ಋಷಿಮುನಿಗಳಿಂದ ಪ್ರತಿಷ್ಠಾಪಿಸಿದ ತಲಕಾವೇರಿಯ ಶಿವಲಿಂಗ ವಿಸರ್ಜನೆಗೆ ವಿರೋಧ
ಕೊಡಗು

ಋಷಿಮುನಿಗಳಿಂದ ಪ್ರತಿಷ್ಠಾಪಿಸಿದ ತಲಕಾವೇರಿಯ ಶಿವಲಿಂಗ ವಿಸರ್ಜನೆಗೆ ವಿರೋಧ

December 27, 2018

1992ರಲ್ಲಿ ಕಾಸರಗೋಡಿನ ಪರಿಣಿತ ದೈವಜ್ಞರಾದ ವಿಷ್ಣು ಹೆಬ್ಬಾರ್ ಪೆರಿಯಾರ್ ಕೂಡ ತಾಂಬೂಲ ಪ್ರಶ್ನೆ ಮೂಲಕ ಈ ವಿಚಾರವನ್ನು ವಿಮರ್ಶಿಸಿದ್ದರು. ಈ ಪ್ರಶ್ನಾ ಚಿಂತನೆಯಲ್ಲಿ ತಿಳಿದು ಬಂದ ಅಂಶದ ಪ್ರಕಾರ “ಯಾವುದೇ ಕಾರಣಕ್ಕೂ ಅಗಸ್ತ್ಯೇಶ್ವರ ಲಿಂಗವನ್ನು ಸ್ಥಳಾಂತರಿಸಬಾರದೆಂದು” ತಿಳಿಸಲಾಗಿದೆ. ಋಷಿಮುನಿಗಳು ಪ್ರತಿಷ್ಠಾಪಿಸಿದ ವಿಗ್ರಹಗಳ ಕಣಕಣವೂ ಚೈತನ್ಯಮಯವಾಗಿರುತ್ತವೆ ಎಂದೂ ಹೇಳಲಾಗಿದೆ. ಆದರೆ 1992ರ ಸಮಗ್ರ ಅಷ್ಟಮಂಗಲ ಪ್ರಶ್ನೆಗಳನ್ನು ಕಡೆಗಣಿಸಿ, ಹಿರಿಯ ದೈವಜ್ಞರ ಸೂಚನೆಗಳನ್ನು ಕಡೆಗಣಿಸಿ 2018ರ ಅಷ್ಟಮಂಗಲದ ವಿಚಾರಗಳನ್ನು ಅನುಷ್ಠಾನಗೊಳಿಸಲು ಕೆಲವರು ಮುಂದಾಗಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿದೆ. ಹೀಗಾಗಿ ಕಾವೇರಿ ಕ್ಷೇತ್ರದ ಮಹಿಮೆ ಅರಿತಿರುವ ಜೋತಿಷಿಗಳು, ಕಾವೇರಿ ಮಾತೆಯ ಭಕ್ತರು ಮತ್ತು ಭಾಗಮಂಡಲ ಗ್ರಾಮಸ್ಥರು ಶಿವಲಿಂಗ ವಿಸರ್ಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ:  ಪವಿತ್ರ ಕ್ಷೇತ್ರ ತಲ ಕಾವೇರಿಯ ಅಗಸ್ತ್ಯೇಶ್ವರ ಗುಡಿಯಲ್ಲಿದ್ದ ಋಷಿ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದ ಶಿವಲಿಂಗವನ್ನು ತಮಿಳುನಾಡಿನ ಪೂಂಪುಹಾರ್‍ನಲ್ಲಿ ವಿಸರ್ಜಿಸುವ ಪ್ರಸ್ತಾಪಕ್ಕೆ ಕಾವೇರಿ ಮಾತೆಯ ಭಕ್ತರು ಮತ್ತು ಭಾಗಮಂಡಲ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಚರ್ಚಿಸಲು ಶ್ರೀ ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾ ಪನಾ ಸಮಿತಿ ಅಷ್ಟಮಂಗಲ ಜ್ಯೋತಿ ಷ್ಯರಾದ ನಾರಾಯಣ ಪೊದುವಾಳ್ ನೇತೃತ್ವದಲ್ಲಿ ತಲಕಾವೇರಿಯಲ್ಲಿ ಇಂದು ಸಭೆ ಏರ್ಪಡಿಸಿತ್ತು. ಆದರೆ ಸಭೆಯಲ್ಲಿ ಜ್ಯೋತಿಷಿಗಳು, ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ಭಕ್ತರ ನಡುವೆ ಒಮ್ಮತ ಮೂಡದೇ, ಮೂರನೇ ಜ್ಯೋತಿಷಿ ಗಳ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾ ಯಿತು. ಶಿವಲಿಂಗವನ್ನು ಸಮುದ್ರದಲ್ಲಿ ವಿಸ ರ್ಜಿಸಲು ಸೂಚಿಸಿದ ಜ್ಯೋತಿಷಿಗಳನ್ನೇ ಇಂದಿನ ಸಭೆಗೆ ಆಹ್ವಾನಿಸಿರುವುದು ಸರಿ ಯಲ್ಲ. ಕ್ಷೇತ್ರದಲ್ಲಿ ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಪೂಜಾ ವಿಧಿ ವಿಧಾನಗಳು ಯಥಾಸ್ಥಿತಿಯಲ್ಲಿ ಮುಂದು ವರಿಯಬೇಕು ಎಂದು ಸಭೆಯಲ್ಲಿ ಕಾವೇರಿ ಭಕ್ತರು ಮತ್ತು ಗ್ರಾಮಸ್ಥರು ಪಟ್ಟು ಹಿಡಿ ದರು. ಮಾತ್ರವಲ್ಲದೇ, ಭಕ್ತರು, ಗ್ರಾಮ ಸ್ಥರು, ದೇವಾಲಯಗಳ ಪ್ರಮುಖರು ಹಾಗೂ ಸರಕಾರವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ನಿರ್ಧಾರಗ ಳನ್ನು ತೆಗೆದುಕೊಳ್ಳಬೇಕೆಂದು ಸಭೆಯಲ್ಲಿ ಬಲವಾದ ಸಲಹೆ ವ್ಯಕ್ತವಾಯಿತು. ಆದ್ದ ರಿಂದ ಜನವರಿ 15 ಮತ್ತು 16ರಂದು ಮತ್ತೊಮ್ಮೆ ಸಭೆ ಕರೆದು ಚರ್ಚಿಸಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಯಿತು.

ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಬ್ರಹ್ಮ ಕಲಶೋತ್ಸವ ನಡೆಸಲು ಈ ಹಿಂದೆ ಅಷ್ಟ ಮಂಗಲ ನಡೆದ ಸಂದರ್ಭದಲ್ಲಿ ಅಗಸ್ತ್ಯೇ ಶ್ವರ ಗುಡಿಯಲ್ಲಿ ಭೂಗತವಾಗಿರುವ ಪುರಾತನ ಶಿವಲಿಂಗವನ್ನು ಹೊರತೆಗೆಯ ಬೇಕು, ಅದನ್ನು ಸಮುದ್ರದಲ್ಲಿ ವಿಸರ್ಜಿಸ ಬೇಕು. ತಪ್ಪಿದಲ್ಲಿ ದೋಷಗಳು ಕಾಣಿಸಿಕೊ ಳ್ಳುತ್ತವೆ ಎಂದು ಅಷ್ಟಮಂಗಲ ಪ್ರಶ್ನೆ ನೇತೃತ್ವ ವಹಿಸಿದ್ದ ಜೋತಿಷಿ ನಾರಾಯಣ ಪೊದುವಾಳ್ ಸೂಚಿಸಿದ್ದರು. ಇದಕ್ಕೆ ಧಾರ್ಮಿಕ ಚಿಂತಕರು ಮತ್ತು ಕಾವೇರಿ ಮಾತೆಯ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೇ, ಋಷಿ ಮುನಿಗಳು ಪ್ರತಿಷ್ಠಾಪಿಸಿದ ಶಿವಲಿಂಗಕ್ಕೆ ವಿಶೇಷ ಶಕ್ತಿಯಿದೆ ಎಂದು ಪ್ರತಿಪಾದಿಸಿ ಆ ಪುರಾತನ ಶಿವಲಿಂಗವನ್ನೇ ಪುನರ್ ಪ್ರತಿಷ್ಠಾಪಿಸಿ, ಪೂಜಿಸಬೇಕೆಂದು ಒತ್ತಾಯಿಸಿದ್ದರು. ಆದರೆ ಇದಕ್ಕೆ ತದ್ವಿರುದ್ಧವಾಗಿ ಡಿ.11ರಂದು ಅಗಸ್ತ್ಯೇಶ್ವರ ಗುಡಿಯಲ್ಲಿ ಭೂಗತವಾಗಿದ್ದ ಶಿವ ಲಿಂಗವನ್ನು ಹೊರತೆಗೆದು ಪ್ರತ್ಯೇಕ ಬಾಲಾ ಲಯ ನಿರ್ಮಿಸಿ ಅಲ್ಲಿಡಲಾಗಿತ್ತು.

ಈ ಶಿವಲಿಂಗವನ್ನು ವಿಸರ್ಜಿಸುವ ಸಲುವಾಗಿ ನಡೆಸಲಾದ ಸಭೆಗೆ ಇದೀಗ ವಿರೋಧ ವ್ಯಕ್ತವಾಗಿದೆ.

ವಕೀಲ ಶ್ಯಾಂ ಭಟ್ಟರ ಲೇಖನ ಪ್ರಸ್ತಾಪ

ಮೈಸೂರಿನ ಹಿರಿಯ ಖ್ಯಾತ ವಕೀಲ ಹಾಗೂ ಧಾರ್ಮಿಕ ಚಿಂತಕರಾದ ಓ.ಶ್ಯಾಂ ಭಟ್ ಅವರು, “ಮೈಸೂರು ಮಿತ್ರ” ಡಿ.26ರ ಸಂಚಿಕೆಯಲ್ಲಿ ಪ್ರಕಟವಾಗಿರುವ “ತಲಕಾವೇರಿ-ಭಾಗಮಂಡಲ ಪಾವಿತ್ರ್ಯತೆ: ಕೊಡಗಿನ ಆಸ್ತಿಕರ ಆಶಯ” ಶೀರ್ಷಿಕೆಯ ಲೇಖನದಲ್ಲೂ 1992ರಲ್ಲಿ ತಲಕಾವೇರಿಯಲ್ಲಿ ನಡೆಸಲಾದ ಅಷ್ಟಮಂಗಲ ಪ್ರಶ್ನೆಯ ಸಮಗ್ರ ವಿವರಗಳನ್ನು ದಾಖಲಿಸಿದ್ದಾರೆ.

ಅಂದು ನಡೆಸಲಾದ ಅಷ್ಟಮಂಗಲ ಪ್ರಶ್ನೆ ಪ್ರಕಾರ ಅಗಸ್ತ್ಯೇಶ್ವರ ಕ್ಷೇತ್ರದ ಪುನರುತ್ಥಾನದ ಅವಶ್ಯಕತೆಯನ್ನು ಪ್ರಸ್ತಾಪಿಸಲಾಗಿದೆ. “ಮಧ್ಯಕಾಲದಲ್ಲಿ ತಲಕಾವೇರಿಯಲ್ಲಿ ಶ್ರೀ ಅಗಸ್ತ್ಯೇಶ್ವರ ಕ್ಷೇತ್ರ ನವೀಕರಣ ವೇಳೆ ಸಂಭವಿಸಿದ ಆಯ ಪ್ರಮಾಣದ ದೋಷ, ಅನಿಷ್ಟವಾಗಿ ಕಾಣು ವುದರಿಂದ ಸ್ಥಾನ ಚಲನೆಯಾಗದೇ, ಪಂಚಾಂಗವನ್ನು ಮುಟ್ಟದೇ, ಅದರ ಒಳ ಆಯ ಮತ್ತು ಹೊರ ಆಯ, ಪ್ರಾಚೀನ ಕ್ರಮಕ್ಕೆ ಅನುಸರಿಸಿ ಪುನಃ ನಿರ್ಮಾಣ ಮಾಡ ತಕ್ಕದ್ದು. ಬಾಗಿಲು ಶಿಲೆಯಿಂದ ಪ್ರಮಾಣಕ್ಕೆ ಅನುಸರಿಸಿ ರಚಿಸತಕ್ಕದ್ದು. ಭದ್ರವಾದ ಕವಾಟ ಅದಕ್ಕೆ ಸೂರ್ಯ ಚಂದ್ರಾಮಣಿ ಇತ್ಯಾದಿಗಳಿಂದ ಅಲಂಕರಿಸುವುದು. ಗರ್ಭಗುಡಿಯ ಉಪರಿ ಭಾಗದಲ್ಲಿ ಒಂದೇ ಜಾತಿಯ ಉತ್ತಮ ವೃಕ್ಷಗಳಿಂದ ಪಕ್ಕಾಸುಗಳು ಮತ್ತು ಮೇಲೆ ತಾಮ್ರ ಮುಚ್ಚಿಸಿ, ಮುಗುಳಿ ಇಟ್ಟು ನವೀಕರಿಸತಕ್ಕದ್ದು. ಋಷಿ ಪ್ರತಿಷ್ಠೆಯಾದ ಕಾರಣ ಬಿಂಬ ಚಲನ ನಿಷೇಧ. ಆದರಿಂದ ಪಂಜರಬಂಧದಲ್ಲಿ ನಿಲ್ಲಿಸಿಕೊಂಡು ಆಯಾಯ ಸಮಯದಲ್ಲಿ ಶುದ್ಧಿ ಮಾಡಿ, ನಿತ್ಯ ಪೂಜಾಧಿಗಳಿಗೆ ಭಂಗವಿಲ್ಲದಂತೆ ನಡೆಸತಕ್ಕದ್ದು ಎಂದು ಕ್ಷೇತ್ರ ನವೀಕರಣದ ಸಂದರ್ಭ ಸೂಚಿಸಲಾಗಿತ್ತು.

Translate »