ಶ್ರೀ ವಿನಾಯಕ ಯುವಕರ ಸಂಘಕ್ಕೆ ಜಿಲ್ಲಾ ಯುವ ಸಂಘ ಪ್ರಶಸ್ತಿ ಪ್ರದಾನ
ಮೈಸೂರು

ಶ್ರೀ ವಿನಾಯಕ ಯುವಕರ ಸಂಘಕ್ಕೆ ಜಿಲ್ಲಾ ಯುವ ಸಂಘ ಪ್ರಶಸ್ತಿ ಪ್ರದಾನ

February 19, 2019

ಮೈಸೂರು: ಉತ್ತಮ ಸಮಾಜ ಸೇವಾ ಚಟುವಟಿಕೆಗಾಗಿ ಮೈಸೂ ರಿನ ನೆಹರು ಯುವ ಕೇಂದ್ರದ ವತಿಯಿಂದ ಕೊಡ ಮಾಡುವ `ಜಿಲ್ಲಾ ಯುವ ಸಂಘ ಪ್ರಶಸ್ತಿ’ಗೆ ಭಾಜನವಾಗಿರುವ ಮೈಸೂರು ತಾಲೂಕು ಸಾಗರಕಟ್ಟೆ ಗ್ರಾಮದ `ಶ್ರೀ ವಿನಾಯಕ ಯುವಕರ ಸಂಘ’ಕ್ಕೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸೋಮವಾರ ಪ್ರಶಸ್ತಿ ಪ್ರದಾನ ಮಾಡಿದರು.

ಮೈಸೂರಿನ ಪುರಭವನದಲ್ಲಿ ನೆಹರು ಯುವ ಕೇಂದ್ರ, ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಯುವ ಸಮಾವೇಶದಲ್ಲಿ ಸಚಿವರು ಸಂಘದ ಅಧ್ಯಕ್ಷ ಎಸ್.ಎಲ್.ಶಂಕರ್ ಹಾಗೂ ಪದಾಧಿ ಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಮಾಣ ಪತ್ರದೊಂದಿಗೆ ಪ್ರಶಸ್ತಿಯು 25 ಸಾವಿರ ರೂ. ನಗದು ಒಳಗೊಂಡಿದ್ದು, ಸಂಘದ ಬ್ಯಾಂಕ್ ಖಾತೆಗೆ ನಗದು ಜಮಾ ವಾಗಲಿದೆ. ಇದೇ ವೇಳೆ ಸ್ವಚ್ಛ ಭಾರತ್ ಅಭಿಯಾನದಡಿಯ ಚಟುವಟಿಕೆಗಾಗಿ ಜಿಲ್ಲಾ ಮಟ್ಟದ ಪ್ರಥಮ ಬಹುಮಾನಕ್ಕೆ ಜೆಪಿ ನಗರದ ಅಭ್ಯುದಯ ಮಹಿಳಾ ಸಮಾಜ ಭಾಜನ ವಾಯಿತು. ಸಂಘದ ಅಧ್ಯಕ್ಷೆ ಡಾ. ಸುಶೀಲ ನಾಗರಾಜ್ ಸಚಿವರಿಂದ ಬಹುಮಾನ ಸ್ವೀಕರಿಸಿದರು. ವಿಶ್ವೇಶ್ವರನಗರದ ಆರ್. ಸೌಭಾಗ್ಯಗೆ ದ್ವಿತೀಯ ಬಹುಮಾನ ಹಾಗೂ ಪಿರಿಯಾಪಟ್ಟಣ ತಾಲೂಕು ಕುಂದನಹಳ್ಳಿ ಗ್ರಾಮದ ಶಿವಣ್ಣ ಅವರಿಗೆ ತೃತೀಯ ಬಹು ಮಾನ ಪ್ರದಾನ ಮಾಡಲಾಯಿತು (ಪ್ರಥಮ ಬಹುಮಾನ 30 ಸಾವಿರ ನಗದು ಹೊಂದಿ ದ್ದರೆ, ವೈಯಕ್ತಿಕ ಬಹುಮಾನಗಳಾದ ದ್ವಿತೀಯ ಹಾಗೂ ತೃತೀಯ ಬಹುಮಾನಗಳು ಕ್ರಮ ವಾಗಿ 20 ಸಾವಿರ ರೂ. ಹಾಗೂ 10 ಸಾವಿರ ರೂ. ನಗದು ಒಳಗೊಂಡಿದೆ). ಇದರೊಂ ದಿಗೆ ಜಿಲ್ಲೆಯ 35 ಯುವ ಸಂಘಟನೆಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡ ಲಾಯಿತು. ಬಳಿಕ ಮಾತನಾಡಿದ ಸಚಿವ ಜಿ.ಟಿ. ದೇವೇಗೌಡ, ಯುವ ಸಮುದಾಯ ಸಂಘಟಿತವಾಗಿ ಮುನ್ನಡೆದರೆ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲಿದೆ. ಸೇವೆ ಹಾಗೂ ಸಾಧನೆಗಾಗಿ ಲಭ್ಯವಾಗುವ ಪ್ರಶಸ್ತಿ ಗಳು ನಿಮಗೆ ಸ್ಫೂರ್ತಿಯಾದರೆ ನಿಮ್ಮ ನೆರೆಹೊರೆಯವರಿಗೆ ಪ್ರೇರಣೆ ಆಗಬೇಕು ಎಂದು ಕಿವಿಮಾತು ಹೇಳಿದರು.

ಮೈಸೂರು ವಿವಿ ಎನ್‍ಎಸ್‍ಎಸ್ ಕಾರ್ಯ ಕ್ರಮ ಸಂಯೋಜನಾಧಿಕಾರಿ ಡಾ.ಬಿ. ಚಂದ್ರ ಶೇಖರ ಮಾತನಾಡಿ, ಇಡೀ ವಿಶ್ವದಲ್ಲೇ ಯಾವುದೇ ರಾಷ್ಟ್ರದಲ್ಲಿ ಇರದ ದೊಡ್ಡ ಶಕ್ತಿ ಭಾರತದಲ್ಲಿದ್ದು, ಅದು ಯುವ ಶಕ್ತಿಯಾಗಿದೆ. ಹೆಚ್ಚಿನ ಯುವ ಜನತೆ ಹೊಂದಿರುವ ನಮ್ಮ ರಾಷ್ಟ್ರಕ್ಕೆ ಇದೊಂದು ಆಶಾದಾಯಕ ಬೆಳ ವಣಿಗೆಯಾಗಿದೆ. ಈ ಯುವ ಶಕ್ತಿ ಕೈಕಟ್ಟಿ ಕುಳಿತರೆ ಯಾವುದೇ ಪ್ರಯೋಜನವಾ ಗದು. ಬದಲಾಗಿ ದೇಶಕ್ಕೆ ಈ ಯುವ ಸಮು ದಾಯ ಲಾಭಾಂಶವಾಗಿ ಪರಿವರ್ತನೆ ಆಗಬೇಕು. ಆಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಪ್ರತಿಪಾದಿಸಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತ ನಾಡಿದ ಮೈಸೂರು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾ ಧಿಕಾರಿ ಎಂ.ಎನ್.ನಟರಾಜ್, ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಂದು ಯುವ ಸಮಾವೇಶ ನಡೆಯುತ್ತಿದೆ. ಯುವ ಜನತೆ ಹಾಗೂ ಸಂಘಟನೆಗಳ ಸೇವೆಗಳನ್ನು ಪರಿ ಗಣಿಸಿ ಈ ರೀತಿಯ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಿದೆ ಎಂದರು. ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧ ಕಾಲೇಜು ಗಳ ವಿದ್ಯಾರ್ಥಿಗಳು ಹಾಗೂ ಯುವ ಸಂಘ ಟನೆಗಳ ಸದಸ್ಯರು, ಪದಾಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Translate »