ಸುಳವಾಡಿ ವಿಷ ಪ್ರಸಾದ ಪ್ರಕರಣ ಸಂತ್ರಸ್ತರ ಬಗ್ಗೆ ಸಂದೇಶ್ ಕಳಕಳಿ
ಮೈಸೂರು

ಸುಳವಾಡಿ ವಿಷ ಪ್ರಸಾದ ಪ್ರಕರಣ ಸಂತ್ರಸ್ತರ ಬಗ್ಗೆ ಸಂದೇಶ್ ಕಳಕಳಿ

December 27, 2018

ಮೈಸೂರು: ಸುಳವಾಡಿ ವಿಷ ಪ್ರಸಾದ ಪ್ರಕರಣದ ಸಂತ್ರಸ್ತರ ವಿಷಯದಲ್ಲಿ ಘಟನೆ ನಡೆದ ದಿನದಿಂದಲೂ ನಿರಂತರ ಸಂಪರ್ಕದಲ್ಲಿರುವು ದಾಗಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸ್ಪಷ್ಟಪಡಿಸಿ ದ್ದಾರೆ. ದುರಂತ ನಡೆದ ದಿನ ಬೆಳಗಾವಿ ಚಳಿಗಾಲದ ಅಧಿವೇಶನ ದಲ್ಲಿ ಪಾಲ್ಗೊಂಡಿದ್ದು, ವಿಷಯ ತಿಳಿದ ಕೂಡಲೇ ಅಸುನೀಗಿದವರ ಕುಟುಂಬಗಳಿಗೆ ಸರ್ಕಾರ ತಕ್ಷಣ ಸೂಕ್ತ ಪರಿಹಾರ ಘೋಷಿಸ ಬೇಕು. ಅಸ್ವಸ್ಥರಿಗೆ ಅಗತ್ಯವಿರುವ ಎಲ್ಲಾ ಗುಣಮಟ್ಟದ ಚಿಕಿತ್ಸೆ ಯನ್ನು ಸರ್ಕಾರದ ವತಿಯಿಂದಲೇ ಕಲ್ಪಿಸಬೇಕೆಂದು ಆಗ್ರಹ ಪಡಿಸಿದ್ದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಘಟನೆಗೆ ಕಾರಣಕರ್ತರಾದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇಡೀ ದೇಶದಲ್ಲೇ ಕಂಡು ಕೇಳರಿಯದಂತಹ ಅಮಾನವೀಯ ಮತ್ತು ಕ್ರೂರ ಘಟನೆಗೆ ಕಾರಣಕರ್ತರಾ ದವರಿಗೆ ಯಾವುದೇ ಕಾರಣಕ್ಕೂ ಕನಿಕರ ತೋರಕೂಡದು ಎಂದು ಅಭಿಪ್ರಾಯಪಟ್ಟಿರುವ ಸಂದೇಶ್ ನಾಗರಾಜ್, ಸದ್ಯದಲ್ಲೇ ಸಂತ್ರಸ್ತರನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ. ತಾವು ಪ್ರತೀ ಚುನಾವಣೆಯಲ್ಲಿ ಇದೇ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆ ಭಾಗದಲ್ಲಿ ಮತ ಯಾಚನೆ ಮಾಡುತ್ತಿದ್ದೆ. ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ಪುಣ್ಯಕ್ಷೇತ್ರವಾದ ಇಲ್ಲಿ ಪ್ರಸಾದಕ್ಕೆ ವಿಷ ಮಿಶ್ರಣ ಮಾಡಿ ಅಮಾಯಕರ ಬಲಿ ಪಡೆದಿ ರುವುದು ಅತ್ಯಂತ ಘೋರ ಕೃತ್ಯ ಎಂದು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

Translate »