ಅದ್ಧೂರಿಯಾಗಿ ನೆರವೇರಿದ ಶ್ರೀರಾಮಕೃಷ್ಣ ರಥೋತ್ಸವ
ಮೈಸೂರು

ಅದ್ಧೂರಿಯಾಗಿ ನೆರವೇರಿದ ಶ್ರೀರಾಮಕೃಷ್ಣ ರಥೋತ್ಸವ

February 19, 2019

ಮೈಸೂರು: ಎಲ್ಲರ ಮನ-ಮಂದಿರದಲ್ಲಿ ಶ್ರೀ ರಾಮಕೃಷ್ಣ ಪರಮ ಹಂಸ, ಮಾತೆ ಶ್ರೀ ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಚಿಂತನೆ, ಆದರ್ಶಗಳು ಮನೆ ಮಾಡಿರಬೇಕು ಎಂದು ಮೈಸೂರು ಶ್ರೀ ರಾಮಕೃಷ್ಣ ಆಶ್ರ ಮದ ಸ್ವಾಮಿ ಶಾಂತಿವ್ರತಾನಂದ ಜೀ ಮಹಾರಾಜ್ ಅಭಿಪ್ರಾಯಪಟ್ಟರು.

ಮೈಸೂರಿನ ರಾಮಕೃಷ್ಣನಗರದ ಶ್ರೀ ರಾಮಕೃಷ್ಣಪರಮಹಂಸ ವೃತ್ತದಲ್ಲಿ ರಾಮಕೃಷ್ಣ ಬಳಗ ವತಿಯಿಂದ ಆಯೋಜಿಸಿದ್ದ ಶ್ರೀ ರಾಮಕೃಷ್ಣ ರಥೋತ್ಸವ ಸಮಾರಂಭದಲ್ಲಿ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡರು ಮುಡಾ ಅಧ್ಯಕ್ಷ ರಾಗಿದ್ದ ಅವಧಿಯಲ್ಲಿ ಕುವೆಂಪುನಗರ ಬಡಾ ವಣೆ ಜೊತೆಗೆ, ಗುರು ದೇವರ ಪ್ರೇರಣೆ ಯಿಂದ ರಾಮಕೃಷ್ಣ ನಗರ, ಶಾರದಾದೇವಿ ನಗರ, ವಿವೇಕಾನಂದ ನಗರ ಬಡಾವಣೆ ಗಳನ್ನು ನಿರ್ಮಿಸಿ, ಗುರು ತ್ರಯರ ಕೃಪೆಗೆ ಪಾತ್ರರಾಗಿದ್ದಾರೆ. ಇಂಥ ಆಲೋಚನೆ ರಾಮಕೃಷ್ಣ ಪರಮಹಂಸರೇ ಡಿ.ಮಾದೇ ಗೌಡರಿಗೆ ಪ್ರೇರಣೆ ನೀಡಿರಬೇಕು. ಇದರ ಜೊತೆಗೆ ಸ್ವಾಮಿ ವಿವೇಕಾನಂದ, ರಾಮ ಕೃಷ್ಣ ಪರಹಂಸರ ಹೆಸರಿನಲ್ಲಿ ಪ್ರತಿಮೆಗಳನ್ನು ಸ್ಥಾಪಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಮೈಸೂರಿನ ರಾಮಕೃಷ್ಣ ವೃತ್ತದಲ್ಲಿ ಸ್ಥಾಪನೆ ಯಾಗಿರುವ ಪರಮಹಂಸರ ಬೃಹತ್ ಪ್ರತಿಮೆ, ಅವರ ಕಾರ್ಯ ಕ್ಷೇತ್ರವಾದ ಪಶ್ಚಿಮ ಬಂಗಾಲದಲ್ಲೂ ಸ್ಥಾಪನೆಯಾಗಿಲ್ಲ. ಆದರೆ, ಮೈಸೂರಿನ ಜನತೆ ಗುರು ತ್ರಯರ ಪ್ರತಿಮೆ ಸ್ಥಾಪಿಸಿ, ದೇಶಕ್ಕೆ ಮಾದರಿಯಾಗಿದ್ದಾರೆ. ಇದರ ಹಿಂದಿರುವ ಮಾದೇಗೌಡ ನೇತೃತ್ವದ ತಂಡ ಪರಿಶ್ರಮ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.

ರಾಮಕೃಷ್ಣ ಪರಮಹಂಸರ ಜೀವಿತಾ ವಧಿಯಲ್ಲಿ ಸ್ವಾಮೀ ವಿವೇಕಾನಂದ ಸೇರಿ ದಂತೆ ಅನೇಕ ದೇಶಭಕ್ತ ಶಿಷ್ಯರನ್ನು ತಯಾರು ಮಾಡಿದ್ದಾರೆ. ಅದರಲ್ಲಿ ಸ್ವಾಮಿ ವಿವೇಕಾ ನಂದರು ವಿಶ್ವಮಾನ್ಯತೆ ಗಳಿಸಿದರು. ಭಾರ ತೀಯ ಪರಂಪರೆ ಹಾಗೂ ಸನಾತನ ಧರ್ಮ ವನ್ನು ವಿಶ್ವದೆತ್ತರಕ್ಕೆ ಪ್ರಚಾರ ಮಾಡಿ, ಹಿಂದೂಧರ್ಮದ ಅವಶ್ಯಕತೆಯನ್ನು ತಿಳಿಸಿಕೊಟ್ಟಿದ್ದರು. ಸ್ವಾಮೀ ವಿವೇಕಾನಂ ದರ ಜೀವಿತಾವಧಿಯ ಒಂದೊಂದು ಮಾತುಗಳು ಇಂದಿನ ಪೀಳಿಗೆಗೆ ಆದರ್ಶ ಪ್ರಾಯವಾಗಿವೆ ಎಂದರು.

125 ವರ್ಷಗಳ ಹಿಂದೆ ರಾಮಕೃಷ್ಣ ಪರಮ ಹಂಸರು, ಮಾತೆ ಶಾರದಾದೇವಿ ಅವರನ್ನು ದೈವಿ ಸ್ವರೂಪವಾದ ಕಾಳಿ, ದುರ್ಗೆಗೆ ಹೋಲಿಸಿ, ದೇವರ ಪೀಠದಲ್ಲಿ ಕುಳ್ಳಿರಿಸಿ, ಸಾಷ್ಟಾಂಗ ನಮಸ್ಕಾರ ಮಾಡಿದ್ದ ಉದಾ ಹರಣೆ ನೀಡಿದರು. ಪರಮಹಂಸರು ಹೆಣ್ಣಿಗೆ ಯಾವ ರೀತಿ ಗೌರವ ಕೊಡಬೇಕು ಎಂಬು ದರ ಬಗ್ಗೆ ಈ ರೀತಿ ತಾವು ಅನುಸರಿಸುವ ಮೂಲಕ ಜನರಿಗೆ ಮನವರಿಕೆ ಮಾಡಿ ಕೊಟ್ಟಿದ್ದರು. ಪರಮಹಂಸರ ವಿದ್ಯಾಭ್ಯಾಸ ಕೇವಲ 4ನೇ ತರಗತಿ. ಆದರೆ, ಅವರ ಸಾಧನೆ ಮಾತ್ರ ವಿಶ್ವದೆತ್ತರ. ಅವರ ಬಳಿ, ಬರುತ್ತಿದ್ದ ಜನರು ಮಾತ್ರ ಉನ್ನತ ಪದವಿ ಹೊಂದಿದ್ದವರೇ, ಅವರ ಬಳಿ ಬಂದ ಗಣ್ಯರ ಬಳಿ ಎಂದಿಗೂ ಹಣಕಾಸಿನ ನೆರವು ಪಡೆದವರಲ್ಲಾ ಎಂದು ತಿಳಿಸಿದರು.

ಶಾರದಾದೇವಿ ಪ್ರತಿಮೆ ಸ್ಥಾಪನೆಗೆ ಆಗ್ರಹ: ಮೈಸೂರಿನ ಮೂರು ಬಡಾವಣೆ ಜನರು ಪ್ರತಿವರ್ಷ ಗುರುತ್ರಯರ ಜಯಂತಿ ಯನ್ನು ಬಹಳ ಅದ್ಧೂರಿಯಾಗಿ ಆಚರಿಸಿ, ಇನ್ನು ಮುಂದೆ ದೇಶಕ್ಕೆ ಮಾದರಿಯಾಗ ಬೇಕು ಹಾಗೂ ಮೈಸೂರಿನಲ್ಲಿ ಗುರು ರಾಮ ಕೃಷ್ಣರು, ಸ್ವಾಮಿ ವಿವೇಕಾನಂದರ ಪ್ರತಿಮೆ ಸ್ಥಾಪನೆಯಾಗಿದೆ. ಅದರಂತೆ ಶಾರದಾ ದೇವಿ ನಗರ ವೃತ್ತದಲ್ಲಿ ಮಾತೆ ಶಾರದಾ ದೇವಿ ಅವರ ಪ್ರತಿಮೆ ಸ್ಥಾಪನೆಯಾದರೆ, ಗುರುತ್ರಯರ ನೆನಪು ನಗರ ನಿವಾಸಿಗಳ ಮನಸ್ಸಿನಲ್ಲಿ ಸದಾ ಹಸಿರಾಗಿರುತ್ತದೆ ಎಂದರ ಲ್ಲದೆ, ವಿವೇಕಾನಂದ ವೃತ್ತದಲ್ಲಿ ಸ್ಥಾಪನೆ ಯಾಗಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ನಗರ ಪಾಲಿಕೆ ಸದಸ್ಯೆ ಸುನಂದಾ ಪಾಲನೇತ್ರ ಅವರು ಸರ್ಕಾರದ ಯಾವುದೇ ಹಣಕಾಸಿನ ನೆರವು ಪಡೆ ಯದೇ, ಸ್ಥಾಪಿಸಿರುವುದು ಉತ್ತಮ ಬೆಳವಣಿಗೆ ಎಂದರು.

ಪೊನ್ನಂಪೇಟೆಯ ಬೋದ ಸ್ವರೂಪಾ ನಂದ ಜೀ ಮಹಾರಾಜ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರಿಗೆ ರಾಮಕೃಷ್ಣಾ ಶ್ರಮದಲ್ಲಿ ಆಶ್ರಯ ಸಿಗದಿದ್ದರೆ, ಸಾಹಿತ್ಯ ಕ್ಷೇತ್ರದಲ್ಲಿ ಅವರು ಇಷ್ಟೊಂದು ಎತ್ತರದ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ಅವರ ಸಾಧನೆಯ ಹಿಂದೆ ಮೈಸೂರಿನ ರಾಮ ಕೃಷ್ಣಾಶ್ರಮದ ಮಾರ್ಗದರ್ಶನ ಹಾಗೂ ಸ್ವಾಮೀ ವಿವೇಕಾನಂದರ ಪ್ರೇರಣೆಯೂ ಇದೆ ಎಂದು ಅಭಿಪ್ರಾಯಪಟ್ಟರು.

1882ರಲ್ಲಿ ನರೇಂದ್ರ ತನ್ನ ಇಬ್ಬರು ಗೆಳೆಯ ರೊಂದಿಗೆ ರಾಮಕೃಷ್ಣ ಪರಮ ಹಂಸರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ರಾಮಕೃಷ್ಣರ ಆ ಭೇಟಿ, ನರೇಂದ್ರರ ಜೀವ ನಕ್ಕೆ ಮಹತ್ವದ ತಿರುವನ್ನು ಕೊಟ್ಟಿತು. ಆದರೂ ನರೇಂದ್ರರು ರಾಮಕೃಷ್ಣರನ್ನು ಗುರುಗಳನ್ನಾಗಿ ಒಪ್ಪಿಕೊಳ್ಳಲಿಲ್ಲ. ಆದರೆ, ನರೇಂದ್ರ ಮೊದಮೊದಲಿಗೆ ರಾಮಕೃಷ್ಣರ ದೂರದೃಷ್ಟಿಯನ್ನು ಕೇವಲ ಕಾಲ್ಪನಿಕ ಬರಿ ಭ್ರಮೆ ಎಂದು ಭಾವಿಸಿದ್ದರು ಎಂದರು.
1884ರಲ್ಲಿ ಅನಿರೀಕ್ಷಿತವಾಗಿ ನರೇಂದ್ರರ ತಂದೆ ಇಹಲೋಕ ತ್ಯಜಿಸಿದರು. ಅವರ ಮರಣಾ ನಂತರ ಕುಟುಂಬ ಸಂಕಷ್ಟಕ್ಕೆ ಸಿಲು ಕಿತು. ಘಟನೆ ಬಳಿಕ ರಾಮಕೃಷ್ಣರ ಸಾನಿಧ್ಯ ನರೇಂದ್ರರಿಗೆ ಸಾಂತ್ವನ ನೀಡಿತು. ಒಂದು ದಿನ ನರೇಂದ್ರರು ಅವರ ಕುಟುಂಬದ ಅಭ್ಯುದಯಕ್ಕೋಸ್ಕರ ಕಾಳಿ ದೇವಿಯನ್ನು ಪ್ರಾರ್ಥಿಸುವಂತೆ ರಾಮಕೃಷ್ಣರ ಬಳಿ ಕೇಳಿ ಕೊಂಡರು. ನೀನೊಬ್ಬನೇ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಎರಡು, ಮೂರು ಸಲ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿ ಮುಂದಿನ ಪ್ರಸಂಗವನ್ನು ವಿವ ರಿಸಿದರು. ಮುಂದೆ ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಾಂತ ಬಗ್ಗೆ ಅಧ್ಯಯನ ನಡೆಸಿ, ಇದನ್ನು ವಿದೇಶÀ ಗಳಲ್ಲಿ ಪ್ರಚಾರ ಮಾಡಿದರು.

ಆಕರ್ಷಕ ಮೆರವಣಿಗೆ: ಶಾರದಾದೇವಿ ನಗರ ವೃತ್ತದಿಂದ ಮಾತೆ ಶಾರದಾದೇವಿ ರಥ, ವಿವೇಕಾನಂದ ವೃತ್ತದಿಂದ ಸ್ವಾಮಿ ವಿವೇ ಕಾನಂದ ಭಾವಚಿತ್ರವಿದ್ದ ರಥ, ರಾಮಕೃಷ್ಣ ಪರಮಹಂಸರ ರಥಗಳು, ಮೂರು ಬಡಾ ವಣೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಜನರ ಮನ ಸೆಳೆದವು. ವೇದಿಕೆಯಲ್ಲಿ ಎಂಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಹಿರಿಯ ವೈದ್ಯ ಡಾ.ಯೋಗಣ್ಣ, ಪಾಲಿಕೆ ಸದಸ್ಯರಾದ ಲಕ್ಷ್ಮೀಕಿರಣ್ ಮಾದೇಗೌಡ, ಸುನಂದಾಪಾಲನೇತ್ರ, ನಿರ್ಮಲ ಹರೀಶ್, ಶರತ್‍ಕುಮಾರ್ ಸೇರಿದಂತೆ ಅನೇಕರಿದ್ದರು.

Translate »