ಅಟಲ್‍ಜಿ ಸ್ಮರಣೆ: ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ
ಹಾಸನ

ಅಟಲ್‍ಜಿ ಸ್ಮರಣೆ: ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ

December 26, 2018

ಅರಸೀಕೆರೆ: ನಗರದ ಸರ್ಕಾರಿ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಅಟಲ್ ಬಿಹಾರಿ ವಾಜಪೇಯಿ ಫೌಂಡೇ ಷನ್ ವತಿಯಿಂದ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಫೌಂಡೇಷನ್ ಅಧ್ಯಕ್ಷ ತೇಜಸ್ ಯಾದಾ ಪುರ ಮಾತನಾಡಿ, ಆಟಲ್‍ಜಿ ವ್ಯಕ್ತಿತ್ವ ಅಳೆಯಲು ಯಾರಿಂದಲೂ ಸಾಧ್ಯವಿಲ್ಲ. ಅವರು ವಿಶ್ವವನ್ನೇ ಒಂದು ಕುಟುಂಬ ಎಂದು ಬಿಂಬಿಸಿ ದೇಶವನ್ನು ವಿಶ್ವದ ಗುರುವಿನ ಸ್ಥಾನಕ್ಕೆ ಕರೆದೊಯ್ಯಲು ತಮ್ಮ ಜೀವಿತಾವಧಿಯಲ್ಲಿ ಪ್ರಯತ್ನ ಮಾಡಿ ದ್ದರು. ವಾಜಪೇಯಿ ಅವರ ರಾಜಕೀಯ ಬೆಳವಣಿಗೆ ಮತ್ತು ಅವರ ಕೊಡುಗೆ, ಆದರ್ಶ ಗಳು ಮತ್ತು ಮಾರ್ಗದರ್ಶನ ಇಂದಿನ ಯುವಜನತೆಯನ್ನು ರಾಜಕಾರಣಕ್ಕೆ ಪ್ರವೇಶಿಸಲು ಪ್ರೇರೇಪಿಸುತ್ತವೆ ಎಂದರು.

ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಜಿ.ವಿ.ಟಿ ಬಸವರಾಜು ಮಾತನಾಡಿ, ರಾಷ್ಟ್ರ ವನ್ನು ಒಗ್ಗೂಡಿಸಬೇಕು ಎಂದು ಅಟಲ್‍ಜಿ ಅವರು ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಿ ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೂ ಸಂಪರ್ಕ ಕಲ್ಪಿಸಿದ್ದರು. ನದಿ ಜೋಡಣೆ ಅವರ ದೊಡ್ಡ ಕನಸಾ ಗಿತ್ತು. ಈ ಕನಸನ್ನು ನನಸು ಮಾಡಲು ದೇಶದ ಮತದಾರರು ವಾಜಪೇಯಿ ಅವರನ್ನು ಮತ್ತೊಮ್ಮೆ ಆಶೀರ್ವದಿಸಿ ಆಯ್ಕೆ ಮಾಡಿದ್ದರೆ ಇಷ್ಟೊತ್ತಿಗೆ ಶೇ.50 ರಷ್ಟು ಬೃಹತ್ ಯೋಜನೆ ಪೂರ್ಣ ಗೊಳ್ಳುತ್ತಿತ್ತು.ಈ ಯೋಜನೆಯಿಂದ ರಾಜ್ಯ ರಾಜ್ಯಗಳ ಮಧ್ಯೆ ನದಿ ನೀರು ಹಂಚಿಕೆ ವಿವಾದ ಅಂತ್ಯಗೊಂಡು ಸಾಮರಸ್ಯದ ಜೀವನ ಸಾಧ್ಯವಾಗುತ್ತಿತ್ತು. ರೈತಾಪಿ ಜನರೂ ನಿಟ್ಟುಸಿರು ಬಿಡುತ್ತಿದ್ದರು ಎಂದು ನೆನಪಿಸಿ ಕೊಂಡರು. ಇಂತಹ ಮಹಾನ್ ಚೇತನದ ಹುಟ್ಟುಹಬ್ಬದಂದು ಅಟಲ್ ಬಿಹಾರಿ ವಾಜಪೇಯಿ ಫೌಂಡೇಷನ್ ಮಾಡುತ್ತಿ ರುವ ಸೇವೆಗಳು ಶ್ಲಾಘನೀಯ ಎಂದರು.

ಫೌಂಡೇಷನ್‍ನ ನಗರ ಘಟಕದ ಅಧ್ಯಕ್ಷ ಮೂರ್ತಿ, ಗ್ರಾಮಾಂತರ ಘಟಕದ ಅಧ್ಯಕ್ಷ ಸುದರ್ಶನ್, ನಗರಸಭೆ ಸದಸ್ಯ ರಾದ ಗಿರೀಶ್, ಮುಖಂಡರಾದ ರಮೇಶ್ ನಾಯ್ಡು, ಎಸ್.ಎಲ್.ಎನ್ ವಿಜಯ ಕುಮಾರ್,ಅಖಿಲೇಶ್ ಇನ್ನಿತರರಿದ್ದರು.

Translate »