ದು, ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಮೃತರ ಕುಟುಂಬಗಳಿಗೆ ಹಂಚಬೇಕೆಂದು ನ್ಯಾಯಾಲಯದಲ್ಲಿ ದಾವೆ ಹೂಡಲು ಸಿದ್ಧರಿದ್ದೇವೆ. ಸಂತ್ರಸ್ತರು ಮೊ-9972339292 ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಡೈರಿ ವೆಂಕಟೇಶ್, ವಕೀಲ ತ್ಯಾಗರಾಜ್, ಸಮಾಜ ಸೇವಕ ಸದಾನಂದ ಉಪಸ್ಥಿತರಿದ್ದರು.

Translate »