ಹೆಚ್.ಡಿ. ರೇವಣ್ಣ-ಎ.ಮಂಜು ಒಂದೇ ನಾಣ್ಯದ ಎರಡು ಮುಖಗಳು: ಜಿ.ದೇವರಾಜೇಗೌಡ ಟೀಕೆ
ಹಾಸನ,: ನಗರದ ಬಿ.ಎಂ. ರಸ್ತೆ ಯಲ್ಲಿರುವ ಜ್ಞಾನಾಕ್ಷಿ ಕಲ್ಯಾಣ ಮಂಟಪದ ಜಾಗ ಅಕ್ರಮವಾಗಿದ್ದು, ಇನ್ನು 7 ದಿನಗಳ ಒಳಗೆ ಕಟ್ಟಡ ನೆಲಸಮಗೊಳಿಸದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ನಾಮ ನಿರ್ದೇಶಿತ ಸದಸ್ಯ ಜಿ.ದೇವರಾಜೇಗೌಡ ಎಚ್ಚರಿಕೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಮತ್ತು ಮಾಜಿ ಸಚಿವ ಎ. ಮಂಜು ಒಂದೇ ನಾಣ್ಯದ ಎರಡು ಮುಖಗಳು ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಜಿಲ್ಲೆಯಲ್ಲಿನ ಹಲವಾರು ಅಕ್ರಮ ಕಟ್ಟಡಗಳನ್ನು ಜಿಲ್ಲಾಡಳಿತ ನೆಲಸಮ ಮಾಡುತ್ತಿರುವುದನ್ನು ಸ್ವಾಗತಿಸುತ್ತೇವೆ. ಅದೇ ರೀತಿ ಬಿ.ಎಂ. ರಸ್ತೆಯಲ್ಲಿರುವ ಜನತಾ ಸೇವಾ ಟ್ರಸ್ಟ್ ಈಗ ಜ್ಞಾನಾಕ್ಷಿ ಕಲ್ಯಾಣ ಮಂಟಪವಾಗಿದೆ. ಇದು ಅಕ್ರಮ ಕಟ್ಟಡ. ಈ ಕಟ್ಟಡ ವನ್ನೂ ಜಿಲ್ಲಾಡಳಿತ ನೆಲಸಮಗೊಳಿಸಲಿ ಎಂದು ಒತ್ತಾಯಿ ಸಿದರು. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎ. ಮಂಜು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೇ ಹಾಸನ ಜಿಲ್ಲೆ ಈ ಸ್ಥಿತಿಗೆ ಬರುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನತಾ ಸೇವಾ ಟ್ರಸ್ಟ್ ಬೇನಾಮಿ ಹೆಸರಿ ನಲ್ಲಿದೆ. ಈ ಜಾಗದಲ್ಲಿ ಯಾವ ಉದ್ದೇಶ ಕ್ಕಾಗಿ ಬೃಹತ್ ಕಟ್ಟಡ ನಿರ್ಮಿಸಲಾಗಿದೆ ಎಂದು ಪ್ರಶ್ನಿಸಿದ ಅವರು, ಸ್ಥಳೀಯ ಪ್ರಾಧಿಕಾರ ಮತ್ತು ನಗರಸಭೆಯಿಂದ ಅನುಮತಿ ಪತ್ರ ಮತ್ತು ಪರವಾನಿಗೆ ಸಿಕ್ಕಿದ್ದರೆ ಆ ದಾಖಲೆಗಳನ್ನೂ ಸಾರ್ವಜನಿಕರ ಮುಂದೆ ಬಹಿರಂಗ ಪಡಿಸಲಿ. ಜಾಗದ ವಿಸ್ತಿರ್ಣ ಎಷ್ಟು ಎಂಬುದನ್ನು ಜಿಲ್ಲಾಧಿಕಾರಿ ಗಳು ಬಹಿರಂಗಪಡಿಸಲಿ. ನಿಯಮಾನುಸಾರ ರಾಜಕಾಲುವೆ ಮೇಲೆ ಕಟ್ಟಡ ನಿರ್ಮಾಣ ಮಾಡಲು ಇವರಿಗೆ ಅನುಮತಿ ನೀಡಿದವರಾರು? ಸಚಿವ ರೇವಣ್ಣ ಅವರ ಕುಟುಂಬಕ್ಕೆ ಮಾತ್ರ ವಿಶೇಷ ರಿಯಾಯ್ತಿ ಇದೆಯಾ ? ಇವರ ಕುಟುಂಬವನ್ನು ಹೊರತು ಪಡಿಸಿ ಬೇರೆ ಯಾರಾದರೂ ಅಕ್ರಮ ಕಟ್ಟಡ ನಿರ್ಮಾಣ ಮಾಡಿ ದರೆ ನೆಲಸಮ ಮಾಡಿಸುತ್ತಾರೆ. ಹಾಗೆಯೇ ಜ್ಞಾನಾಕ್ಷಿ ಕಲ್ಯಾಣ ಮಂಟಪವನ್ನೂ ನೆಲಸಮಗೊಳಿಸಲಿ ಎಂದು ಆಗ್ರಹಿಸಿದರು.
.