ಜಿಲ್ಲಾದ್ಯಂತ ಭಕ್ತಿ ಭಾವದ ಮಹಾಶಿವರಾತ್ರಿ ಆಚರಣೆ
ಕೊಡಗು

ಜಿಲ್ಲಾದ್ಯಂತ ಭಕ್ತಿ ಭಾವದ ಮಹಾಶಿವರಾತ್ರಿ ಆಚರಣೆ

March 6, 2019

ಮಡಿಕೇರಿ: ಶಿವರಾತ್ರಿಯ ಪ್ರಯುಕ್ತ ಜಿಲ್ಲೆಯ ಶಿವ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಶಿವನ ವೇಷ, ಭೂಷಣದೊಂದಿಗೆ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಜಿಲ್ಲೆಯಾ ದ್ಯಂತ ನಡೆಯಿತು. ರಾತ್ರಿ ಜಾಗರಣೆಯ ಮೂಲಕ ಶಿವನನ್ನು ಭಕ್ತಾದಿಗಳು ಆರಾಧಿಸಿದರು.

ಮಡಿಕೇರಿಯ ವಿವಿಧ ದೇವಾಲಯ ಗಳಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಬೆಳ ಗ್ಗಿನಿಂದಲೇ ವಿಶೇಷ ಪೂಜೆಗಳು ನೆರ ವೇರಿದವು. ಇತಿಹಾಸ ಪ್ರಸಿದ್ಧ ಶ್ರೀ ಓಂಕಾ ರೇಶ್ವರ ದೇವಾಲಯ, ಶ್ರೀ ರಾಜರಾಜೇ ಶ್ವರಿ ದೇವಾಲಯ, ಶ್ರೀ ಮುತ್ತಪ್ಪ ದೇವಾ ಲಯ, ಶ್ರೀ ವೀರಭದ್ರೇಶ್ವರ ದೇವಾಲಯ ಗಳಲ್ಲಿ ಪೂಜೆ, ಪ್ರಾರ್ಥನೆ, ಭಜನೆಗಳು ನಡೆದವು. ಓಂಕಾರೇಶ್ವರ ದೇವಾಲಯ ದಲ್ಲಿ ಮುಂಜಾನೆಯಿಂದಲೇ ಶಿವನ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದರು. ರುದ್ರ ಹೋಮ, ಶಿವನಾಮ ಸ್ಮರಣೆಯೊಂದಿಗೆ ಭಕ್ತರು ಲೋಕ ನಾಥನನ್ನು ಪೂಜಿಸಿ ಪುನೀತರಾದರು. ನಗರದ ಶ್ರೀ ಕೋದಂಡರಾಮ ದೇವಾಲ ಯದಲ್ಲೂ ಶಿವರಾತ್ರಿಯ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ರಾತ್ರಿ ಭಜನೆ, ಕೀರ್ತನೆಗಳೊಂದಿಗೆ ವಿವಿಧ ಸಾಂಸ್ಕø ತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಮೇಕೇರಿಯ ಶ್ರಿ ಗೌರಿಶಂಕರ ದೇವಾಲಯ ದಲ್ಲೂ ವಿವಿಧ ಪೂಜಾ ಕಾರ್ಯಕ್ರಮ ಗಳು ನಡೆದದವು. ಬೆಳಿಗ್ಗೆ 9:30 ಗಂಟೆಗೆ ಕಾವೇರಿ ಬಡಾವಣೆ, ನವಗ್ರಾಮ, ಶಕ್ತಿ ನಗರ, ಸಾಯಿ ಬಡಾವಣೆ, ನಿಸರ್ಗ ಬಡಾ ವಣೆ, ಸುಭಾಸ್ ನಗರ ಮತ್ತು ಕೆಳಗಿನ ಮೇಕೇರಿಯ ಬಿಳಿಗೇರಿ ಜಂಕ್ಷನ್‍ನಿಂದ ಹೊರೆ ಕಾಣಿಕೆಯನ್ನು ಮೆರವಣಿಗೆಯ ಮೂಲಕ ದೇವಾಲಯಕ್ಕೆ ತರಲಾಯಿತು.

ಹೊರೆ ಕಾಣಿಕೆಯ ಈಶ್ವರಾರ್ಪಣೆಯ ನಂತರ ಲಘು ಉಪಹಾರದ ವ್ಯವಸ್ಥೆ ಮತ್ತು ಮಹಾಪೂಜೆ ನಂತರ ಭಕ್ತರಿಗೆ ಅನ್ನ ದಾನದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಬೆಂಗ ಳೂರಿನ ಕುಮಾರಿ ಭಾವನ ಆರ್.ಗೌಡ ಅವರಿಂದ ಬೌದ್ಧಿಕ್ ನಡೆಯಿತು. ಭಾರತೀ ಯರ ನರನಾಡಿಗಳಲ್ಲಿ ದೇಶಪ್ರೇಮದ ಕಿಚ್ಚನ್ನು ಹಚ್ಚಿದ್ದ ‘ಸರ್ಜಿಕಲ್ ಸ್ಟ್ರೈಕ್’ ಆಧಾ ರಿತ ಸೂಪರ್ ಹಿಟ್ ‘ಉರಿ’ ಸಿನಿಮಾ ವನ್ನು ರಾತ್ರಿ 2 ಗಂಟೆಯಿಂದ ಬೃಹತ್ ಎಲ್‍ಇಡಿ ಪರದೆಯ ಮೂಲಕ ದೇವಾ ಲಯದಲ್ಲಿ ಪ್ರದರ್ಶಿಸಲಾಯಿತು.
ಭಾಗಮಂಡಲದ ಭಗಂಡೇಶ್ವರ ದೇವ ಸ್ಥಾನ, ಪೇರ್ಮಾಡು ಶ್ರೀ ಈಶ್ವರ ದೇವ ಸ್ಥಾನ, ಶನಿವಾರಸಂತೆಯ ಗೌರಿಶಂಕರ ದೇವಾಲಯ, ಪಾಲೂರು ಮಹಾಲಿಂಗೇ ಶ್ವರ, ಬಾಡಗರಕೇರಿಯ ಶ್ರೀ ಮೃತ್ಯುಂ ಜಯ ದೇವಸ್ಥಾನ, ಇರ್ಪು ಶ್ರೀ ರಾಮೇಶ್ವರ, ವಿರಾಜಪೇಟೆಯ ಅಂಗಾಳ ಪರಮೇಶ್ವರಿ, ಕಂಬಿಬಾಣೆ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನೆರವೇರಿತು.

ಪೇರ್ಮಾಡು ಈಶ್ವರ ದೇವಾಲಯ ಹಾಗೂ ಇರ್ಪು ಶ್ರೀ ರಾಮೇಶ್ವರ ದೇವಾ ಲಯಕ್ಕೆ ವಿಶೇಷ ಮಹತ್ವವಿದ್ದು, ಇರ್ಪುವಿ ನಲ್ಲಿ ಜಾಗರಣೆಯ ಮರುದಿನ ಪವಿತ್ರ ಸ್ನಾನ ಹಾಗೂ ಜಾತ್ರೆಯೂ ನಡೆಯಲಿದೆ. ನಾಡಿನೆಲ್ಲೆಡೆ ಹಲವಾರು ದೇವಾಲಯ ಗಳಲ್ಲಿ ಅಲ್ಲಲ್ಲಿನ ಆಚರಣೆಗೆ ವಿಶೇಷ ಪಾತ್ರಿ ನಿಧ್ಯ ಕಟ್ಟುಪಾಡುಗಳಿದ್ದು, ಅದಕ್ಕನುಗುಣ ವಾಗಿ ಶಿವನ ಆರಾಧನೆ ನೆರವೇರಿತು.

ಸಿದ್ದಾಪುರದ ನೆಲ್ಯಗುದಿಕೇರಿಯ ಶ್ರಿ ಮುತ್ತಪ್ಪ ದೇವಾಲಯದಲ್ಲಿ ಮಹಾಶಿವ ರಾತ್ರಿ ಆಚರಣೆಯು ವಿವಿಧ ಧಾರ್ಮಿಕ ಪ್ರವಚನಗಳೊಂದಿಗೆ ನಡೆಯಿತು. ನೆಲ್ಯ ಹುದಿಕೇರಿ ಶ್ರೀ ಮುತ್ತಪ್ಪ ಯುವಕಲಾ ಸಮಿತಿಯ ವತಿಯಿಂದ ಮುತ್ತಪ್ಪ ಸಭಾಂ ಗಣದಲ್ಲಿ ಕಪಿಲಾಶ್ರಮ ಉತ್ತರ ಕಾಶಿಯ ರಾಮಚಂದ್ರ ಸ್ವಾಮಿಜೀಯವರಿಂದ ಧಾರ್ಮಿಕ ಪ್ರವಚನ ನಡೆಯಿತು.
ಗೋಣಿಕೊಪ್ಪಲು ವರದಿ: ಶಿವರಾತ್ರಿ ಪ್ರಯುಕ್ತ ಪೇರ್ಮಾಡ್ ಈಶ್ವರ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ದೇವರ ಮೂರ್ತಿ ಹಾಗೂ ತೀರ್ಥಮಂಟಪದಲ್ಲಿ ಪೂಜೆ ನಿರ್ವ ಹಿಸಿ, ಗ್ರಾಮದ ಭಕ್ತಾದಿಗಳು ಶಿವನಿಗೆ ರುದ್ರಾ ಭಿಷೇಕ ಮೂಲಕ ಹರಕೆ ತೀರಿಸಿದರು.

ವಿರಾಜಪೇಟೆ ವರದಿ: ಸಮೀಪದ ಮಗ್ಗುಲ ಗ್ರಾಮದ ಶ್ರೀ ಶನೇಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ದೇವರಿಗೆ ಅಭಿಷೇಕ ಪೂಜೆ, ಶಾಂತಿ ಪೂಜೆ, ವಿಶೇಷ ಪೂಜೆ ಪುನಾಸ್ಕಾರ ನೆರವೇರಿಸಲಾಯಿತು. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ಪ್ರಸಾದ ವಿನಿ ಯೋಗದ ಬಳಿಕ ಅನ್ನ ಸಂತರ್ಪಣೆ ಏರ್ಪ ಡಿಸಲಾಗಿತ್ತು. ಈ ಸಂದರ್ಭ ಶನೇಶ್ವರ ದೇವಾ ಲಯದ ಅಧ್ಯಕ್ಷ ಚೋಕಂಡ ರಮೇಶ್ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

Translate »