ಜೂಜು ಅಡ್ಡೆ ಮೇಲೆ ದಾಳಿ: ಪ್ರತ್ಯೇಕ ಪ್ರಕರಣದಲ್ಲಿ 14 ಮಂದಿ ಬಂಧನ
ಕೊಡಗು

ಜೂಜು ಅಡ್ಡೆ ಮೇಲೆ ದಾಳಿ: ಪ್ರತ್ಯೇಕ ಪ್ರಕರಣದಲ್ಲಿ 14 ಮಂದಿ ಬಂಧನ

December 26, 2018

ವಿರಾಜಪೇಟೆ: ವಿರಾಜಪೇಟೆ ಹಾಗೂ ಸೋಮವಾರಪೇಟೆಯಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಒಟ್ಟಾರೆ 14 ಮಂದಿಯನ್ನು ಬಂಧಿಸಿ, ಪಣಕ್ಕಿಟ್ಟದ್ದ 28 ಸಾವಿರಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿಸಿದ್ದಾರೆ.ವಿರಾಜಪೇಟೆ ಪಟ್ಟಣದ ಜೈನರ ಬೀದಿಯ ಮೆಸ್‍ನ ಒಂದರ ಹಿಂಬದಿಯಲ್ಲಿ ಜೂಜಾಟ ಆಡುತ್ತಿದ್ದ 12 ಮಂದಿಯನ್ನು ಇಲ್ಲಿನ ನಗರ ಠಾಣೆ ಪೊಲೀಸರು ಬಂಧಿಸಿ, ಪಣಕ್ಕಿಟ್ಟಿದ್ದ 8900 ರೂ.ಗಳನ್ನು ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿದ್ದಾರೆ.

ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಜೂಜಾಟದಲ್ಲಿ ತೊಡ ಗಿದ್ದ ಟಿ.ಜೆ.ಗಣೇಶ್, ಪಿ.ಕೆ.ಶಫಿಕ್, ಟಿ.ಸೂರ್ಯ, ಹೆಚ್.ವಿ.ಭರತ್ ಕುಮಾರ್, ಟಿ.ಸಿ.ವಿನುಕುಮಾರ್, ಕೆ.ಜಾನ್, ಟಿ.ಎನ್. ಸತೀಶ್, ವೈ.ಎ.ರಜಾಕ್, ಟಿ.ಎನ್.ರೂಪೇಶ್, ಎಂ.ಡಿ. ಪವನ್, ಜಗದೀಶ್, ಎನ್.ಬಾಬು, ಎಂಬುವರುಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಎಎಸ್‍ಐ ಮುತ್ತಣ್ಣ, ಸುಬ್ರಮಣಿ, ಸಿಬ್ಬಂದಿ ಗಳಾದ ಸುನೀಲ್, ರಜನ್, ಸತೀಶ್, ಲೋಹಿತ್, ಮುನೀರ್ ಅವರುಗಳು ಭಾಗವಹಿಸಿದ್ದರು.

ಸೋಮವಾರಪೇಟೆ ವರದಿ: ಇಲ್ಲಿನ ಕರ್ಕಳ್ಳಿಬಾಣೆಯ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರ ಬಂಧನದೊಂದಿಗೆ 20,850 ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ.ಕರ್ಕಳ್ಳಿ ಬಾಣೆಯಲ್ಲಿ ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದ ಹಾನಗಲ್ಲು ಗ್ರಾಮದ ಶೇಖರ್, ಸೋಮ ವಾರಪೇಟೆಯ ಬಿ.ಎಂ. ಶಾಂತಕುಮಾರ್ ಅವರುಗ ಳನ್ನು ಬಂಧಿಸಿ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 20,850 ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ.
ಜೂಜಾಟದಲ್ಲಿ ನಿರತರಾಗಿದ್ದ ಕರ್ಕಳ್ಳಿ ಬಾಣೆಯ ರಾಘವೇಂದ್ರ, ಬಜೆಗುಂಡಿಯ ಅಪ್ಪಣ್ಣಿ, ಸೋಮವಾರ ಪೇಟೆಯ ಜಗ್ಗ ಅವರುಗಳು ಪೊಲೀಸರನ್ನು ಕಂಡೊಡನೆ ಸ್ಥಳದಿಂದ ಪರಾರಿಯಾಗಿದ್ದು, ಒಟ್ಟು 5 ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಸಿಬ್ಬಂದಿಗಳಾದ ಶಿವಕುಮಾರ್, ಜಗದೀಶ್, ಶಂಕರ, ಕುಮಾರ್ ಮತ್ತು ಮಂಜುನಾಥ್ ಅವರುಗಳು ಭಾಗವಹಿಸಿದ್ದರು.

Translate »