ವಿರಾಜಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ಪಶುವೈದ್ಯಕೀಯ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ವಿರಾಜಪೇಟೆ ಪಟ್ಟಣದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಆರ್‍ಐ ಡಿಎಫ್ ಯೋಜನೆಯಡಿಯಲ್ಲಿ ರೂ.27. 90 ಲಕ್ಷ ಅನುದಾನದಲ್ಲಿ ಕೆಆರ್‍ಐಡಿಎಲ್ ಸಂಸ್ಥೆ ಕೈಗೆತ್ತಿಕೊಂಡಿರುವ ನೂತನ ಕಟ್ಟ ಡಕ್ಕೆ ಭೂಮಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಶಾಸಕ ಬೋಪಯ್ಯ, ಈಗಾಗಲೇ ಅಮ್ಮತ್ತಿ ಮತ್ತು ಪಾಲಿಬೆಟ್ಟ ದಲ್ಲಿ ಪಶು ವೈದ್ಯಕಿಯ ಆಸ್ಪತ್ರೆಯ ನೂತನ ಕಟ್ಟಡದ ಕಾಮಗಾರಿ ಮುಗಿದಿದೆ, ಗೋಣಿ ಕೊಪ್ಪದಲ್ಲಿ ಮುಂದಿನ ಜನವರಿ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳ ಲಿದೆ. ಹಾಗೂ 2019-20ನೇ ಸಾಲಿಗೆ ವಿರಾಜಪೇಟೆ ಕ್ಷೇತ್ರದ ಬಿರುನಾಣಿ, ಶ್ರೀಮಂಗಲ, ಚೆಂಬು, ಕರಿಕೆ, ಮಾಲ್ದಾರೆ ಸೇರಿದಂತೆ ಇತರ ಕಡೆಗಳಲ್ಲಿ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಿ ರುವುದಾಗಿ ತಿಳಿಸಿದರು.
ಭೂಮಿ ಪೂಜೆ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ ಹಾಗೂ ಮುಕೊಂಡ ಶಶಿ ಸುಬ್ರಮಣಿ ಅವರು ಮಾತನಾಡಿ ದರು. ತಾಲೂಕು ಪಂಚಾಯಿತಿ ಸದಸ್ಯೆ ಸೀತಮ್ಮ, ಅಭಿಯಂತರ ಪ್ರಮೋದ್, ಪಶು ವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಎ.ಬಿ.ತಮ್ಮಯ್ಯ, ಡಾ.ಶಾಂತೇಶ್, ಎಂ.ಲತ, ರಾಕೇಶ್, ಸುನೀಲ್ ಕುಮಾರ್ ಮುಂತಾದವರು ಹಾಜರಿದ್ದರು.