ಮುಸ್ಲಿಂರ ಬಗ್ಗೆ ದ್ವಂದ್ವ ನಿಲುವು ತಾಳುವುದರಿಂದಲೇ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿಲ್ಲ
ಮೈಸೂರು

ಮುಸ್ಲಿಂರ ಬಗ್ಗೆ ದ್ವಂದ್ವ ನಿಲುವು ತಾಳುವುದರಿಂದಲೇ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿಲ್ಲ

December 27, 2018

ಮೈಸೂರು: ಉತ್ತರ ಪ್ರದೇಶ ದಲ್ಲಿ ಬಾಬ್ರಿ ಮಸೀದಿ ನೆಲಸಮ ವೇಳೆ ಕೇಂದ್ರದಲ್ಲಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿ ಕಾರದಲ್ಲಿತ್ತು. ಆದರೂ, ಅಂದು ಬಾಬ್ರಿ ಮಸೀದಿ ಕೆಡವು ದನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ ಎಂದು ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ಮೈಸೂರು ಘಟಕದ ಅಧ್ಯಕ್ಷ ಮೌಲನಾ ಜûಖಾ ಉಲಾ ಬೇಸರ ವ್ಯಕ್ತಪಡಿಸಿದರು.

ಮಾಜಿ ಸಚಿವ ತನ್ವೀರ್‍ಸೇಠ್ ಅವರಿಗೆ ಮಂತ್ರಿ ಸ್ಥಾನ ತಪ್ಪಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ನಂತರ ನಗರ ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸಿದರು. 1992 ರಲ್ಲಿ ಬಾಬ್ರಿ ಮಸೀದಿ ಕೆಡವಿದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಇದನ್ನು ತಡೆಗಟ್ಟಲು ಪ್ರಾಮಾ ಣಿಕ ಪ್ರಯತ್ನ ಮಾಡಲಿಲ್ಲ. ಈ ಘಟನೆಯಿಂದಲೇ ಕಾಂಗ್ರೆಸ್ ಪಕ್ಷ ಮುಸ್ಲಿಮರ ಬಗ್ಗೆ ಇಟ್ಟುಕೊಂಡಿರುವ ದ್ವಂದ್ವ ನಿಲುವು ಅರ್ಥವಾಗುತ್ತದೆ ಎಂದು ಹೇಳಿದರು.
ಅಂದಿನಿಂದ ಇಂದಿನವರೆಗೆ ಮುಸ್ಲಿಮರು ಈ ಘಟನೆ ಯನ್ನು ವಿರೋಧಿಸಿ, ಕಾಂಗ್ರೆಸ್‍ಗೆ ಮತಹಾಕದಿರುವ ಹಿನ್ನೆಲೆಯಲ್ಲಿ ಇಲ್ಲಿಯವರೆಗೂ ಕೇಂದ್ರದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಆದ್ದರಿಂದ ಮುಸ್ಲಿಂ ಸಮು ದಾಯವನ್ನು ಇನ್ನು ಮುಂದೆ ಹೆಚ್ಚು ವಂಚಿಸಲು ಸಾಧ್ಯ ವಿಲ್ಲ. ಅಲ್ಲದೆ, ಮುಂದಿನ ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಮೈಸೂರಿಗೆ, ಇಲ್ಲಿನ ಮುಸ್ಲಿಂ ಸಮುದಾಯಕ್ಕಾಗಿರುವÀ ಅನ್ಯಾಯ ವನ್ನು ಸರಿಪಡಿಸು ವಂತೆ ಮನವಿ ಮಾಡಿದರು. ಈ ಸಭೆಯಲ್ಲಿ ಮೌಲನಾ ಮೊಹಮ್ಮದ್ ಉಲ್ ಹುಸೇನ್, ಮೌಲನಾ ಅಕ್ಬರ್ ಖಾಸಿಮ್, ಮೌಲನಾ ಇನಾಯತ್ ವುಲಾ ರೆಹಮಾನ್, ಮೌಲನಾ ಸಲಾಂ ರಜ್ವಿ, ಮೌಲನಾ ಇಬ್ರಾಹಿಂ ರಜ್ವಿ, ಜಮೀಲ್ ಆಶ್ರಫ್ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದರು.

Translate »