ಗಾಂಜಾ ಸೇವನೆ ಶಂಕೆ: ಮೂವರು ವಶಕ್ಕೆ
ಮೈಸೂರು

ಗಾಂಜಾ ಸೇವನೆ ಶಂಕೆ: ಮೂವರು ವಶಕ್ಕೆ

December 27, 2018

ಮೈಸೂರು: ಚಾಮುಂಡಿಬೆಟ್ಟದ ಪಾದದ ಬಳಿ ಗಾಂಜಾ ಸೇವಿಸುತ್ತಿದ್ದ ಶಂಕೆ ಮೇರೆಗೆ ಮೂವರನ್ನು ಕೆ.ಆರ್.ಠಾಣೆ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ರಘು, ಉಮೇಶ್ ಮತ್ತು ವಿಜಿ ಎಂಬುವರು. ಮಂಗಳವಾರ ಸಂಜೆ 6 ಗಂಟೆ ಸಮಯದಲ್ಲಿ ಚಾಮುಂಡಿಬೆಟ್ಟದ ಪಾದದ ಬಳಿ ಇರುವ ದೃತಿ ಶೀಲಾನಂದ ಆಶ್ರಮದ ಬಳಿ ಗಾಂಜಾ ಸೇವಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ದಾವಿಸಿದ ಪೆÇಲೀಸರು ಮೂವರನ್ನು ವಶಕ್ಕೆ ಪಡೆದರು. ಪರಿಶೀಲಿಸಿದಾಗ ಮೂವರು ಗಾಂಜಾ ಸೇವನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಬಂಧ ಕೆ.ಆರ್.ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »