ವಿರಾಜಪೇಟೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಉತ್ಸವ
ಕೊಡಗು

ವಿರಾಜಪೇಟೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಉತ್ಸವ

January 4, 2019

ವಿರಾಜಪೇಟೆ: ವಿರಾಜಪೇಟೆ ಮಲೆತಿರಿಕೆ ಬೆಟ್ಟದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಉತ್ಸವವು ಕಳೆದ ಮೂರುದಿನಗಳಿಂದ ದೇವರಿಗೆ ಗಣಪತಿಹೋಮ, ಲಕ್ಷಾರ್ಚನೆ, ವಿಶೇಷ ಪೂಜೆ, ಮಹಾ ಪೂಜೆ ಸಂದರ್ಭ ಜೋಡಿ ಗರುಡಗಳು ದೇವಾಲಯದ ಪ್ರದರ್ಶನ ಹಾಗೂ ಅನ್ನಸಂತಾರ್ಪಣೆಯೊಂದಿಗೆ ವಿಜೃಂಭಣೆಯ ಉತ್ಸವವನ್ನು ಆಚರಿಸಲಾಯಿತು.

ಕೇರಳದ ಚಂಡೆ ಮದ್ದಳೆ, ಅಯ್ಯಪ್ಪನ ಚಲನ ವಲನಗಳಿರುವ ವಿಗ್ರಹ, ಗೊಂಬೆಕುಣಿತ ಹಾಗೂ ವಿವಿಧ ಮನರಂಜನಾ ತಂಡಗಳೊಂದಿಗೆ ಮಲೆತಿರಿಕೆ ಬೆಟ್ಟದಿಂದ ಅಯ್ಯಪ್ಪ ಸ್ವಾಮಿಯ ಅದ್ದೂರಿಯ ಮೆರವಣಿಗೆ ಹೊರಾಟು ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾಗಿ ಮೀನುಪೇಟೆಯಲ್ಲಿರುವ ಶ್ರೀ ಮುತ್ತಪ್ಪ ದೇವಲಯದಲ್ಲಿ ಪೂಜೆಸಲ್ಲಿಸಿದ ಬಳಿಕ ಇಂತಿರುಗಿ ಸುಬ್ರಮಣ್ಯ ದೇವರಿಗೆ ಪೂಜೆಸಲ್ಲಿಸಿದ ನಂತರ ಉತ್ಸವಕ್ಕೆ ತೆರೆಕಂಡಿತು.

Translate »