ಮಾರ್ಟಳ್ಳಿ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ: ಬಿದರಹಳ್ಳಿ  ಭಾಗದಲ್ಲಿ ಮುಂದಿನ ವರ್ಷದಿಂದಲೇ ಹೈಸ್ಕೂಲ್
ಚಾಮರಾಜನಗರ

ಮಾರ್ಟಳ್ಳಿ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ: ಬಿದರಹಳ್ಳಿ ಭಾಗದಲ್ಲಿ ಮುಂದಿನ ವರ್ಷದಿಂದಲೇ ಹೈಸ್ಕೂಲ್

December 26, 2018

ಚಾಮರಾಜನಗರ: ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಆರೋಗ್ಯ ಕೇಂದ್ರ ವನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳು ವುದರ ಜೊತೆಗೆ ಈ ಭಾಗದಲ್ಲಿ (ಬಿದರ ಹಳ್ಳಿ) ಮುಂದಿನ ವರ್ಷದಿಂದಲೇ ಹೈಸ್ಕೂಲ್ ಆರಂಭಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಬಿದರಹಳ್ಳಿಯಲ್ಲಿ ಮಾತನಾಡಿದ ಅವರು, ಮಾರ್ಟಳ್ಳಿ ಗ್ರಾಮದಲ್ಲಿ ಇರುವ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಈಗಾ ಗಲೇ ಕ್ರಮ ಕೈಗೊಳ್ಳಲಾಗಿದೆ. ಬಿದರ ಹಳ್ಳಿಯ ಭಾಗದಲ್ಲಿ ಮುಂದಿನ ವರ್ಷ ದಿಂದಲೇ ಹೈಸ್ಕೂಲ್ ತೆರೆಯಲು ಇಂದೇ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಸುಳವಾಡಿ ದುರಂತದಿಂದ ಮನ ನೊಂದಿ ದ್ದೇನೆ. ಇದಕ್ಕಾಗಿ ಈ ಭಾಗದಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದ್ದೇನೆ. ಈ ಭಾಗದ ಜನರ ಬದುಕಿಗೆ ಶಾಶ್ವತ ಹೊಸ ವಾತಾವರಣ ಕಲ್ಪಿಸುವ ಚಿಂತನೆ ನನ್ನಲ್ಲಿದೆ. ಸರ್ಕಾರದ ಎಲ್ಲಾ ರೀತಿಯ ನೆರವನ್ನು ಕಲ್ಪಿಸುತ್ತೇನೆ. ಯಾರೊಬ್ಬರು ದುರುಪಯೋಗಪಡಿಸಿ ಕೊಳ್ಳದಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ಕಾರ್ಯ ವೈಖರಿಗೆ ಮೆಚ್ಚುಗೆ: ಸುಳವಾಡಿ ದುರಂತದ ಸಂತ್ರಸ್ತರ ನೆರವಿಗಾಗಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರದ್ದು ಮೃದು ಸ್ವಭಾವ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉತ್ತಮ ಕೆಲಸ ಮಾಡಿ ದ್ದಾರೆ ಎಂದು ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ನಿಮ್ಮ ವ್ಯಾಪ್ತಿಯಲ್ಲಿ ಈ ಘಟನೆ ನಿಮಗೆ ಸವಾಲು, ಮುಂದೆಯೂ ಉತ್ತಮವಾಗಿ ಕೆಲಸ ಮಾಡಿ. ಈ ಭಾಗದ ಅಭಿವೃದ್ಧಿಗೆ ಪೈಲಟ್ ಯೋಜನೆ ಯೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿ. ನಾವು ಅದರ ಜಾರಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿ ಬಿ.ಬಿ.ಕಾವೇರಿ ಅವರಿಗೆ ಸೂಚಿಸಿದರು.

ಜನವರಿ 15ರೊಳಗೆ ಮತ್ತೆ ಬರುವೆ…
ಚಾಮರಾಜನಗರ: ಇಂದು ನಾನು ಇಲ್ಲಿಗೆ ಭೇಟಿ ನೀಡಿರು ವುದು ನನಗೆ ಸಮಾಧಾನ ತರಿಸಿಲ್ಲ. ಜನವರಿ 15ರೊಳಗೆ ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಬಿದರಳ್ಳಿಯಲ್ಲಿ ಮಾತನಾಡಿದ ಅವರು, ನಿಮ್ಮೊಂದಿಗೆ (ಸಂತ್ರಸ್ತರೊಂದಿಗೆ) ಮೂರು- ನಾಲ್ಕು ಗಂಟೆಗಳ ಕಾಲ ಇರಬೇಕು ಎಂದು ಅಂದುಕೊಂಡಿದ್ದೆ. ಆದರೆ ಇಂದು ಸಾಧ್ಯ ವಾಗುತ್ತಿಲ್ಲ. ಈ ಭೇಟಿ ನನಗೆ ಸಮಾಧಾನ ತಂದಿಲ್ಲ. ಇದಕ್ಕಾಗಿ ನಿಮ್ಮಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ ಎಂದರು.
ಜನವರಿ 15ರೊಳಗೆ ಇಲ್ಲಿಗೆ ಮತ್ತೊಮ್ಮೆ ಭೇಟಿ ನೀಡುತ್ತೇನೆ. ಬೆಳಿಗ್ಗೆಯಿಂದ ಸಂಜೆ ತನಕ ನಿಮ್ಮೊಂದಿಗೆ ಇದ್ದು, ನಿಮ್ಮ ಕಷ್ಟ-ಸುಖಗಳನ್ನು ಮತ್ತೊಮ್ಮೆ ಕೇಳುತ್ತೇನೆ. ನಿಮ್ಮ ಎಲ್ಲಾ ರೀತಿಯ ಸಹಾಯ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಯಾವು ದನ್ನೂ ಮರೆಯುವುದಿಲ್ಲ ಎಂದು ಸಂತ್ರ ಸ್ತರ ಕುಟುಂಬದ ಸದಸ್ಯರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಯ ನೀಡಿದರು.

ಕಾಮಗೆರೆ ವರದಿ(ಪ್ರಕಾಶ್): ಪೆÇಲೀಸ್ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಯ ಕರ್ತರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ಇಂದಿಲ್ಲಿ ನಡೆಯಿತು. ಬಿದರಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ವಿಷ ಪ್ರಸಾದ ಸಂತ್ರಸ್ತರಿಗೆ ಸಾಂತ್ವನ ಕಾರ್ಯ ಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಿದ್ದರು. ಈ ವೇಳೆ ಪೆÇಲೀಸ್ ಇಲಾಖೆ ಅಧಿಕಾರಿಗಳು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ ಅವರನ್ನು ವೇದಿಕೆಗೆ ಹೋಗಲು ಬಿಡಲಿಲ್ಲ. ಇದರಿಂದ ಅಧ್ಯಕ್ಷರಿಗೆ ಅವ ಮಾನ ಮಾಡಿದ್ದಾರೆ ಎಂದು ಕೆಲ ಕಾಂಗ್ರೆಸ್ ಕಾರ್ಯಕರ್ತರು ಪೆÇಲೀಸ್ ಅಧಿಕಾರಿಗಳ ಜೊತೆಗೆ ಮಾತಿನ ಚಕಮಕಿ ನಡೆಸಿದರು.

ವೇದಿಕೆಗೆ ಹೋಗಲು ಜಿಲ್ಲಾ ಪಂಚಾಯ್ತಿ ಅದ್ಯಕ್ಷರನ್ನು ಬಿಡದೆ ಸತಾಯಿಸಿದ್ದಾರೆ. ಇದರಿಂದ ಅವಮಾನವಾಗಿದೆ ಎಂದು ವಾಗ್ವಾದ ನಡೆಸಿದರು. ಪೊಲೀಸರ ನಡೆ ಯನ್ನು ಖಂಡಿಸಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ, ಮರುಗದಮಣಿ, ಜಾವೇದ್ ಅಹಮದ್, ರಾಜು, ಈಶ್ವರ್, ಉದ್ದನೂರು ಸಿದ್ದರಾಜು, ಕೃಷ್ಣ ಪಕ್ಷದ ಕಾರ್ಯ ಕರ್ತರು ಬೇಸರ ವ್ಯಕ್ತಪಡಿಸಿದರು.

Translate »