ಗುಂಡ್ಲುಪೇಟೆಯಲ್ಲಿ ಕ್ರಿಸ್‍ಮಸ್ ಸಡಗರ
ಚಾಮರಾಜನಗರ

ಗುಂಡ್ಲುಪೇಟೆಯಲ್ಲಿ ಕ್ರಿಸ್‍ಮಸ್ ಸಡಗರ

December 26, 2018

ಗುಂಡ್ಲುಪೇಟೆ: ಪಟ್ಟಣ ಮತ್ತು ತಾಲೂಕಿನಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಿದರು.
ಪಟ್ಟಣದ ನಿರ್ಮಲ ಆಶ್ರಮ ಮತ್ತು ಕಾನ್ವೆಂಟ್, ಊಟಿ ವೃತ್ತ, ಮಡಹಳ್ಳಿ ರಸ್ತೆ ಹಾಗೂ ಜನತಾ ಕಾಲೋನಿಯ ಚರ್ಚು ಗಳಲ್ಲಿ ಸೋಮವಾರ ಸಂಜೆಯಿಂದಲೇ ಸಾಮೂಹಿಕ ಪ್ರಾರ್ಥನೆಯನ್ನು ನೆರ ವೇರಿಸಲಾಯಿತು. ಕ್ರೈಸ್ತ ಆಡಳಿತದ ಶಾಲೆ ಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕ ರೊಂದಿಗೆ ಕೇಕ್ ಕತ್ತರಿಸಿ ವಿತರಣೆ ಮಾಡಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿ ದರು. ಪಟ್ಟಣದ ಕೇರಳ ರಸ್ತೆಯಲ್ಲಿರುವ ನಿರ್ಮಲ ಆಶ್ರಮದಲ್ಲಿ ಏಸುಕ್ರಿಸ್ತನ ಜನ ನದ ಸಂದರ್ಭವನ್ನು ನೆನಪಿಸುವ ಗೋದಲಿ, ಕುರಿಗಳು ಕುರಿಗಾಹಿಗಳು ಹಾಗೂ ಸಹ ಚರರ ಬೊಂಬೆಗಳನ್ನು ಇರಿಸಿ ವಿಶೇಷ ವಾಗಿ ಸ್ಟಾರ್‍ಗಳಿಂದ ಅಲಂಕರಿಸಲಾಗಿತ್ತು.

ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತ ಬಾಂಧ ವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಪರಸ್ಪರ ಶುಭಹಾರೈಸಿ ಕೇಕ್ ಮತ್ತು ಸಿಹಿಹಂಚಿಕೆ ಮಾಡಿ ಸಂಭ್ರಮಿಸಿದರು.

Translate »