ಪಕ್ಷೇತರರಾದ ಶಂಕರ್, ನಾಗೇಶ್ ಸಂಪುಟ ಸೇರ್ಪಡೆ
ಮೈಸೂರು

ಪಕ್ಷೇತರರಾದ ಶಂಕರ್, ನಾಗೇಶ್ ಸಂಪುಟ ಸೇರ್ಪಡೆ

June 15, 2019

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲ ವಿಸ್ತರಿಸಿ ಇಬ್ಬ ರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜು ಭಾಯಿ ವಾಲಾ, ಪಕ್ಷೇತರ ಸದಸ್ಯರಾದ ಆರ್. ಶಂಕರ್ ಹಾಗೂ ನಾಗೇಶ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಇದರೊಂದಿಗೆ ಕುಮಾರಸ್ವಾಮಿ ಮೈತ್ರಿ ಸರ್ಕಾರದ ಸಂಪುಟದ ಗಾತ್ರ 33ಕ್ಕೆ ತಲುಪಿದೆ. ಇನ್ನೊಂದು ಸ್ಥಾನ ಮಾತ್ರ ಖಾಲಿ ಉಳಿಸಿ ಕೊಂಡಿದ್ದಾರೆ. ಜೆಡಿಎಸ್ ಕೋಟಾದಡಿ ದಲಿತ ಸಮುದಾಯಕ್ಕೆ ಸೇರಿದ ನಾಗೇಶ್, ಕಾಂಗ್ರೆಸ್‍ನ ಸಿ.ಎಸ್.ಶಿವಳ್ಳಿ ಅವರ ನಿಧನ ದಿಂದ ತೆರವಾಗಿದ್ದ ಸ್ಥಾನವನ್ನು ಕುರುಬ ಸಮುದಾಯದ ಆರ್.ಶಂಕರ್ ಅವರಿಗೆ ನೀಡಲಾಗಿದೆ. ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಹತ್ತರಿಂದ 20 ಶಾಸ ಕರು ಸಚಿವರಾಗಲು ಆಕಾಂಕ್ಷಿಗಳಾಗಿ ದ್ದರು. ಆದರೆ ಅಧಿಕಾರ ಉಳಿಸಿಕೊಳ್ಳಲು ರಾಜಕೀಯ ತಂತ್ರಗಾರಿಕೆ ಮಾಡುವ ಅನಿವಾರ್ಯತೆಯಿಂದ ತಮ್ಮ ಪಕ್ಷದ ಸದಸ್ಯರುಗಳಿಗೆ ಅವಕಾಶ ನೀಡಲು ಸಾಧ್ಯ ವಾಗಿಲ್ಲ. ತಮ್ಮ ಸದಸ್ಯರನ್ನು ಬಿಜೆಪಿ ಸೆಳೆದು ಸರ್ಕಾರ ಉರುಳಿಸಲು ಬೇಕಾಗಿರುವ ಮ್ಯಾಜಿಕ್ ಸಂಖ್ಯೆ ಮುಟ್ಟದಿರುವಂತೆ ನೋಡಿ ಕೊಳ್ಳುವ ಉದ್ದೇಶದಿಂದ ಪಕ್ಷೇತರರಿಗೆ ಸಂಪುಟದಲ್ಲಿ ಮಣೆ ಹಾಕಿದ್ದಾರೆ.

ಇತ್ತೀಚೆಗೆ ಆಪರೇಷನ್ ಕಮಲ ತುಟ್ಟ ತುದಿ ಮುಟ್ಟಿದ ಸಂದರ್ಭದಲ್ಲಿ ಈ ಇಬ್ಬರು ಸದಸ್ಯರೇ ಬಿಜೆಪಿಗೆ ಮೊದಲು ಬೆಂಬಲ ವ್ಯಕ್ತಪಡಿಸಿ, ಸಂಖ್ಯೆ ಬೆಳೆಯಲು ಕಾರಣ ಕರ್ತರಾಗಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮೈತ್ರಿ ಸರ್ಕಾರ ಉಳಿಸಲು ದೃಢ ನಿಲುವು ತೆಗೆದುಕೊಂಡಿದ್ದು, ಅವರ ಅಣತಿ ಯಂತೆ ರಾಜ್ಯ ಕಾಂಗ್ರೆಸ್ ನಾಯಕರು ನಡೆದುಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ನಲ್ಲಿ ಎದ್ದಿದ್ದ ಬಂಡಾಯ ಸ್ವಲ್ಪ ಮಟ್ಟಿಗೆ ಶಮನವಾದಂತಿದೆ. ಇತ್ತ ಬಿಜೆಪಿ ಸದ್ಯಕ್ಕೆ ಆಪರೇಷನ್
ಕಮಲಕ್ಕೂ ತಿಲಾಂಜಲಿ ಇಟ್ಟಿದೆ. ಇದನ್ನು ಅರಿತ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ತಮ್ಮ ಪಕ್ಷದವರಿಗೆ ಆದ್ಯತೆ ನೀಡದೇ ಪಕ್ಷೇತರರನ್ನು ಮೊದಲು ಗಟ್ಟಿ ಮಾಡಿಕೊಳ್ಳಲು ಸಂಪುಟ ವಿಸ್ತರಣೆ ಮಾಡುವ ನಿರ್ಧಾರ ಕೈಗೊಂಡರು. ಅದರಂತೆ ಇಂದು ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲಕ್ಕೆ ಇಬ್ಬರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಸಚಿವ ಸಂಪುಟದ ಸದಸ್ಯರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಿಗಳು ಹಾಗೂ ಗಣ್ಯರು ಹಾಜರಿದ್ದರು. ಆದರೆ ವಿಸ್ತರಣೆ ಸಂದರ್ಭದಲ್ಲಿ ಮೈತ್ರಿ ಪಕ್ಷದ ರಾಜ್ಯಾಧ್ಯಕ್ಷರುಗಳಾದ ಎಚ್. ವಿಶ್ವನಾಥ್ ಹಾಗೂ ದಿನೇಶ್ ಗುಂಡೂ ರಾವ್ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಅಷ್ಟೇ ಅಲ್ಲ ಸಂಪುಟಕ್ಕೆ ಸೇರ್ಪಡೆಗೊಳ್ಳಲು ತೀವ್ರ ಕಾತುರರಾಗಿದ್ದ, ಉಭಯ ಪಕ್ಷದ ಶಾಸಕರು ರಾಜಭವನದತ್ತ ಸುಳಿಯಲಿಲ್ಲ.

Translate »