ಮಡಿಕೇರಿ, ಏ.18- ಕೊಡಗಿನ ಹೆಸರಾಂತ ಹಾಕಿ ತಾರೆ ಭಾರತದ ಮೊಟ್ಟ ಮೊದಲ ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿ 41 ವರ್ಷದ ಮುಂಡಂಡ (ಪುಚ್ಚಿಮಂಡ) ಅನುಪಮ ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 88ಕ್ಕೂ ಅಧಿಕ ಅಂತರರಾಷ್ಟ್ರೀಯ ಹಾಕಿ ಪಂದ್ಯಾ ವಳಿಗಳಲ್ಲಿ ಭಾಗವಹಿಸಿದ್ದ ಅನುಪಮ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ “ಫೆಡರೇಷನ್ ಆಫ್ ಇಂಟರ್‍ನ್ಯಾಷನಲ್ ಹಾಕಿ” ಪಂದ್ಯಾವಳಿಗಳ ತೀರ್ಪುಗಾರರಾಗಿ ಆಯ್ಕೆಯಾಗುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದರು. ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದಲ್ಲಿ 1980 ಜುಲೈ 8ರಂದು ಜನಿಸಿದ ಅನುಪಮ, ಪತಿ ಮುಂಡಂಡ…
ವಿದ್ಯಾರ್ಥಿಗಳ ಮನೆಯ ಬಾಗಿಲಿಗೆ ಆಹಾರ ವಿತರಿಸಿದ ಶಿಕ್ಷಕಿ
April 18, 2020ಮಡಿಕೇರಿ, ಏ.17- ತಾಲೂಕಿನ ಕಡಂಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಕೆ.ಎಂ.ವಿಮಲ ಸರ್ಕಾರದ ಆದೇಶದಂತೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿ ಗಳ ಪೋಷಕರನ್ನು ದೂರ ವಾಣಿ ಮೂಲಕ ಸಂಪರ್ಕಿಸಿ ಒಂದನೇ ಹಂತದಲ್ಲಿ ಶೇ. 60 ಅಕ್ಷರ ದಾಸೋಹ ಆಹಾರವನ್ನು ಪೋಷಕರಿಗೆ ವಿತರಿಸಿದರು. ಶಾಲೆಯಿಂದ ಬಟ್ಟೆಯ ಚೀಲದಲ್ಲಿ ಆಹಾರವನ್ನು ಅವರ ಸ್ವಂತ ಕಾರಿನಲ್ಲಿ ತುಂಬಿ ವಿದ್ಯಾರ್ಥಿಗಳ ಪೋಷಕರಿಗೆ ಆಹಾರವನ್ನು ವಿತರಿಸಿದ್ದು, ಇದರಿಂದ ಹಷರ್Àಗೊಂಡ ವಿದ್ಯಾರ್ಥಿಗಳ ಪೋಷಕರು ಶಿಕ್ಷಕಿ ಕೆ.ಎಂ.ವಿಮಲ ಅವರ ಮಾನವೀಯತೆಯ ಕಾರ್ಯಕ್ಕೆ ಅಭಿನಂದನೆ…
‘ಕೊರೊನಾ ವಾರಿಯರ್ಸ್‍ಗೆ ಗೌರವ’ ವಿಶೇಷ ಸರಣಿ ಕಾರ್ಯಕ್ರಮ
April 18, 2020ಮಡಿಕೇರಿ,ಏ.17-ಮಡಿಕೇರಿ ಆಕಾಶವಾಣಿ ಕೇಂದ್ರದಿಂದ ಏ.20ರಂದು ಸಂಜೆ 5 ಗಂಟೆಗೆ ‘ಕೊರೊನಾ ವಾರಿಯರ್ಸ್‍ಗೆ ಗೌರವ’ ವಿಶೇಷ ಸರಣಿ ಕಾರ್ಯಕ್ರಮ ಬಿತ್ತರವಾಗುತ್ತಿದೆ. ಕೊರೊನಾ-19ರ ಸಂದರ್ಭದಲ್ಲಿ ಸಮಾಜದ ಆರೋಗ್ಯವನ್ನು ಕಾಪಾಡಲು ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ನೇರ-ಫೋನ್ ಇನ್ ಸಂವಾದ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಭಾಗವಹಿಸಿ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ರೇಡಿಯೋ ಕೇಳುಗರು ದೂ.ಸಂ. 9740871827ಕ್ಕೆ ಆರೋಗ್ಯ ಇಲಾಖೆಯ ಕೆಲಸಗಳ ಬಗ್ಗೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಎಸ್‍ಎಂಎಸ್ ಹಾಗೂ ವಾಟ್ಸ್‍ಆಪ್ ಮೂಲಕ ಕಳುಹಿಸುವುದರೊಂದಿಗೆ ಈ ಕಾರ್ಯಕ್ರಮದಲ್ಲಿ…
ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಗೂಡ್ಸ್ ವಾಹನ
April 18, 2020ಮಡಿಕೇರಿ, ಏ.17- ಹುಣಸೂರಿನಿಂದ ಮಡಿಕೇರಿಗೆ ತರಕಾರಿ ಕೊಂಡೊಯ್ಯುತ್ತಿದ್ದ ಗೂಡ್ಸ್ ವಾಹನ ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಬಸವನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಶುಕ್ರವಾರ ಬೆಳಗಿನ 4.45ರ ನಸುಕಿನ ಸಮಯದಲ್ಲಿ ಈ ಘಟನೆ ನಡೆದಿದ್ದು, ವಾಹನ ಚಾಲಕ ಮತ್ತು ವಾಹನದಲ್ಲಿದ್ದ ಮತ್ತೊಬ್ಬ ಯುವಕ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಕುರಿತು ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ವಿವರ: ಮಡಿಕೇರಿ ಮಹದೇವಪೇಟೆ ನಿವಾಸಿ ಕುಮಾರ್…
ಮಡಿಕೇರಿಯಲ್ಲಿ ಬಾಲಕಿಗೆ ಜನಿಸಿದ ಮಗು ಮಾರಾಟ
January 6, 2020ಮಡಿಕೇರಿ, ಜ.5- ಖಾಸಗಿ ಆಸ್ಪತ್ರೆ ಯೊಂದರಲ್ಲಿ ಅಪ್ರಾಪ್ತೆಗೆ ಜನಿಸಿದ ಗಂಡು ಮಗುವನ್ನು 1.50 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಮಡಿಕೇರಿ ಜಿಲ್ಲಾಸ್ಪತ್ರೆಯ ಮಹಿಳಾ ವೈದ್ಯೆ ಸೇರಿದಂತೆ ಇತರ 7 ಮಂದಿಯ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಟಿ.ಎಸ್.ಅರುಂದತಿ ಅವರು ನೀಡಿದ ದೂರನ್ನು ಆಧರಿಸಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ…
ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವರಿಂದ ಬೈಕ್ ಜಾಥಾಕ್ಕೆ ಚಾಲನೆ
September 4, 2019ಮಡಿಕೇರಿ, ಸೆ.3- ಜೀವನದಿ ಕಾವೇರಿ ಕಳೆದ 8 ವರ್ಷಗಳಿಂದ ಸಮುದ್ರ ಸೇರುವ ಮೊದಲೇ ಸಂಪೂರ್ಣ ಬತ್ತಿ ಹೋಗುತ್ತಿದೆ. ಇಂತಹ ಪರಿಸ್ಥಿತಿಯನ್ನು ದೇಶದ ಹಲವು ನದಿಗಳು ಎದುರಿಸುತ್ತಿದ್ದು, ಇದನ್ನು ನಿಯಂತ್ರಿಸದಿದ್ದಲ್ಲಿ ದಕ್ಷಿಣ ಭಾರತ ಮಾತ್ರ ವಲ್ಲದೇ ದೇಶಾದ್ಯಂತ ಅಂತರ್ಜಲ ಮಟ್ಟ ಕುಸಿದು ಮಹಾ ಪ್ರಾಕೃತಿಕ ವಿಪತ್ತುಗಳು ಸಂಭವಿಸುವ ಕಾಲ ದೂರವಿಲ್ಲ ಎಂದು ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಎಚ್ಚರಿಸಿದ್ದಾರೆ. ತಲಕಾವೇರಿಯ ಪವಿತ್ರ ತೀರ್ಥ ಕುಂಡಿಕೆಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ನೆರವೇರಿಸಿದ ಬಳಿಕ ಕಾವೇರಿ ಕೂಗು…
ಡಿಎಫ್‍ಓ ಮಂಜುನಾಥ್ ಅಮಾನತು
June 15, 2019ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ನಿಯಮಬಾಹಿರವಾಗಿ ಮರಗಳನ್ನು ಕಡಿ ಯಲು ಅನುಮತಿ ನೀಡಿದ ಆರೋಪದ ಮೇರೆಗೆ ಡಿಎಫ್‍ಓ ಮಂಜುನಾಥ್ ಅವರನ್ನು ಅಮಾನತು ಪಡಿಸಿ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮಂಜುನಾಥ್ ಅಮಾನತಿನಿಂದ ತೆರವಾಗಿರುವ ಸ್ಥಾನಕ್ಕೆ ವಿರಾಜ ಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷ ಣಾಧಿಕಾರಿ ಮರಿಯಾ ಕ್ರಿಸ್ತರಾಜ್‍ಗೆ ಪ್ರಭಾರ ವಹಿಸಲಾಗಿದೆ. ಕೆ.ನಿಡುಗಣೆ ಗ್ರಾಮದಲ್ಲಿ ಸುಮಾರು 35 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ವಿವಿಧ ಜಾತಿಯ 808 ಮರ ಗಳನ್ನು ಕಡಿಯಲು ನಿಯಮಬಾಹಿರ…
ಕಾರಿಗೆ ಲಾರಿ ಡಿಕ್ಕಿ: ನಿವೃತ್ತ ಕೆಎಎಸ್ ಅಧಿಕಾರಿ ಡಾ.ಕೆ.ಎ.ಅಪ್ಪಯ್ಯ ಸಾವು
June 5, 2019ಕುಶಾಲನಗರ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಿವೃತ್ತ ಕೆಎಎಸ್ ಅಧಿಕಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಡಿಕೇರಿ-ಹಾಸನ ರಾಜ್ಯ ಹೆದ್ದಾರಿ ತೊರೆನೂರು ಗ್ರಾಮದ ಬಳಿ ಮಂಗಳವಾರ ಸಂಭವಿಸಿದೆ. ಮೂಲತಃ ಮಡಿಕೇರಿ ತಾಲೂಕು, ಮೂರ್ನಾಡು ಸಮೀಪದ ಕುಂಬಳ ದಾಳು ನಿವಾಸಿ, ನಿವೃತ್ತ ಎಸಿ ಡಾ.ಕೆ.ಎ.ಅಪ್ಪಯ್ಯ(65) ಅಪಘಾತದಲ್ಲಿ ಮೃತಪಟ್ಟಿದ್ದು, ಜೊತೆಯಲ್ಲಿದ್ದ ಅವರ ಪತ್ನಿ ಮೀನಾಕ್ಷಿ ಅವರು ಅದೃಷ್ಟವ ಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಹಿಂಭಾಗದ ಸೀಟ್ ನಲ್ಲಿದ್ದ ಅಪ್ಪಯ್ಯ ಅವರ ಪ್ರೀತಿಯ ಶ್ವಾನವೂ ಬದುಕುಳಿದಿದೆ. ಬೆಂಗಳೂರಿನ ಹೆಬ್ಬಾಳು ಬಡಾವಣೆಯಲ್ಲಿ ನೆಲೆಸಿರುವ…
ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಬೇಸಿಗೆ ಶಿಬಿರ ಉದ್ಘಾಟನೆ
April 23, 2019ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ 9 ರಿಂದ 16 ವರ್ಷದ ಮಕ್ಕಳಿಗೆ ಮೇ 6 ರವರೆಗೆ ಉಚಿತವಾಗಿ ಬೇಸಿಗೆ ಶಿಬಿರದ ಕಾರ್ಯಕ್ರಮವನ್ನು ನಗರದ ಸ್ತ್ರೀಶಕ್ತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶಿಬಿರದ ಉದ್ಘಾಟನಾ ಸಮಾರಂಭವು ಸೋಮವಾರ ನಡೆಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ,…
ಚುನಾವಣಾ ಕರ್ತವ್ಯಕ್ಕೆ ಅಡ್ಡಿ: ಸಾರಿಗೆ ಇಲಾಖಾ ಪ್ರಭಾರ ಅಧಿಕಾರಿ ಅಮಾನತು
April 10, 2019ಮಡಿಕೇರಿ: ವಿರಾಜಪೇಟೆ ಸಮೀಪದ ಪೆರುಂ ಬಾಡಿ ಚೆಕ್‍ಪೋಸ್ಟ್‍ನಲ್ಲಿ ಮಾ.28ರಂದು ರಾತ್ರಿ 10 ಗಂಟೆಯ ಸಮಯದಲ್ಲಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಕೊಡಗು ಜಿಲ್ಲಾ ಸಾರಿಗೆ ಇಲಾ ಖೆಯ ಪ್ರಭಾರ ಅಧಿಕಾರಿ ಜೆ.ಪಿ.ಗಂಗಾಧರ ಎಂಬು ವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಕೊಡಗು ಜಿಲ್ಲಾಧಿಕಾರಿಗಳು ಪ್ರಭಾರ ಸಾರಿಗೆ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜ್ಯ ಸಾರಿಗೆ ಆಯುಕ್ತರಿಗೆ ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ ಸಾರಿಗೆ ಆಯುಕ್ತರು ಮತ್ತು ಶಿಸ್ತು ಸಮಿತಿಯು ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಚುನಾವಣಾ ಕರ್ತವ್ಯದಲ್ಲಿದ್ದ ಎಸ್.ಎಸ್.ಟಿ. ತಂಡದ…