ಶ್ರೀರಂಗಪಟ್ಟಣ: ಪಟ್ಟಣದ ಶಾರದಾ ವಿಲಾಸ ಕಾಲೇಜಿನಲ್ಲಿ ಸೆ. 30ರಂದು ಬೆಳಿಗ್ಗೆ 10ಗಂಟೆಗೆ ಕಾಲೇಜಿನ ಶತಮಾನೋತ್ಸವದ ಅಂಗವಾಗಿ ಪ್ರಿಯದರ್ಶನ ಸಾಂಸ್ಕøತಿಕ ವೇದಿಕೆಯಿಂದ ಕಾದಂಬರಿಕಾರ ಡಾ.ಎಸ್‍ಎಲ್.ಭೈರಪ್ಪ ಅವರ ‘ಉತ್ತರ ಕಾಂಡ’ ಕಾದಂಬರಿಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಖ್ಯಾತ ಅಂಕಣಕಾರ್ತಿ ಶ್ರೀಮತಿ ಸಹನಾ ವಿಜಯಕುಮಾರ್, ಖ್ಯಾತ ಚಿಂತಕ ಡಾ.ಗಿರೀಶ್ ಭಟ್, ಅಜಕ್ಕಳ, ವಿಮರ್ಶಕ ವಿದ್ವಾನ್ ಗ.ನಾ.ಭಟ್ಟ, ಕಾದಂಬರಿಕಾರ್ತಿ ಶ್ರೀಮತಿ ಆಶಾ ರಘು ಅವರು ಪ್ರಬಂಧ ಮಂಡಿಸಲಿದ್ದಾರೆ. ಕುವೆಂಪು ಭಾಷಾ ಭಾರತೀ ಮಾಜಿ ಚೇರ್‍ಮನ್ ಡಾ.ಪ್ರಧಾನ ಗುರುದತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಭೈರಪ್ಪ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಒಂದು ವಾರ ಮುಂಚಿತವಾಗಿ ಪ್ರಿಯದರ್ಶನ ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಗ.ನಾ.ಭಟ್ಟ ಹಾಗೂ ಕಾರ್ಯದರ್ಶಿ ಗೀತಾ ಎಂ.ಹೆಗಡೆ ಅವರಲ್ಲಿ ತಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಹೆಸರು ನೋಂದಾ ಯಿಸಿಕೊಳ್ಳಬೇಕು. ಮಾಹಿತಿಗೆ ಮೊ. 9482113818, 9972660177 ಸಂಪರ್ಕಿಸಿ.