ವಿರಾಜಪೇಟೆ ಪಪಂ ಮಳಿಗೆ ಹರಾಜು ವೇಳೆ ಮಾತಿನ ಚಕಮಕಿ
ಕೊಡಗು

ವಿರಾಜಪೇಟೆ ಪಪಂ ಮಳಿಗೆ ಹರಾಜು ವೇಳೆ ಮಾತಿನ ಚಕಮಕಿ

March 6, 2019

ವಿರಾಜಪೇಟೆ: ಪಟ್ಟಣ ಪಂಚಾ ಯಿತಿಯ ಮಳಿಗೆಗಳ ಹರಾಜು, ಸಂತೆ ಶುಲ್ಕ ಎತ್ತುವಳಿ, ವಾಹನ ನಿಲುಗಡೆ ಶುಲ್ಕ, ಹಂದಿ, ಕೋಳಿ ಮಾಂಸ ಮಾರುಕಟ್ಟೆ ಹರಾ ಜುವಿನ ಸಂದರ್ಭ ನೂತನವಾಗಿ ನಿರ್ಮಾಣ ವಾದ ಮೀನು ಮಳಿಗೆಯ ಹರಾಜು ಪ್ರಕ್ರಿಯೆ ಸ್ಥಳೀಯ ಪುರಭವನದಲ್ಲಿ ನಡೆಯಿತು.

ಹರಾಜು ವೇಳೆ ಎಸ್.ಹೆಚ್.ಮೈನೂದ್ಧಿನ್, ಪಟ್ರಪಂಡ ರಘು ನಾಣಯ್ಯ, ಎಸ್.ಹೆಚ್. ಮತೀನ್ ಇತರರು ಹಸಿ ಮೀನುಗಳ ನೂತನ ಮಳಿಗೆ ಕಾಮಗಾರಿ ಪೂರ್ಣವಾಗದ ಕಾರಣ ಹರಾಜು ಮುಂದೂಡುವಂತೆ ಆಗ್ರಹಿಸಿ ದರಲ್ಲದೆ, ಮತೀನ್ ವೇದಿಕೆ ಬಳಿ ಏರು ಧ್ವನಿಯಲ್ಲಿ ಮಾತನಾಡಿದರು. ಈ ಸಂದರ್ಭ ಹರಾಜಿಗೆ ಬಂದಿದ್ದವರು ಹರಾಜು ನಡೆಸು ವಂತೆ ಆಗ್ರಹಿಸಿದರಲ್ಲದೆ, ಪರಸ್ವರ ಮಾತಿಗೆ ಮಾತು ಬೆಳೆದು ತೀವ್ರ ಗೊಂದಲ ಏರ್ಪ ಟ್ಟಾಗ ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.

ನಿರ್ಮಿತಿ ಕೇಂದ್ರ ನಿರ್ಮಿಸುತ್ತಿರುವ ಕಾಮ ಗಾರಿ ಮುಗಿಯದೆ ಇರುವುದರಿಂದ ಮೂಲ ಭೂತ ಸೌಕರ್ಯಗಳಿಲ್ಲದೆ ಇರುವುದು ಹಾಗೂ ಇತ್ಯಾದಿ ಸಮಸ್ಯೆಗಳ ಬಗ್ಗೆ ಪ್ರಸ್ತಾ ಪಿಸಿದ ಪ್ರಮುಖರು, ಹರಾಜು ಮುಂದೂ ಡುವಂತೆ ಒತ್ತಾಯಿಸಿದಾಗ ತಹಶಿಲ್ದಾರ್ ಗೋವಿಂದರಾಜು ಅವರು ಹರಾಜು ಮುಂದೂಡಲು ಸಾಧ್ಯವಿಲ್ಲ. ಸಧ್ಯದಲ್ಲಿಯೇ ಚುನಾವಣೆ ಬರಲಿದ್ದು, ಮಳಿಗೆ ನೀಡಲು ಒಂದೂವರೆ ತಿಂಗಳ ಕಾಲವಕಾಶ ಇರು ವುದರಿಂದ ಅಷ್ಟರಲ್ಲಿ ಮಳಿಗೆಗಳ ಕೆಲಸ ಮುಗಿಸಲು ಬದ್ಧರಾಗಿದ್ದೇವೆ. ಪಂಚಾಯಿ ತಿಗೆ ಹಸಿ ಮೀನು ಮಳಿಗೆ ಹರಾಜು ಇಲ್ಲದ ಕಾರಣ ಅದಾಯ ಕುಂಠಿತವಾಗಿದ್ದು, ಅಭಿ ವೃದ್ದಿ ದೃಷ್ಠಿಯಲ್ಲಿ ಅದಾಯ ಅಗತ್ಯವಾ ಗಿದೆ. ಬಂದ ಹಣದಿಂದ ಎರಡನೇ ಹಂತದ ಕಾಮಗಾರಿ ಮುಗಿಸಿ ಕೋಳಿ ಮತ್ತು ಕುರಿ ಮಾಂಸ ಮಾರಾಟಕ್ಕೆ ಅವಕಾಶ ನೀಡು ವುದಾಗಿ ತಿಳಿಸಿದರು.

ಈ ಸಂದರ್ಭ ಮಧು ದೇವಯ್ಯ ಮಾತನಾಡಿ, ಮೀನುಗಾರಿಕಾ ಇಲಾಖಾ ಅನುದಾನ ಅದರ ನಿಯಮ ದಂತೆ ಆಗಬೇಕು. ಜನರನ್ನು ತಪ್ಪು ದಾರಿಗೆ ಎಳೆಯಬೇಡಿ ಎಂದರು. ಈ ವೇಳೆ ಪಂಚಾ ಯಿತಿಯ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಮಾತನಾಡಿ, ಹರಾಜಿಗೆ ಅವಕಾಶ ನೀಡಿ ಉಳಿದ ಕಾಮಗಾರಿಯನ್ನು ಸೂಕ್ತವಾಗಿ ಮುಗಿಸುವ ಭರವಸೆ ನೀಡಿದರು.

ಈ ಸಂದರ್ಭ ಡಿವೈಎಸ್‍ಪಿ ನಾಗಪ್ಪ, ವೃತ್ತ ನಿರೀಕ್ಷಕ ಕ್ಯಾತೆಗೌಡ ಬಂದೋಬಸ್ತ್ ಏರ್ಪಡಿಸಿದ್ದರು. ಬಳಿಕ ಹರಾಜಿನಲ್ಲಿ ಭಾಗ ವಹಿಸಿದ್ದವರು ಹರಾಜು ಪ್ರಕ್ರಿಯೆ ನಡೆಸು ವಂತೆ ಒತ್ತಾಯಿಸಿದಾಗ ಮೀನು ಮರಾಟ ಮಳಿಗೆಯನ್ನು ಹರಾಜಿನಲ್ಲಿ ಕೆಲವರು ಪಡೆದುಕೊಂಡರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರುಗಳು ಹಾಗೂ ವರ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Translate »