ಡಿಎಫ್‍ಓ ಮಂಜುನಾಥ್ ಅಮಾನತು
ಮೈಸೂರು

ಡಿಎಫ್‍ಓ ಮಂಜುನಾಥ್ ಅಮಾನತು

June 15, 2019

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ನಿಯಮಬಾಹಿರವಾಗಿ ಮರಗಳನ್ನು ಕಡಿ ಯಲು ಅನುಮತಿ ನೀಡಿದ ಆರೋಪದ ಮೇರೆಗೆ ಡಿಎಫ್‍ಓ ಮಂಜುನಾಥ್ ಅವರನ್ನು ಅಮಾನತು ಪಡಿಸಿ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಮಂಜುನಾಥ್ ಅಮಾನತಿನಿಂದ ತೆರವಾಗಿರುವ ಸ್ಥಾನಕ್ಕೆ ವಿರಾಜ ಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷ ಣಾಧಿಕಾರಿ ಮರಿಯಾ ಕ್ರಿಸ್ತರಾಜ್‍ಗೆ ಪ್ರಭಾರ ವಹಿಸಲಾಗಿದೆ. ಕೆ.ನಿಡುಗಣೆ ಗ್ರಾಮದಲ್ಲಿ ಸುಮಾರು 35 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ವಿವಿಧ ಜಾತಿಯ 808 ಮರ ಗಳನ್ನು ಕಡಿಯಲು ನಿಯಮಬಾಹಿರ ವಾಗಿ ಅನುಮತಿ ನೀಡಿದ್ದೇ ಡಿಎಫ್‍ಓ ಮಂಜುನಾಥ್ ಅವರ ಅಮಾನತಿಗೆ ಕಾರಣ ಎಂದು ಹೇಳಲಾಗಿದೆ. ಕೆ.ನಿಡುಗಣೆ ಗ್ರಾಮ ಪಂಚಾಯ್ತಿಗೆ ಸೇರಿದ ಗಾಳಿಬೀಡು ರಸ್ತೆಯಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಜಮೀನಿನಲ್ಲಿ ನೂರಾರು ಮರಗಳ ಹನನ ನಡೆದಿರುವ ಬಗ್ಗೆ ಮಾಜಿ ಸಚಿವ ಎಂ.ಸಿ.ನಾಣಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮರಗಳ ಹನನ ತಡೆಯುವಂತೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಖಾಸಗಿ ಜಮೀನಿನಲ್ಲಿ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಇದ್ದ ಕಾರಣ ಅದು ಅಕ್ರಮ ಕೃತ್ಯವೇನಾಗಿರಲಿಲ್ಲ. ಆದರೂ ಮರ ಹನನ ಮಾಡುವುದನ್ನು ಸ್ಥಗಿತಗೊಳಿಸು ವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಈ ಸಂಬಂಧ ಹಿರಿಯ ಅಧಿಕಾರಿಗಳು ತನಿಖೆ ನಡೆಸಿದಾಗ ಡಿಎಫ್‍ಓ ಮಂಜುನಾಥ್ ಅವರು ನಿಯಮಗಳನ್ನು ಗಾಳಿಗೆ ತೂರಿ ಭಾರೀ ಪ್ರಮಾಣದ 808 ಮರಗಳನ್ನು ಕಡಿಯಲು ಅನುಮತಿ ನೀಡಿದ್ದರು ಎಂಬುದು ಬೆಳಕಿಗೆ ಬಂದಿತ್ತು. ಮತ್ತೊಂದು ಪ್ರಕರಣದಲ್ಲಿ ಮಡಿಕೇರಿಯಲ್ಲಿ ಸರ್ಕಾರಿ ಉದ್ದೇಶಕ್ಕಾಗಿ ಮರ ಹನನ ಮಾಡಲಾಗಿದೆ ಎಂದು ದಾಖಲೆ ಸೃಷ್ಟಿ ಮಾಡಲಾಗಿದೆ. ಸದರಿ ಸ್ಥಳವು ಕರ್ನಾಟಕ ಗೃಹ ಮಂಡಳಿಗೆ ಸೇರಿದ್ದಾಗಿದ್ದು, ಅಲ್ಲಿ ನಿವೇಶನ ರಚಿಸಿ ಮನೆ ನಿರ್ಮಿಸಲು ಮರಗಳನ್ನು ಕಡಿಯುವುದು ಅನಿವಾರ್ಯ ಎಂಬಂತೆ ಕಡತಗಳಲ್ಲಿ ತೋರಿಸ ಲಾಗಿತ್ತು. ಕಡಿದ ಮರಗಳನ್ನು ಕುಶಾಲನಗರದಲ್ಲಿರುವ ಅರಣ್ಯ ಇಲಾಖೆಯ ಮರದ ಡಿಪೋಗೆ ಸಾಗಿಸುವಂತೆಯೂ ಆದೇಶದಲ್ಲಿ ತೋರಿಸಲಾಗಿತ್ತು ಎಂದು ಹೇಳಲಾಗಿದೆ.

ಕೊಡಗು ಜಿಲ್ಲಾ ಸಿಸಿಎಫ್ ಸಂತೋಷ್ ಕುಮಾರ್, ಪ್ರಭಾರ ಡಿಎಫ್‍ಓ ಮರಿಯಾ ಕ್ರಿಸ್ತರಾಜ್, ಎಸಿಎಫ್ ನೆಹರು ಅವರುಗಳು ಶುಕ್ರವಾರ ಸಂಜೆ ಕೆ.ನಿಡುಗಣೆ ಗ್ರಾಮದಲ್ಲಿ ಮರಗಳ ಹನನವಾದ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ `ಮೈಸೂರು ಮಿತ್ರ’ನ ಜೊತೆ ಮಾತನಾಡಿದ ಸಿಸಿಎಫ್ ಸಂತೋಷ್ ಕುಮಾರ್, ಕೆ.ನಿಡುಗಣೆ ಗ್ರಾಮದಲ್ಲಿ 808 ಮರಗಳನ್ನು ಕಡಿಯಲು ಅನುಮತಿ ನೀಡಿದ್ದು, ಈಗಾಗಲೇ 783 ಮರಗಳನ್ನು ಕಡಿಯಲಾಗಿದೆ. ಅಲ್ಲದೇ ಅನುಮತಿ ಪಡೆದ ಸ್ಥಳದ ಬದಲಿಗೆ ಬೇರೆ ಸ್ಥಳದಲ್ಲಿ 73 ಮರಗಳನ್ನು ಕಡಿಯಲಾಗಿದೆ. ಇದರಲ್ಲಿ ಡಿಎಫ್‍ಓ ಮಂಜುನಾಥ್ ಅವರ ನಿರ್ಲಕ್ಷ್ಯತೆ ಮತ್ತು ಕರ್ತವ್ಯಲೋಪವಿದ್ದದ್ದು ಕಂಡುಬಂದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಅವರನ್ನು ಅಮಾನತುಗೊಳಿಸಿದ್ದಾರೆ ಎಂದರು.

Translate »