ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ
ಚಾಮರಾಜನಗರ

ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

December 26, 2018

ಚಾಮರಾಜನಗರ: ಮಾನವನಿಗೆ ಅಸಾಧ್ಯವಾದದ್ದು ಯಾವುದು ಇಲ್ಲ ಮದ್ಯ ವರ್ಜನ ಶಿಬಿರಾರ್ಥಿಗಳು ದೃಢಸಂಕಲ್ಪ ಮಾಡಿ ಕುಡಿತದಿಂದ ದೂರವಿದ್ದು ಇಂದಿನಿಂದ ಹೊಸ ಜೀವನ ಪ್ರಾರಂಭಿಸಿ ನೆಮ್ಮದಿಯಿಂದ ಬಾಳ ಬೇಕು ಎಂದು ಹರವೆ ವಿರಕ್ತಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಹೇಳಿದರು.

ನಗರದ ಶ್ರೀಶಿವಕುಮಾರಸ್ವಾಮಿ ಭವನ ದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ, ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮದ್ಯ ವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ನಗರಸಭೆ, ರೋಟರಿ ಸಿಲ್ಕ್‍ಸಿಟಿ, ಲಯನ್ಸ್ ಸಂಸ್ಥೆ, ಇನ್ನರ್‍ವೀಲ್ ಮಹಿಳಾ ಸಂಸ್ಥೆ, ಶ್ರೀಶಿವಕುಮಾರಸ್ವಾಮಿ ಭವನ, ಸೂಪರ್ ರಾಯಲ್ ಹಾಲಿಡೇಸ್ ಇಂಡಿಯಾ ಪ್ರೈ.ಲಿ., ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘ, ಧ್ರುವ ನಕ್ಷತ ಸೇವಾ ಸಂಸ್ಥೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ರೆಡ್ ಕ್ರಾಸ್ ಸಂಸ್ಥೆ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಪರಮ ಪೂಜ್ಯ ಪದ್ಮವಿಭೂಷಣ ಶ್ರೀ ಡಾ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗ ಳೊಂದಿಗೆ 7 ದಿನಗಳ ಕಾಲ ಹಮ್ಮಿಕೊಂಡಿ ರುವ 1305ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀ ರ್ವಚನ ಮಾಡಿದರು.

ಆಕಸ್ಮಿಕವಾಗಿ ಕಲಿತ ಕುಡಿತದ ಚಟ ದಿಂದ ನಿಮ್ಮ ಆರೋಗ್ಯ ಹಾಳಾಗುವುದರ ಜತೆಗೆ ನಿಮ್ಮ ಕುಟುಂಬ ಸಂಕಷ್ಟಕ್ಕೊಳಾ ಗುತ್ತದೆ. ಮದ್ಯವರ್ಜನ ಶಿಬಿರದಲ್ಲಿ 89 ಮಂದಿಯ ಕುಡಿತ ಬಿಡಿಸಲು ಸಾವಿರಾರು ಮಂದಿ ಕೆಲಸ ಮಾಡಿದ್ದಾರೆ. ಸಮಾಜ ದಲ್ಲಿ ಕುಡುಕರನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ. ಆದರಿಂದ ಶಿಬಿರಾರ್ಥಿ ಗಳು ಮುಂದಿನ ವರ್ಷದ ನಡೆಯುವ ಮದ್ಯವರ್ಸನ ಶಿಬಿರದಲ್ಲಿ ವೇದಿಕೆ ಮೇಲೆ ನಮ್ಮಂತೆ ಅತಿಥಿಗಳಾಗಿ ಭಾಗವಹಿಸು ವಂತೆ ಬೆಳೆದು ಇನ್ನೊಬ್ಬರಿಗೆ ಮಾದರಿ ಯಾಗುವ ಮಟ್ಟದಲ್ಲಿ ಬೆಳೆಯಬೇಕು. ಮುಂದಿನ ದಿನದಲ್ಲಿ ನಿಮ್ಮ ಜೀವನ ಉತ್ತಮವಾಗಿರಲಿ ಎಂದು ಆಶಿಸಿದರು.
ಜಿಪಂ ಉಪಾಧ್ಯಕ್ಷ ಯೋಗೇಶ್ ಮಾತ ನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃಧ್ದಿ ಯೋಜನೆಯು ಮಾಡುವ ಮದ್ಯ ವರ್ಜನ ಶಿಬಿರದಿಂದ ಜಿಲ್ಲೆಯಲ್ಲಿ ಅನೇ ಕರು ಕುಡಿತ ಬಿಟ್ಟು ನೆಮ್ಮದಿ ಬದುಕು ಸಾಗಿಸುತ್ತಿದ್ದಾರೆ. ಒಂದು ಸರ್ಕಾರ ಮಾಡದ ಕೆಲಸವನ್ನು ಸಂಘ-ಸಂಸ್ಥೆಗಳು ಹಾಗೂ ಸ್ವಾಮೀಜಿಗಳು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ನಿರ್ದೇಶಕ ಸತೀಶ್‍ಶೆಟ್ಟಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃಧ್ದಿ ಯೋಜನೆಯ ಇಂತಹ ಒಳ್ಳೆಯ ಅವಕಾಶವನ್ನು ಸದುಪಯೋಗಪಡಿಸಿ ಕೊಂಡು ಕುಡಿತಬಿಡಬೇಕು. ನಿಮ್ಮ ಬದುಕ ಬಂಗಾರವಾಗಲಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಪಂ ಸದಸ್ಯ ಕೆರೆ ಹಳ್ಳಿನವೀನ್, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ವೆಂಕಟಾಚಲ ಮಾತನಾಡಿದರು.

Translate »