ದುದ್ದಗಲ್ಲು ಹೊಳೆಗೆ ಕಲುಷಿತ ನೀರು; ಕ್ರಮದ ಎಚ್ಚರಿಕೆ
ಕೊಡಗು

ದುದ್ದಗಲ್ಲು ಹೊಳೆಗೆ ಕಲುಷಿತ ನೀರು; ಕ್ರಮದ ಎಚ್ಚರಿಕೆ

December 27, 2018

ಸೋಮವಾರಪೇಟೆ:  ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ನೀರು ಸರಬರಾಜು ಮಾಡುತ್ತಿರುವ ದುದ್ದಗಲ್ಲು ಹೊಳೆಗೆ ಕಾಫಿ ಪಲ್ಪಿಂಗ್ ಘಟಕದ ಕಲುಷಿತ ನೀರು ಬಿಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್ ಎಚ್ಚರಿಸಿದ್ದಾರೆ.

ಸಾರ್ವಜನಿಕರ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಮುಖ್ಯಾಧಿಕಾರಿ, ಕಲುಷಿತ ನೀರಿನಿಂದಾಗಿ ಪಟ್ಟಣ ವ್ಯಾಪ್ತಿಯ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರು ವುದರಿಂದ ಸಂಬಂಧಿಸಿದ ಕಾಫಿ ಪಲ್ಪಿಂಗ್ ಘಟಕದ ನೀರನ್ನು ದುದ್ದಗಲ್ಲು ಹೊಳೆಗೆ ಬಿಡಬಾರದು. ಕೂಡಲೇ ಅಂತಹ ಘಟಕಗಳನ್ನು ಸ್ಥಗಿತಗೊಳಿಸಬೇಕು. ಇನ್ನು ಮುಂದೆ ಹೊಳೆಗೆ ಕಲುಷಿತ ನೀರನ್ನು ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Translate »