ಮೈಸೂರು: ಖ್ಯಾತ ಗಾಯಕ ಸಿ.ಅಶ್ವತ್ಥ್ ಅವರ 79ನೇ ಜನ್ಮದಿನದ ಪ್ರಯುಕ್ತ ಡಿ.29ರಂದು ಸಂಜೆ 5 ಗಂಟೆಗೆ ಮೈಸೂರಿನ ಪುರಭವನ ಆವರಣದಲ್ಲಿ ಭಾವರೂಪಕ ಪ್ರತಿಷ್ಠಾನದ ವತಿಯಿಂದ `ಕನ್ನಡವೇ ಸತ್ಯ’ ಹಾಗೂ `ಗಾನ ಗಾರುಡಿ ಸಿ.ಅಶ್ವತ್ಥ್’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸ ಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೌಡ್ಲೆ ರವೀಂದ್ರನಾಥ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕರಾದ ತನ್ವೀರ್‍ಸೇಠ್, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಇನ್ನಿತರರು ಭಾಗವಹಿಸುವರು ಎಂದರು. ಸಮಾರಂಭದ ಬಳಿಕ ಹಿನ್ನೆಲೆ ಗಾಯಕ ರಾದ ರಮೇಶ್ ಚಂದ್ರ, ಪಂಚಮ್ ಹಳಿಬಂಡಿ, ಕೆ.ಎ.ಸುರೇಖ, ಕನ್ನಡ ಕೋಗಿಲೆ ಶೋನ ಪ್ರಭು ಇನ್ನಿತರರಿಂದ ಕನ್ನಡ ಗೀತೆಗಳ ಗಾಯನ ನಡೆಯಲಿದೆ ಎಂದರು. ಗೋಷ್ಠಿ ಯಲ್ಲಿ ಗಾಯಕ ಚಂದ್ರಪ್ಪ, ಬಸಪ್ಪ, ರವಿಕುಮಾರ್, ಡಾ.ಬಸವರಾಜ್ ಉಪಸ್ಥಿತರಿದ್ದರು