ಬೈಕ್‍ಗೆ ಅಡ್ಡ ಬಂದ ನಾಯಿ: ಬಿದ್ದು ಗಾಯಗೊಂಡಿದ್ದ ಸವಾರ ಸಾವು
ಮೈಸೂರು

ಬೈಕ್‍ಗೆ ಅಡ್ಡ ಬಂದ ನಾಯಿ: ಬಿದ್ದು ಗಾಯಗೊಂಡಿದ್ದ ಸವಾರ ಸಾವು

December 27, 2018

ಮೈಸೂರು: ದಿಢೀರ್ ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆದಿದದ್ದರಿಂದ ಬೈಕ್ ಕೆಳಗೆ ಬಿದ್ದು ಸವಾರ ಮೃತ ಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಮೈಸೂ ರಿನ ವಿಜಯನಗರದಲ್ಲಿ ನಡೆದಿದೆ. ಕೊಳ್ಳೆಗಾಲ ಮೂಲದ ಗಿರೀಶ್ (28) ಮೃತಪಟ್ಟವರು. ನಗರದ ಖಾಸಗಿ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದರು. ಡಿ.21ರ ತಡರಾತ್ರಿ ಸ್ನೇಹಿತ ಸಿದ್ದರಾಜು ಎಂಬು ವರನ್ನು ಬೈಕ್‍ನ ಹಿಂಬದಿ ಕೂರಿಸಿಕೊಂಡು ರಿಂಗ್ ರಸ್ತೆಯಲ್ಲಿ ಹಿನಕಲ್ ಕಡೆಯಿಂದ ಬೋಗಾದಿ ಕಡೆಗೆ ಹೋಗುತಿದ್ದಾಗ ವಿಜಯ ನಗರ ಬಸ್ ಡಿಪೆÇೀ ಎದುರು ನಾಯಿ ಅಡ್ಡ ಬಂದಿದೆ. ಬೈಕ್ ನಿಯಂ ತ್ರಣ ತಪ್ಪಿ, ನಾಯಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಇಬ್ಬರೂ ವಾಹನ ಸಮೇತ ಕೆಳಕ್ಕೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ಗಿರೀಶ್ ಬುಧವಾರ ಮೃತಪಟ್ಟಿದ್ದಾರೆ. ಈ ಸಂಬಂಧ ವಿವಿಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »