ಸಿದ್ದಾಪುರಲ್ಲಿ ರೈತ ಸಂಘದ ಸಭೆ: ಅಮಾಯಕ ಕಾರ್ಮಿಕರ ಮೇಲೆ ಹಲ್ಲೆ ಸಲ್ಲ
ಕೊಡಗು

ಸಿದ್ದಾಪುರಲ್ಲಿ ರೈತ ಸಂಘದ ಸಭೆ: ಅಮಾಯಕ ಕಾರ್ಮಿಕರ ಮೇಲೆ ಹಲ್ಲೆ ಸಲ್ಲ

February 24, 2019

ಗೋಣಿಕೊಪ್ಪಲು: ಸಿದ್ದಾಪು ರದ ತೋಟದಲ್ಲಿ ನಡೆದ ಸಂಧ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು.

ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗುವಂತೆ ಇಲಾಖೆ ಕ್ರಮ ವಹಿಸಬೇಕು. ಈ ಪ್ರಕರ ಣಕ್ಕೆ ಸಂಬಂಧಿಸಿದಂತೆ ಅಮಾಯಕ ಕಾರ್ಮಿ ಕರ ಮೇಲೆ ಹಲ್ಲೆ ಪ್ರಯತ್ನ ನಡೆಯಬಾ ರದು, ಬೆಳೆಗಾರರು ಹಾಗೂ ಕಾರ್ಮಿಕರ ನಡುವೆ ಇರುವ ಉತ್ತಮ ಬಾಂಧವ್ಯವನ್ನು ಹಾಳು ಮಾಡದಂತೆ ಎಚ್ಚರ ವಹಿಸಬೇ ಕೆಂದು ರೈತ ಸಂಘ ಆಗ್ರಹಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ನೆಲ್ಲಿಹುದಿ ಕೇರಿಯ ಕೊಂಗೇರ ಬೋಪಯ್ಯ ಕಟ್ಟಡ ಸಭಾಂಗಣದಲ್ಲಿ ನಡೆದ ಅಮ್ಮತ್ತಿ ಹೋಬಳಿ ಮಟ್ಟದ ಸಭೆಯಲ್ಲಿ ರೈತ ಸಂಘ ಈ ನಿರ್ಣಯ ಕೈಗೊಂಡಿದೆ. ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಧ್ಯಾ ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಲಾಯಿತು. ಅಲ್ಲದೆ ಸಂಧ್ಯಾಳ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡ ಬೇಕೆಂದು ಒತ್ತಾಯಿಸಲಾಯಿತು.

ಯಾವುದೇ ಕಾರಣಕ್ಕೂ ಸಾರ್ವಜನಿ ಕರು ಕಾನೂನನ್ನು ಕೈಗೆತ್ತಿಕೊಂಡು ಅಸ್ಸಾಂ ವಲಸಿಗ ಕಾರ್ಮಿಕರ ಮೇಲೆ ಹಲ್ಲೆ ನಡೆಸ ಬಾರದು. ಅನ್ಯೋನತೆಯಿಂದ ಇರುವ ರೈತರು ಹಾಗೂ ಕಾರ್ಮಿಕರ ನಡುವೆ ಒಡಕು ಉಂಟು ಮಾಡಬಾರದು. ಹಲ್ಲೆ ನಡೆಸಿದವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಶಾಂತಿಯಿಂದ ಇರುವ ಜಿಲ್ಲೆಯಲ್ಲಿ ಆಶಾಂತಿಗೆ ಎಡೆ ಮಾಡಿಕೊಡ ದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇ ಕೆಂದು ಮನು ಸೋಮಯ್ಯ ಆಗ್ರಹಿಸಿದರು.

ಸಿದ್ದಾಪುರ ಸುತ್ತಮುತ್ತಲಿನ ರೈತರ, ಬೆಳೆಗಾರರ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದ ಕಾಡಾನೆಗಳ ಬಗ್ಗೆ ಅರಣ್ಯ ಇಲಾಖೆಯು ಕ್ರಮ ವಹಿಸಿದೆ. ರೈತರು ಕಾರ್ಮಿಕರು ಸದ್ಯದ ಮಟ್ಟಿಗೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ರೈತ ಸಂಘದ ನಿರಂತರ ಹೋರಾಟಕ್ಕೆ ಇಲಾಖೆ ಎಚ್ಚೆತ್ತುಕೊಂಡಿದೆ ಎಂದು ಮನು ಸೋಮಯ್ಯ ವಿವರಿಸಿದರು.

ಈ ಸಂದರ್ಭ ರೈತ ಸಂಘಕ್ಕೆ ನೂತನ ಸದಸ್ಯತ್ವ ನೋಂದಣಿ ನಡೆಯಿತು. ಸುತ್ತ ಮುತ್ತಲಿನ ಪ್ರದೇಶದಲ್ಲಿ ರೈತರಿಗೆ ವಿದ್ಯು ಚ್ಛಕ್ತಿ ಅಡಚಣೆ ಬಗ್ಗೆ ಸೆಸ್ಕ್‍ನ ಅಧಿಕಾರಿ ಸುರೇಶ್ ಅವರೊಂದಿಗೆ ಮಾತು ಕತೆ ನಡೆಸಿ ವಿದ್ಯುತ್ ನಿಲುಗಡೆಯಾಗದಂತೆÉ ಕ್ರಮ ವಹಿಸಲು ಮನವಿ ಮಾಡಲಾಯಿತು.

ಸಭೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿ ಮಾಡ ಸುಭಾಷ್ ಸುಬ್ಬಯ್ಯ, ಕಾರ್ಯ ದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಜಿ ತಿತೀರ ಸಭಿತ, ಮುಖಂಡರಾದ ಮಂಡೇ ಪಂಡ ಪ್ರವೀಣ್, ಕೊಂಗೇರ ಗಪ್ಪು, ಕೆ.ಕೆ.ಕಿರಣ್ ಜೋಸೆಫ್, ಎಂ.ಪಿ.ಮಾಚಯ್ಯ, ಎಂ.ಸಿ.ಕುಶಾಲಪ್ಪ, ಡಿ.ಸಿ.ಬೋಪಣ್ಣ, ಕೆ.ಡಿ.ನಾಣಯ್ಯ, ಎಂ.ಸಿ.ತಮ್ಮಯ್ಯ, ಜಯಂತ್ ಚಿಣ್ಣಪ್ಪ, ಸೂರಜ್, ಸುನೀಲ್, ವಕೀಲರಾದ ಹೇಮಚಂದ್ರ ಮುಂತಾದ ವರು ಹಾಜರಿದ್ದರು.

Translate »