ಕಂಪ್ಯೂಟರ್ ಸೊಸೈಟಿಯಿಂದ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್‍ಕುಮಾರ್ ಅವರಿಗೆ ಅಭಿನಂದನೆ
ಮೈಸೂರು

ಕಂಪ್ಯೂಟರ್ ಸೊಸೈಟಿಯಿಂದ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್‍ಕುಮಾರ್ ಅವರಿಗೆ ಅಭಿನಂದನೆ

February 19, 2019

ಮೈಸೂರು: ಮೈಸೂ ರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿ ಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ಕಂಪ್ಯೂ ಟರ್ ಸೊಸೈಟಿ ಆಫ್ ಇಂಡಿಯಾ ವೃತ್ತಿ ಪರ ಸಂಸ್ಥೆಯ ವತಿಯಿಂದ ಮೈಸೂರು ವಿವಿ ನೂತನ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರನ್ನು ಸನ್ಮಾನಿಸಿ, ಅಭಿನಂದಿ ಸಲಾಯಿತು. ಇದೇ ವೇಳೆ ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ ವೃತ್ತಿಪರ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ವಿರೇಂದ್ರ ಕುಮಾರ್ ಮಾತನಾಡಿ, ಪ್ರೊ.ಹೇಮಂತ್ ಕುಮಾರ್ ಅವರೊಂದಿಗೆ 5 ವರ್ಷ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದೇನೆ. ಕಂಪ್ಯೂಟರ್ ಸೈನ್ಸ್ ವಿಭಾಗದ ಅಭಿವೃದ್ಧಿಗೆ ಪ್ರೊ.ಹೇಮಂತ್ ಕುಮಾರ್ ಅವರೇ ಪ್ರಮುಖ ಕಾರಣರಾಗಿದ್ದಾರೆ ಎಂದು ನುಡಿದರು.

ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ ವೃತ್ತಿಪರ ಸಂಸ್ಥೆಯ ಆಜೀವ ಸದಸ್ಯರಾಗಿ ರುವ
ಅವರು, ಪ್ರತಿಷ್ಠಿತ ವಿಶ್ವವಿದ್ಯಾನಿಲ ಯಕ್ಕೆ ಕುಲಪತಿಯಾಗಿ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ. ಉತ್ತಮ ಆಡಳಿತಗಾರರಾದ ಪ್ರೊ. ಹೇಮಂತ್ ಕುಮಾರ್ ಮೈಸೂರು ವಿಶ್ವ ವಿದ್ಯಾನಿಲಯವನ್ನು ಇನ್ನೂ ಎತ್ತರದ ಸ್ಥಾನಕ್ಕೆ ಬೆಳೆಸುತ್ತಾರೆ ಎಂಬ ನಂಬಿಕೆಯಿದೆ ಎಂದು ಬಣ್ಣಿಸಿದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಮಾತನಾಡಿ, ಕುಲ ಪತಿಯಾಗಿ ಈಗಾಗಲೇ 3 ತಿಂಗಳು ಕಳೆ ದಿವೆ. ಆದರೆ, ಇನ್ನೂ ವಿವಿಯ ಕೆಲಸಗಳನ್ನು ಸರಿಯಾಗಿ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಸಾಕಷ್ಟು ಕೆಲಸಗಳು ಉಳಿದಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜವಾಬ್ದಾರಿಯನ್ನು ಸಂಪೂರ್ಣಗೊಳಿಸುತ್ತೇನೆ ಎಂದರು.

ಬರೀ ಪಾಠ ಮಾಡಿಕೊಂಡು ಬಂದಿ ದ್ದರೇ ಇಂದು ಕುಲಪತಿಯಾಗಲು ಸಾಧ್ಯ ವಾಗುತ್ತಿರಲಿಲ್ಲ. ಆಡಳಿತದ ಕಡೆಗೆ ನೀಡಿದ ಗಮನ ಹಾಗೂ ವಿದ್ಯಾರ್ಥಿಗಳು ಮಾಡಿದ ಸಂಶೋಧನೆಯಿಂದಾಗಿ ಈ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಯಿತು ಎಂದರು. ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಕುಲಪತಿ ಪ್ರೊ.ಬಿ.ಜಿ. ಸಂಗಮೇಶ್ವರ, ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ ವೃತ್ತಿಪರ ಸಂಸ್ಥೆಯ ಉಪಾ ಧ್ಯಕ್ಷೆ ಅರುಣ ದೇವಿ, ಮಾಜಿ ಅಧ್ಯಕ್ಷೆ ಅನಿತಾ ವೆಂಕಟೇಶ್, ಕಾರ್ಯದರ್ಶಿ ಜೆ.ಜಿ.ವೆಂಕ ಟೇಶ್, ಡಾ.ಎಂ.ಪುಷ್ಪಾಲತಾ ಇತರರಿದ್ದರು.

Translate »